ಕರ್ನಾಟಕ

karnataka

By

Published : Jan 12, 2021, 4:45 PM IST

ETV Bharat / business

ಕೊರೊನಾಗೆ ಭಾರತದ ಲಸಿಕೆ ಸಂಜೀವಿನಿ.. 'ವಿದೇಶಗಳಿಗೆ ರಫ್ತು ಮಾಡಲು ಕೆಲ ವಾರಗಳಲ್ಲಿ ನಿರ್ಧಾರ'

ನಮ್ಮ ಸ್ವಂತ ಬಳಕೆ ಏನಾಗಲಿದೆ ಎಂಬುದರ ಕುರಿತು ನಾವು ಶೀಘ್ರದಲ್ಲೇ ಸ್ಪಷ್ಟತೆ ಪಡೆಯುತ್ತೇವೆ. ನಮ್ಮ ಜಾಗತಿಕ ಪಾತ್ರವನ್ನು ನಾವು ಸಮರ್ಥವಾಗಿ ಉಳಿಸಿಕೊಳ್ಳುತ್ತೇವೆ. ಭಾರತದಲ್ಲಿ ಲಸಿಕೆ ನೀಡಿಕೆ ಪ್ರಾರಂಭಿಸುತ್ತೇವೆ. ನಮ್ಮದೆಯಾದ ಸವಾಲುಗಳಿವೆ..

Jaishankar
ಜೈಶಂಕರ್

ನವದೆಹಲಿ :ಮುಂದಿನ ಕೆಲವು ವಾರಗಳಲ್ಲಿ ಕೊರೊನಾ ವೈರಸ್ ಲಸಿಕೆಗಳ ರಫ್ತು ಕುರಿತು ಭಾರತಕ್ಕೆ ನಿರ್ಧಾರ ತೆಗೆದುಕೊಳ್ಳಲಿದೆ. ವಿದೇಶದಲ್ಲಿರುವ ಸರ್ಕಾರಗಳು ಸರಬರಾಜು ಹೆಚ್ಚಿಸಲು ಪ್ರಯತ್ನಿಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ.

ಲಸಿಕೆಗಳು ಮತ್ತು ಜೆನೆರಿಕ್ ಔಷಧಿಗಳನ್ನು ವಿಶ್ವದ ಅತಿದೊಡ್ಡ ಉತ್ಪಾದಕರಲ್ಲಿ ಒಂದಾದ ಭಾರತವು ಕೋವಿಡ್-19 ಲಸಿಕೆಗಳ ಪ್ರಮುಖ ಉತ್ಪಾದನಾ ಕೇಂದ್ರವಾಗಲಿದೆ. ತಮ್ಮ ನಾಗರಿಕರಿಗೆ ಲಸಿಕೆಗಳನ್ನು ತಲುಪಿಸುವ ಬಗ್ಗೆ ವಿದೇಶಿ ಸರ್ಕಾರಗಳ ಆತಂಕವನ್ನು ಭಾರತ ಅರ್ಥಮಾಡಿಕೊಂಡಿದೆ ಎಂದು ಸಮ್ಮೇಳನ ಒಂದರಲ್ಲಿ ಹೇಳಿದರು.

ಇದನ್ನೂ ಓದಿ: ಜಗತ್ತಿನ ಪವರ್​ಫುಲ್​ ಪಾಸ್​​ಪೋರ್ಟ್​ಗಳಲ್ಲಿ ಸಣ್ಣ ಜಪಾನ್​ಗೆ ಅಗ್ರಸ್ಥಾನ : ಭಾರತ ಯಾವ ಸ್ಥಾನದಲ್ಲಿದೆ?

ಕಳೆದ ವಾರ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು, ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಸಾಗಣೆ ತ್ವರಿತಗೊಳಿಸುವಂತೆ ಕೋರಿದ್ದರು. ಇದನ್ನು ವಿಶ್ವದ ಅತಿದೊಡ್ಡ ಲಸಿಕೆಗಳನ್ನು ಉತ್ಪಾದಿಸುವ ಸೆರೆಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.

ನಮ್ಮ ಸ್ವಂತ ಬಳಕೆ ಏನಾಗಲಿದೆ ಎಂಬುದರ ಕುರಿತು ನಾವು ಶೀಘ್ರದಲ್ಲೇ ಸ್ಪಷ್ಟತೆ ಪಡೆಯುತ್ತೇವೆ. ನಮ್ಮ ಜಾಗತಿಕ ಪಾತ್ರವನ್ನು ನಾವು ಸಮರ್ಥವಾಗಿ ಉಳಿಸಿಕೊಳ್ಳುತ್ತೇವೆ. ಭಾರತದಲ್ಲಿ ಲಸಿಕೆ ನೀಡಿಕೆ ಪ್ರಾರಂಭಿಸುತ್ತೇವೆ. ನಮ್ಮದೆಯಾದ ಸವಾಲುಗಳಿವೆ ಎಂದು ಜೈಶಂಕರ್ ಹೇಳಿದರು.

ಹಲವು ದೇಶಗಳು ನಮ್ಮೊಂದಿಗೆ ಸಂಪರ್ಕದಲ್ಲಿವೆ. ನಾವು ಅವರಿಗೆ ಇದೊಂದು ತಿಂಗಳು ನೋಡಿ ಎಂದು ಹೇಳುತ್ತಿದ್ದೇವೆ. ಉತ್ಪಾದನೆಯು ಈಗ ಹೊರ ಬರುತ್ತಿದೆ. ಒಂದು ನಿರ್ದಿಷ್ಟ ಪ್ರಮಾಣದ ಉತ್ಪಾದನೆ ನಡೆಯುತ್ತಿದೆ ಎಂದರು.

ABOUT THE AUTHOR

...view details