ದಾವೋಸ್:ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಸಂಗ್ರಹಿಸಿದ ನೂತನ ಸಾಮಾಜಿಕ ಚಲನಶೀಲತೆ ಸೂಚ್ಯಂಕದಲ್ಲಿ 82 ದೇಶಗಳ ಪೈಕಿ ಭಾರತ 76ನೇ ಸ್ಥಾನದಲ್ಲಿದ್ದು, ಡೆನ್ಮಾರ್ಕ್ ಅಗ್ರಸ್ಥಾನ ಕಾಯ್ದುಕೊಂಡಿದೆ.
ಡಬ್ಲ್ಯುಇಎಫ್‌ನ 50ನೇ ವಾರ್ಷಿಕ ಸಭೆಯಲ್ಲಿ ಬಿಡುಗಡೆಯಾದ ಈ ಸೂಚ್ಯಂಕದ ವರದಿ, ಪ್ರತಿ ವ್ಯಕ್ತಿಗೆ ಒಂದೇ ರೀತಿಯ ಅವಕಾಶವಿರುವ ಸಮಾಜ ರಚನೆಯ ನಿಯತಾಂಕಗಳ ಮೇಲೆ ಈ ಸೂಚ್ಯಂಕ ಅಳೆಯಲಾಗಿದೆ. ಉತ್ತಮ ಸಾಮಾಜಿಕ ಚಲನಶೀಲತೆಯು ಸಾಮಾಜಿಕ ಆರ್ಥಿಕ ಹಿನ್ನೆಲೆಯ ಹೊರತಾಗಿಯೂ ಜನರು ತಮ್ಮ ಜೀವನದಲ್ಲಿ ಉತ್ತಮ ಸಾಮರ್ಥ್ಯ ಪೂರೈಸಿಕೊಳ್ಳುವಂತಾಗಬೇಕು.
ಆದಾಯ ಅಸಮಾನತೆಯ ಪ್ರಮುಖ ಚಾಲಕ ಶಕ್ತಿಯಾದ ಸಾಮಾಜಿಕ ಚಲನಶೀಲತೆಯನ್ನು ಶೇ 10ರಷ್ಟು ಹೆಚ್ಚಿಸಿದರೆ ಸಾಮಾಜಿಕ ಒಗ್ಗಟ್ಟಿಗೆ ಅನುಕೂಲವಾಗುತ್ತದೆ. 2030ರ ವೇಳೆಗೆ ವಿಶ್ವದ ಆರ್ಥಿಕತೆಯಲ್ಲಿ ಶೇ 5ರಷ್ಟು ಏರಿಕೆಯಾಗುತ್ತದೆ ಎಂದು ಡಬ್ಲ್ಯುಇಎಫ್ ಹೇಳಿದೆ.
ಕೆಲವೇ ಆರ್ಥಿಕತೆಗಳಿಗೆ ಮಾತ್ರ ಸಾಮಾಜಿಕ ಚಲನಶೀಲತೆಯನ್ನು ಬೆಳೆಸುವ ಸರಿಯಾದ ಪರಿಸ್ಥಿತಿಗಳಿವೆ ಎಂದು ವಿಶ್ವ ಆರ್ಥಿಕ ವೇದಿಕೆ ತನ್ನ ವರದಿಯಲ್ಲಿ ಸೂಚಿಸಿದೆ.
ಐದು ಪ್ರಮುಖ ಆಯಾಮಗಳಲ್ಲಿ 10 ಅಂಶಗಳನ್ನು ವರದಿಯಲ್ಲಿ ಪರಿಗಣಿಸಿದೆ. ಆರೋಗ್ಯ; ಶಿಕ್ಷಣ (ಪ್ರವೇಶ, ಗುಣಮಟ್ಟ ಮತ್ತು ಸಮಾನತೆ), ತಂತ್ರಜ್ಞಾನ; ಕೆಲಸ (ಅವಕಾಶ, ವೇತನ ಮತ್ತು ಷರತ್ತುಗಳು), ರಕ್ಷಣೆ ಹಾಗೂ ಸಂಸ್ಥೆಗಳು (ಸಾಮಾಜಿಕ ಸಂರಕ್ಷಣೆ ಮತ್ತು ಅಂತರ್ಗತ ಸಂಸ್ಥೆಗಳು)- ನ್ಯಾಯಯುತ ವೇತನ, ಸಾಮಾಜಿಕ ರಕ್ಷಣೆ ಮತ್ತು ನಿರಂತರ ಕಲಿಕೆಯು ಜಾಗತಿಕವಾಗಿ ಸಾಮಾಜಿಕ ಚಲನಶೀಲತೆಗೆ ದೊಡ್ಡ ಸವಾಲಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದಿದೆ.
ಭಾರತ ಇತರ 82 ಆರ್ಥಿಕತೆಗಳಲ್ಲಿ 76ನೇ ಸ್ಥಾನದಲ್ಲಿದೆ. ನಿರಂತರ ಕಲಿಕೆಯಲ್ಲಿ 41ನೇ ಮತ್ತು ಕೆಲಸದ ಪರಿಸ್ಥಿತಿಗಳಲ್ಲಿ 53ನೇ ಸ್ಥಾನದಲ್ಲಿದೆ. ಸುಧಾರಣೆಯ ಕ್ಷೇತ್ರಗಳಲ್ಲಿ ಸಾಮಾಜಿಕ ರಕ್ಷಣೆ 76ನೇ ಸ್ಥಾನ ಮತ್ತು ನ್ಯಾಯಯುತ ವೇತನ ವಿತರಣೆಯಲ್ಲಿ 79ನೇ ಸ್ಥಾನ ಪಡೆದಿದೆ.
ಸಾಮಾಜಿಕ ಚಲನಶೀಲತೆ ವರದಿಯು ಜಾಗತಿಕ ಸಾಮಾಜಿಕ ಚಲನಶೀಲತೆ ಸೂಚ್ಯಂಕದಲ್ಲಿ 82 ದೇಶಗಳ ಪೈಕಿ ಬೆರಳೆಣಿಕೆಯಷ್ಟು ರಾಷ್ಟ್ರಗಳು ಮಾತ್ರ ಸಾಮಾಜಿಕ ಚಲನಶೀಲತೆಯನ್ನು ಬೆಳೆಸಲು ಸರಿಯಾದ ಷರತ್ತುಗಳನ್ನು ಹೊಂದಿವೆ ಎಂಬುದನ್ನು ವರದಿಯಲ್ಲಿ ಕಂಡುಬಂದಿದೆ.
ಈ ಸೂಚ್ಯಂಕದಲ್ಲಿ ಡೆನ್ಮಾರ್ಕ್ 85 ಅಂಕಗಳಿಂದ ಅಗ್ರಸ್ಥಾನದಲ್ಲಿದ್ದರೇ ನಾರ್ವೆ, ಫಿನ್ಲ್ಯಾಂಡ್, ಸ್ವಿಡನ್, ಐಸ್ಲ್ಯಾಂಡ್, ನೆದರ್ಲ್ಯಾಂಡ್, ಸಿಟ್ಜರ್ಲ್ಯಾಂಡ್, ಆಸ್ಟ್ರೀಯಾ, ಬೆಲ್ಜಿಯಂ ಮತ್ತು ಲಕ್ಸಂಬರ್ಗ್ ಅಗ್ರ 10ರಲ್ಲಿವೆ. ಜಿ7 ರಾಷ್ಟ್ರಗಳ ಪೈಕಿ ಜರ್ಮನ್ 11, ಫ್ರಾನ್ಸ್ 12, ಕೆನಡಾ 14, ಜಪಾನ್ 15, ಇಂಗ್ಲೆಂಡ್ 16, ಅಮೆರಿಕ 27 ಹಾಗೂ ಇಟಲಿ 34ನೇ ಸ್ಥಾನದಲ್ಲಿವೆ. ಬ್ರಿಕ್ಸ್ ರಾಷ್ಟ್ರಗಳ ಪೈಕಿ ರಷ್ಯಾ 64 ಅಂಕಗಳಿಂದ 39ನೇ ಸ್ಥಾನದಲ್ಲಿದ್ದು, ನಂತರ ಚೀನಾ 45, ಬ್ರೆಜಿಲ್ 60, ಭಾರತ 76 ಹಾಗೂ ದಕ್ಷಿಣ ಆಫ್ರಿಕಾ 77ನೇ ಸ್ಥಾನದಲ್ಲಿವೆ.