ನವದೆಹಲಿ:2024 - 25ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ನೆರವಾಗಲು ದೇಶಕ್ಕೆ ಹೆಚ್ಚಿನ ಜಾಗತಿಕ ಗಾತ್ರದ ಬ್ಯಾಂಕ್ಗಳ ಅಗತ್ಯವಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ಹೇಳಿದ್ದಾರೆ.
ಟಾಪ್ 100 ಜಾಗತಿಕ ಬ್ಯಾಂಕ್ಗಳ ಪಟ್ಟಿಯಲ್ಲಿ ಭಾರತದ ಕೇವಲ ಒಂದು ಬ್ಯಾಂಕ್ ಮಾತ್ರವಿದೆ. ಗಾತ್ರದಲ್ಲಿ ಚಿಕ್ಕದಾದ ದೇಶವು ಅಂತಹ ಹೆಚ್ಚಿನ ಬ್ಯಾಂಕುಗಳನ್ನು ಹೊಂದಿದೆ ಎಂಬ ಅಂಶವನ್ನು ಅವರು ತಳ್ಳಿಹಾಕಿದರು. 55ನೇ ಸ್ಥಾನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜಾಗತಿಕ ಟಾಪ್ 100 ಪಟ್ಟಿಯಲ್ಲಿರುವ ಭಾರತದ ಏಕೈಕ ಬ್ಯಾಂಕ್ ಆಗಿದೆ. ಚೀನಾದ 18 ಬ್ಯಾಂಕ್ಗಳು ಹಾಗೂ ಅಮೆರಿಕದ12 ಬ್ಯಾಂಕ್ಗಳು ಟಾಪ್ 100ರಲ್ಲಿವೆ.
ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿದೆ. ಆದ್ದರಿಂದ, ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ತನ್ನ ಆರ್ಥಿಕತೆಯ ಗಾತ್ರದ ಅನುಪಾತದಲ್ಲಿದ್ದರೆ, ಜಾಗತಿಕ ಅಗ್ರ ನೂರರಲ್ಲಿ ಆರು ಬ್ಯಾಂಕ್ಗಳನ್ನು ಹೊಂದಿರುವ ದಕ್ಷಿಣ ಕೊರಿಯಾ ಇರುವಲ್ಲಿ ಭಾರತ ಇರಬೇಕಿತ್ತು. ಆದರೆ ಇದಕ್ಕೆ ವಿರುದ್ಧವಾಗಿ, ಜಾಗತಿಕ ಅಗ್ರ ನೂರರಲ್ಲಿ ಭಾರತದ ಕೇವಲ ಒಂದು ಬ್ಯಾಂಕ್ ಇದೆ ಎಂದು ಒಪ್ಪಿಕೊಂಡರು.