ಕರ್ನಾಟಕ

karnataka

ETV Bharat / business

ಉದ್ಯಮಿ ಸ್ನೇಹಿ ಭಾರತ: ಟಾಪ್​ 50 ರತ್ತ ಸಾಗಲು ಮೋದಿಗೆ ವಿಶ್ವ ಬ್ಯಾಂಕ್​ ಟಿಪ್ಸ್​ - Simeon Djankov

ವರ್ಲ್ಡ್​ ಬ್ಯಾಂಕ್ ಇಂದು ಬಿಡುಗಡೆ ಮಾಡಿದ ವಿಶ್ವದ ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ 14 ಅಂಕಗಳು ಜಿಗಿದು 77ರಿಂದ 63ನೇ ಸ್ಥಾನಕ್ಕೆ ತಲುಪಿದೆ. 'ಮುಂದಿನ ಮೂರು- ನಾಲ್ಕು ವರ್ಷಗಳಲ್ಲಿ ಭಾರತವು ನವೀನವಾದ ಧೈರ್ಯಶಾಲಿ ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯವಿದೆ. ಅವು ಅನುಷ್ಠಾನಕ್ಕೆ ಬಂದರೆ ಸುಲಭವಾಗಿ ವ್ಯವಹಾರ ಮಾಡುವ ಅಗ್ರ 50ನೇ ರಾಷ್ಟ್ರದ ಸ್ಥಾನ ಪಡೆಯುವ ಇಚ್ಛಿ ಸಾಕಾರಗೊಳ್ಳಲಿದೆ' ಎಂದು ವಿಶ್ವಬ್ಯಾಂಕ್‌ನ ಅಭಿವೃದ್ಧಿಯ ಅರ್ಥಶಾಸ್ತ್ರ ವಿಭಾಗದ ನಿರ್ದೇಶಕ ಸಿಮಿಯೋನ್ ಜಾಂಕೋವ್ ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 24, 2019, 9:39 PM IST

ವಾಷಿಂಗ್ಟನ್​: ಜಗತ್ತಿನ ಉತ್ತಮ ಉದ್ಯಮಸ್ನೇಹಿ ವಾತಾವರಣ ಹೊಂದಿದ ಭಾರತವನ್ನು ಆಗಿಸಲು, ವಿಶ್ವದ ಟಾಪ್​ 50 ಶ್ರೇಯಾಂಕದ ಒಳಗೆ ತೆಗೆದುಕೊಂಡು ಹೋಗುವ ಗುರಿ ಇರಿಸಿಕೊಂಡ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿಶ್ವ ಬ್ಯಾಂಕ್ ಮಹತ್ವದ ಸಲಹೆಗಳನ್ನು ನೀಡಿದೆ.

ವರ್ಲ್ಡ್​ ಬ್ಯಾಂಕ್ ಇಂದು ಬಿಡುಗಡೆ ಮಾಡಿದ ವಿಶ್ವದ ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ 14 ಅಂಕಗಳು ಜಿಗಿದು 77ರಿಂದ 63ನೇ ಸ್ಥಾನಕ್ಕೆ ತಲುಪಿದೆ. 'ಮುಂದಿನ ಮೂರು- ನಾಲ್ಕು ವರ್ಷಗಳಲ್ಲಿ ಭಾರತವು ನವೀನವಾದ ಧೈರ್ಯಶಾಲಿ ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯವಿದೆ. ಅವು ಅನುಷ್ಠಾನಕ್ಕೆ ಬಂದರೆ ಸುಲಭವಾಗಿ ವ್ಯವಹಾರ ಮಾಡುವ ಅಗ್ರ 50ನೇ ರಾಷ್ಟ್ರದ ಸ್ಥಾನ ಪಡೆಯುವ ಇಚ್ಛಿ ಸಾಕಾರಗೊಳ್ಳಲಿದೆ' ಎಂದು ವಿಶ್ವಬ್ಯಾಂಕ್‌ನ ಅಭಿವೃದ್ಧಿಯ ಅರ್ಥಶಾಸ್ತ್ರ ವಿಭಾಗದ ನಿರ್ದೇಶಕ ಸಿಮಿಯೋನ್ ಜಾಂಕೋವ್ ಸಲಹೆ ನೀಡಿದ್ದಾರೆ.

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸುಧಾರಣಾ ಕಾರ್ಯಸೂಚಿಯ ಜೊತೆಗೆ ಬ್ಯಾಂಕ್ ದಿವಾಳಿತನ ಮತ್ತು ಬ್ಯಾಂಕಿಂಗ್ ಕ್ಷೇತ್ರದ ನೀತಿಗಳಿಗೆ ಸಂಬಂಧಿಸಿದ ಒಪ್ಪಂದಗಳ ಜಾರಿ ಹಾಗೂ ತೆರಿಗೆ ಸುಧಾರಣೆಯಂತಹ ಕ್ರಮಗಳು ಮುಂದಿನ ವರ್ಷಗಳಲ್ಲಿ ಭಾರತವನ್ನು ಅಗ್ರ 50ರ ಒಳಗೆ ಇಲ್ಲವೇ ಅಗ್ರ 40ರ ಒಳಗೂ ಕರೆದೊಯ್ಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಸುಲಲಿತ ವ್ಯವಹಾರ ಶ್ರೇಯಾಂಕ ಏರಿಕೆಯಲ್ಲಿ ಭಾರತಕ್ಕೆ ಲ್ಯಾಟಿನ್​ ಅಮೆರಿಕ ಮತ್ತು ಯುರೋಪ್​ ಒಕ್ಕೂಟದ ಆರ್ಥಿಕತೆಗಳು ಪ್ರಬಲವಾದ ಸ್ಪರ್ಧೆ ನೀಡಲಿವೆ. ಆದರೆ, ಇವುಗಳನ್ನು ಮೀರಿ ಮುಂದುವರಿಯಲು ಭಾರತಕ್ಕೆ ಹೊಸ ಸುಧಾರಣೆಗಳ ಅಗತ್ಯವಿದೆ ಎಂದು ಜಾಂಕೋವ್ ಹೇಳಿದರು.

ಟಾಪ್ 50 ಸ್ಥಾನದಿಂದ ಅಗ್ರ 25 ಆರ್ಥಿಕತೆಗೆ ಏರಲು ಏನು ಮಾಡಬೇಕು ಎಂಬ ಪ್ರಶ್ನೆಗೆ, 'ಅದಕ್ಕಾಗಿ ನೀವು ರೀಚಾರ್ಜ್​ ಮಾಡಬೇಕಾಗಿದೆ. ಮುಂದಿನ ನಾಲ್ಕು ವರ್ಷಗಳವರೆಗೆ ಸರ್ಕಾರವು ಹೊಸ-ಹೊಸ ಆದ್ಯತೆಗಳತ್ತ ಗಮನಹರಿಸಬೇಕಿದೆ. ಭಾರತವು ವ್ಯವಹಾರಕ್ಕಾಗಿ ಮುಕ್ತವಾಗಿದೆ ಎಂದು ಘೋಷಿಸಬೇಕು. ಮುಂದಿನ 3-4 ವರ್ಷಗಳಲ್ಲಿ ಅಗ್ರ 25ನೇ ಸ್ಥಾನದಲ್ಲಿ ಇರಲು ಬಯಸಿದಲ್ಲಿ ಸರ್ಕಾರ ದಿಟ್ಟವಾದ ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಸಿಮಿಯೋನ್​ ಪ್ರತಿಪಾದಿಸಿದರು.

ABOUT THE AUTHOR

...view details