ಕರ್ನಾಟಕ

karnataka

ETV Bharat / business

ಒಂದೇ ವರ್ಷದಲ್ಲಿ ಭಾರತದಿಂದ ಕಾಲ್ಕಿತ್ತಿದ್ದಾರೆ 5,000 ಮಿಲಿಯನೇರ್​ಗಳು..! - undefined

ಕಳೆದ ವರ್ಷ ವಿವಿಧ ರಾಷ್ಟ್ರಗಳಿಂದ ಹೊರಹೋದ ಕೋಟ್ಯಾಧಿಪತಿ ಸಾಲಿನಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಸುಮಾರು 5 ಸಾವಿರ ಮಿಲಿಯನೇರ್​ಗಳು ಅಥವಾ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು (ಎಚ್​ಎನ್​​ಡಬ್ಲ್ಯುಐಎಸ್​) ದೇಶ ಬಿಟ್ಟು ಹೊರನಡೆದಿದ್ದಾರೆ.

ಸಾಂದರ್ಭಿಕ ಚಿತ್ರ

By

Published : May 15, 2019, 5:29 PM IST

ನವದೆಹಲಿ: ಸುಲಭ ವ್ಯವಹಾರ ನಡೆಸುವ (ಈಸ್​​​​ ಆಫ್ ಡೂಯಿಂಗ್ ಬ್ಯುಸಿನೆಸ್) ರಾಂಕಿಂಗ್​ನಲ್ಲಿ ಜಿಗಿತ ಮತ್ತು ಜಗತ್ತಿನ ಅತ್ಯಂತ ವೇಗದ ಆರ್ಥಿಕತೆಯ ಶ್ರೇಯಾಂಕ ಹೊಂದಿದ ಹೊರತಾಗಿಯೂ ಭಾರತದಿಂದ ಮಿಲಿಯನೇರ್​ಗಳು ಹಿಮ್ಮುಖವಾಗುತ್ತಿದ್ದಾರೆ.

ಕಳೆದ ವರ್ಷ ವಿವಿಧ ರಾಷ್ಟ್ರಗಳಿಂದ ಹೊರಹೋದ ಕೋಟ್ಯಾಧಿಪತಿ ಸಾಲಿನಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಸುಮಾರು 5 ಸಾವಿರ ಮಿಲಿಯನೇರ್​ಗಳು ಅಥವಾ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು (ಎಚ್​ಎನ್​​ಡಬ್ಲ್ಯುಐಎಸ್​) ದೇಶ ಬಿಟ್ಟು ಹೊರನಡೆದಿದ್ದಾರೆ. ದೇಶದಲ್ಲಿರುವ ಒಟ್ಟು ಮಿಲಿಯನೇರ್​ಗಳಲ್ಲಿ ಇದು ಶೇ 2ರಷ್ಟಿದೆ ಎಂದು 2019ರ ಆಫ್ರ್​ಏಷ್ಯಾ ಬ್ಯಾಂಕ್ ಮತ್ತು ರಿಸರ್ಚ್​ ಫರ್ಮ್​ ನ್ಯೂ ವರ್ಲ್ಡ್ ವೆಲ್ತ್​ ಅಧ್ಯಯನವನ್ನು ಉಲ್ಲೇಖಿಸಿ ಜಾಗತಿಕ ವಲಸೆ ವಿಮರ್ಶೆ (ಗ್ಲೋಬಲ್​ ಮೈಗ್ರೇಷನ್ ರಿವ್ಯೂವ್: ಜಿಡಬ್ಲ್ಯೂಎಂಆರ್​​) ಹೇಳಿದೆ.

2018ರಲ್ಲಿ ಭಾರತದಿಂದ ಅತಿಹೆಚ್ಚು ಎಚ್​​ಎನ್​ಡಬ್ಲ್ಯುಐಎಸ್​ ಹೊರ ಹೋಗಿದ್ದಾರೆ. ಐರೋಪ್ಯ ಒಕ್ಕೂಟದಲ್ಲಿ ರಾಜಕೀಯ ಸ್ಥಿತ್ಯಂತರದ ಬ್ರಿಕ್ಸಿಟ್​ ಸಮಸ್ಯೆ ಎದುರಿಸುತ್ತಿರುವ ಇಂಗ್ಲೆಂಡ್​ ಅನ್ನು ಭಾರತ ಹಿಂದಿಕ್ಕಿದೆ.

ಕಳೆದ ಮೂರು ದಶಕದಲ್ಲಿ ಇಂಗ್ಲೆಂಡ್​ ಅತಿಹೆಚ್ಚು ಪ್ರಮಾಣದಲ್ಲಿಮಿಲಿಯನೇರ್ಗಳನ್ನು ಆಕರ್ಷಿಸಿತ್ತು. ಈ ಎರಡು ವರ್ಷಗಳಲ್ಲಿ ಬ್ರಿಕ್ಸಿಟ್​ನ ರಾಜಕೀಯ ಪ್ರಕ್ಷುಬ್ಧತೆಗೆ ಸಿಲುಕಿದ್ದು, ಎನ್​ಎನ್​​ಡಬ್ಲ್ಯುಐಎಸ್ ಹೆಚ್ಚಿನ ಸಂಖ್ಯೆಯಲ್ಲಿ ಆ ರಾಷ್ಟ್ರದಿಂದ ಹೊರ ನಡೆದಿದ್ದಾರೆ.

ಅಮೆರಿಕದೊಂದಿಗೆ ವಾಣಿಜ್ಯ ಸಮರಕ್ಕೆ ಇಳಿದಿರುವ ನೆರೆಯ ಚೀನಾ, ಇದರಲ್ಲಿ ನಂ.1 ಪಟ್ಟ ಪಡೆದಿದೆ. ಕಳೆದ ವಾರ ಅಮೆರಿಕ ಚೀನಾ ಸರಕುಗಳ ಮೇಲೆ ಆಮದು ಸುಂಕ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದ್ದು, ವಿಶ್ವದ 2ನೇ ಅತಿದೊಡ್ಡ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವ್ಯವಹಾರಗಳು ಹದಗೆಡಲಿವೆ ಎಂಬುದನ್ನು ಎಚ್​ಎನ್​​ಡಬ್ಲ್ಯುಐಎಸ್ ಅರಿತಿದ್ದಾರೆ. ಹೀಗಾಗಿ, ಈ ದೇಶದಿಂದ ಮಿಲಿಯನೇರ್​ಗಳು ಒಬ್ಬೊಬ್ಬರಾಗಿ ಹೊರ ನಡೆಯುತ್ತಿದ್ದಾರೆ.

ಭಾರತದ ಬಹುಕಾಲದ ಸ್ನೇಹಿತ ರಾಷ್ಟ್ರ ರಷ್ಯಾ, ಎರಡನೇ ಸ್ಥಾನ ಪಡೆದಿದೆ. ರಷ್ಯಾ ಇತ್ತೀಚೆಗೆ ತನ್ನ ಆರ್ಥಿಕ ನೀತಿಯಲ್ಲಿ ಅನೇಕ ಕಠಿಣ ನಿರ್ಬಂಧಗಳನ್ನು ಹೇರುತ್ತಿದೆ. ಹೀಗಾಗಿ, ಅದು ಭಾರತ- ಚೀನಾ ನಡುವಿನ ಸ್ಥಾನದಲ್ಲಿದೆ. ಉಳಿದಂತೆ ಅತಿಕಡಿಮೆ ಎಚ್​ಎನ್​​ಡಬ್ಲ್ಯುಐಎಸ್ ಹೊರ ಹೋದ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾ ಮೊದಲೆರಡು ಸ್ಥಾನದಲ್ಲಿವೆ.

ಭಾರತದ ಆರ್ಥಿಕತೆಗೆ ಮತ್ತೊಂದು ವಿಶ್ಲೇಷಣಾತ್ಮಕ ಅಪಾಯ ಎದುರಾಗಲಿದೆ ಎಂಬುದನ್ನು ಈ ವರದಿ ಸೂಚಿಸಿದೆ. ದೇಶದ ಒಟ್ಟು ಸಂಪತ್ತಿನಲ್ಲಿ ಅರ್ಧದಷ್ಟು ಎಚ್​ಎನ್​​ಡಬ್ಲ್ಯುಐಎಸ್​ ಹಿಡಿತದಲ್ಲಿದೆ. ವಿಶ್ವದ ಎಚ್​ಎನ್​​ಡಬ್ಲ್ಯುಐಎಸ್ ಪ್ರಮಾಣ ಶೇ 36ರಷ್ಟು ಇದ್ದರೇ ಭಾರತದ ಪ್ರಮಾಣ ಶೇ 48ರಷ್ಟಿದೆ. ಆದರೂ ಭಾರತದ ಒಟ್ಟು ಸಂಪತ್ತು ಮುಂದಿನ ಒಂದು ದಶಕದಲ್ಲಿ ಯಥೇಚ್ಛವಾಗಿ ಬೆಳೆಯಲಿದೆ ಎಂದು ಜಿಡಬ್ಲ್ಯೂಎಂಆರ್​ ಹೇಳಿದೆ.

For All Latest Updates

TAGGED:

ABOUT THE AUTHOR

...view details