ಕರ್ನಾಟಕ

karnataka

ETV Bharat / business

21ನೇ ಶತಮಾನದ ಜಾಗತಿಕ ನಾಯಕನಾಗುವ ಸಾಮರ್ಥ್ಯ ಭಾರತಕ್ಕಿದೆ: ಫ್ರೆಂಚ್ ಅರ್ಥಶಾಸ್ತ್ರಜ್ಞ

ಅಸಮಾನತೆಯ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಿ ಅದನ್ನು ಬಗೆಹರಿಸಿದರೆ ಭಾರತವು 21ನೇ ಶತಮಾನದ ಜಾಗತಿಕ ಪ್ರಜಾಪ್ರಭುತ್ವ ನಾಯಕರಾಗುವ ಸಾಮರ್ಥ್ಯ ಹೊಂದಿದೆ ಎಂದು ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಭವಿಷ್ಯ ನುಡಿದರು.

Indian Economy
ಭಾರತ

By

Published : May 12, 2020, 6:17 PM IST

ನವದೆಹಲಿ: ಲಾಕ್​ಡೌನ್​ ಸಮರ್ಪಕವಾಗಿ ಜಾರಿಯಾಗಲು ಭಾರತವು ಮೂಲ ಆದಾಯ ಯೋಜನೆಯೊಂದನ್ನು ರೂಪಿಸಬೇಕಿದೆ ಎಂದು ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಸಲಹೆ ನೀಡಿದ್ದಾರೆ.

ಮೂಲಭೂತ ಆದಾಯ ಯೋಜನೆ ಪರಿಚಯಿಸಲು ಮತ್ತು ಸುರಕ್ಷತಾ ಜಾಲ ಅಭಿವೃದ್ಧಿಪಡಿಸಲು ಭಾರತ ಸರ್ಕಾರಕ್ಕೆ ಸಲಹೆ ನೀಡಲು ನಾನು ಬಯಸುತ್ತೇನೆ. ಆದಾಯ ನಿರ್ವಹಣೆಯ ವ್ಯವಸ್ಥೆ ಇಲ್ಲದೆ ಲಾಕ್‌ಡೌನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾನು ನೋಡ ಬಯಸುವುದಿಲ್ಲ ಎಂದು ಪಿಕೆಟ್ಟಿ ಸಂದರ್ಶನವೊಂದರಲ್ಲಿ ಪಿಟಿಐಗೆ ತಿಳಿಸಿದರು.

ಸಾರ್ವತ್ರಿಕ ಮೂಲ ಆದಾಯದ ಕಲ್ಪನೆಯನ್ನು ಅಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು 2016-17ರ ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಿದ್ದರು. ದೇಶದಲ್ಲಿ ಮೂಲ ಆದಾಯ ಪರಿಚಯಿಸುವ ಯೋಜನೆಯೊಂದು ಕಳೆದ ವರ್ಷದ ಚುನಾವಣಾ ಪ್ರಚಾರದಲ್ಲಿ ಚರ್ಚೆಯಾಯಿತು.

ಭಾರತದಲ್ಲಿ ಸಂಪತ್ತು ತೆರಿಗೆ ಮತ್ತು ಪಿತ್ರಾರ್ಜಿತ ತೆರಿಗೆ ಸೇರಿದಂತೆ ಹೆಚ್ಚು ಸಮಾನ ಮತ್ತು ಪ್ರಗತಿಪರ ತೆರಿಗೆಗಳನ್ನು ಪ್ರಸ್ತಾಪಿಸಿದ್ದಾರೆ.

21ನೇ ಶತಮಾನದ ಜಾಗತಿಕ ಪ್ರಜಾಪ್ರಭುತ್ವ ನಾಯಕವಾಗಲು ಭಾರತಕ್ಕೆ ಸಾಮರ್ಥ್ಯವಿದೆ. ದೇಶವು ತನ್ನ ಅಸಮಾನತೆಯ ಪರಂಪರೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಭೂ ಸುಧಾರಣೆ ಮತ್ತು ಆಸ್ತಿಯ ಪುನರ್​ ವಿತರಣೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಗಮನಹರಿಸಿ ಮೀಸಲಾತಿಗೆ ನೀಡಲಾದ ಕಾಳಜಿ ಹೊಂದಿಕೆ ಆಗಲಿಲ್ಲ. ಹೆಚ್ಚು ಸಮಾನ ಮತ್ತು ಪ್ರಗತಿಪರ ತೆರಿಗೆ ವ್ಯವಸ್ಥೆಯ ಮೂಲಕ ಇದನ್ನು ಹೋಗಲಾಡಿಸಬಹುದು ಎಂದು ಪಿಕೆಟ್ಟಿ ಹೇಳಿದ್ದಾರೆ.

ABOUT THE AUTHOR

...view details