ಬ್ರಸೆಲ್ಸ್(ಬೆಲ್ಜಿಯಂ): ಇಂಟರ್ನ್ಯಾಷನಲ್ ಟ್ರೇಡ್ ಯೂನಿಯನ್ ಕಾನ್ಫಿಡರೇಷನ್ (ಐಟಿಯುಸಿ) ಜಾಗತಿಕ ಹಕ್ಕುಗಳ ಸೂಚ್ಯಂಕದ ಏಳನೇ ಆವೃತ್ತಿ ವರದಿ ಪ್ರಕಟಿಸಿದ್ದು, 144 ದೇಶಗಳಲ್ಲಿ ದುಡಿಯುವ ಜನರಿಗೆ ಕೆಟ್ಟ ದೇಶಗಳ ಶ್ರೇಣಿಯಲ್ಲಿ ಅಗ್ರ 10 ಕಳಪೆ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಸೇರಿದೆ.
ಈ 10 ರಾಷ್ಟ್ರಗಳ ಸಾಲಿನಲ್ಲಿ ಬಾಂಗ್ಲಾದೇಶ, ಬ್ರೆಜಿಲ್, ಕೊಲಂಬಿಯಾ, ಈಜಿಪ್ಟ್, ಹೊಂಡುರಾಸ್, ಕಝಕಿಸ್ತಾನ್, ಫಿಲಿಪೈನ್ಸ್, ಟರ್ಕಿ ಮತ್ತು ಜಿಂಬಾಬ್ವೆ ಸೇರಿವೆ. ಪ್ಯಾಲೆಸ್ತೇನ್, ಸಿರಿಯಾ, ಯೆಮೆನ್ ಮತ್ತು ಲಿಬಿಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಕಾರ್ಮಿಕರ ಪ್ರಾತಿನಿಧ್ಯ ಮತ್ತು ಯೂನಿಯನ್ ಹಕ್ಕುಗಳ ಅತ್ಯಂತ ಹಿಂಜರಿತದ ಪ್ರದೇಶಗಳಾಗಿವೆ. ಏಳು ವರ್ಷಗಳಿಂದ ದುಡಿಯುತ್ತಿರುವ ಜನರಿಗೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಕೆಲ ರಾಷ್ಟ್ರಗಳು ವಿಶ್ವದ ಅತ್ಯಂತ ಕೆಟ್ಟ ದೇಶಗಳು ಎಂದು ಸೂಚಿಸಿದೆ.