ನವದೆಹಲಿ:2019ರ ಮಾರ್ಚ್ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ಅತಿಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಡಿಐ) ಹರಿದು ಬಂದಿದೆ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತಕ್ಕೆ ಹರಿದು ಬಂತು ಕೋಟಿ ಕೋಟಿ ಡಾಲರ್ನಷ್ಟು ಎಫ್‌ಡಿಐ
ಪ್ರಸಕ್ತ ಹಣಕಾಸು ವರ್ಷದಲ್ಲಿ (2018-19) ಭಾರತಕ್ಕೆ 64.37 ಬಿಲಿಯನ್ ಡಾಲರ್ನಷ್ಟು (4.43 ಲಕ್ಷ ಕೋಟಿ) ಎಫ್ಡಿಐನ ಒಳಹರಿ ದಾಖಲಾಗಿದೆ. ಇತ್ತೀಚಿನ ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯ ಪ್ರಗತಿಯಿಂದ ವಿದೇಶಿ ಒಳಹರಿವಿನ ಸಂಪನ್ಮೂಲಗಳ ಹೇರಳವಾಗುತ್ತಿದೆ ಎಂದಿದೆ.

ಕಳೆದ ವರ್ಷಗಳಿಂದ ವಾಣಿಜ್ಯ ಮತ್ತು ಕೈಗಾರಿಕ ಕ್ಷೇತ್ರಗಳಲ್ಲಿ ತೆಗೆದುಕೊಳ್ಳುವ ಮಹತ್ವದ ನಿರ್ಧಾರದಿಂದಾಗಿ ಎಪ್ಡಿಐನಲ್ಲಿ ಏರಿಕೆ ಆಗುತ್ತಿದೆ. 2016-17ರ ಆರ್ಥಿಕ ವರ್ಷದಲ್ಲಿ 60.98 ಬಿಲಿಯನ್ ಡಾಲರ್ ಎಫ್‌ಡಿಐ ಇದುವರೆಗಿನ ಸಾರ್ವಕಾಲಿಕೆ ದಾಖಲೆ ಆಗಿತ್ತು. 2014-15ರಲ್ಲಿ ಒಳಹರಿವಿನ ಪ್ರಮಾಣ 45.14 ಬಿಲಿಯನ್ ಡಾಲರ್ನಷ್ಟಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಹೇಳಿದೆ.