ಕರ್ನಾಟಕ

karnataka

ETV Bharat / business

ಮೋದಿ 5 ಟ್ರಿಲಿಯನ್ ಆರ್ಥಿಕತೆ ಈಡೇರಿಕೆ ದೂರದ ಕನಸು: ಅರ್ಥಶಾಸ್ತ್ರಜ್ಞರ ಮನದ ನುಡಿ - 5 ಟ್ರಿಲಿಯನ್ ಆರ್ಥಿಕತೆ

ಈಗ ಜಗತ್ತು ಆರ್ಥಿಕ ಹಿಂಜರಿತದ ಹಂತಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಯಾವಾಗ ಮರುಕಳಿಸಬಹುದು ಎಂಬುದು ಖಚಿತವಾಗಿ ಹೇಳಲು ಆಗುವುದಿಲ್ಲ. 5 ಟ್ರಿಲಿಯನ್ ಡಾಲರ್​ ಆರ್ಥಿಕತೆಯನ್ನು ಸಾಧಿಸುವುದು ದೂರದ ಕನಸಾಗಿ ಪರಿಣಮಿಸುತ್ತದೆ. ಹೆಚ್ಚುವರಿಯಾಗಿ ವಿನಿಮಯ ದರವೂ ತೀವ್ರವಾಗಿ ಕುಸಿಯುತ್ತಿದೆ. 15ನೇ ಹಣಕಾಸು ಆಯೋಗದ ಎನ್ಐಪಿಎಫ್​ಪಿ ಅಧ್ಯಯನದ ಆಧಾರದ ಮೇಲೆ ಹೇಳುವುದಾದರೇ ಕೆಲವು ವಿವೇಕಯುತ ಹಣಕಾಸಿನ ನೀತಿಗಳಿಂದಾಗಿ ನಾವು ಇನ್ನೂ ಅಂತಹ ದೊಡ್ಡ ಗುರಿಗಳನ್ನು ಸಾಧಿಸಬಹುದು ಎಂದು ಅರ್ಥಶಾಸ್ತ್ರಜ್ಞ ಎನ್ ಆರ್ ಭಾನುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

growth
ಭಾರತದ ಆರ್ಥಿಕತೆ

By

Published : Apr 3, 2020, 7:08 PM IST

ನವದೆಹಲಿ: ಕಳೆದ ಆರು ತ್ರೈಮಾಸಿಕಗಳಲ್ಲಿ ಮಂದಗತಿಯ ಆರ್ಥಿಕ ಬೆಳವಣಿಗೆ ಇದ್ದು, 2020-21ರಲ್ಲಿ ಸುಧಾರಣೆಯ ಬಳಿಕದ ಅವಧಿಯಲ್ಲಿ ಅತ್ಯಂತ ಕಡಿಮೆ ಬೆಳವಣಿಗೆ ದಾಖಲಿಸಬಹುದೆಂದು ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿಯ ಪ್ರಾಧ್ಯಾಪಕ ಎನ್ ಆರ್ ಭಾನುಮೂರ್ತಿ ಮಾತನಾಡಿ, ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಭಾರತೀಯ ಆರ್ಥಿಕತೆಯ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಹೇಳಿದರು.

2020-21ರ ತ್ರೈಮಾಸಿಕಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಊಹಿಸಿದರೆ, ಸುಧಾರಣೆಯ ನಂತರದ ಅವಧಿಯಲ್ಲಿ (1991ರಿಂದ) ಅನುಭವಿಸಿದ ಅತ್ಯಂತ ಕಡಿಮೆ ಬೆಳವಣಿಗೆಯನ್ನು ಭಾರತೀಯ ಆರ್ಥಿಕತೆಯು ದಾಖಲಿಸಬಹುದು. ಇದು ಫೆಬ್ರವರಿ 2020ರಿಂದ ಪರಿಚಯಿಸಲಾದ ಬಲವಾದ ವಿತ್ತೀಯ ಮತ್ತು ಹಣಕಾಸಿನ ಉತ್ತೇಜನ ಕ್ರಮಗಳ ಹೊರತಾಗಿಯೂ ಕೆಳ ಮಟ್ಟಕ್ಕೆ ಇಳಿಯಬಹುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ 2021ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ 4ರಷ್ಟಕ್ಕೆ ಕುಸಿಯುತ್ತದೆ ಎಂದು ಎಡಿಬಿ ನಿರೀಕ್ಷಿಸಿದೆ. ಮೂಡಿಸ್ ಇನ್ವೆಸ್ಟರ್ ಸರ್ವಿಸ್, ಕಳೆದ ತಿಂಗಳು 2020ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಗೆ ಅಂದಾಜು 2.5 ಶೇಕಡಾವನ್ನು ಕಡಿತಗೊಳಿಸಿದೆ.

ಈಗ ಜಗತ್ತು ಆರ್ಥಿಕ ಹಿಂಜರಿತದ ಹಂತಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಯಾವಾಗ ಮರುಕಳಿಸಬಹುದು ಎಂಬುದು ಖಚಿತವಾಗಿ ಹೇಳಲು ಆಗುವುದಿಲ್ಲ. 5 ಟ್ರಿಲಿಯನ್ ಡಾಲರ್​ ಆರ್ಥಿಕತೆಯನ್ನು ಸಾಧಿಸುವುದು ದೂರದ ಕನಸಾಗಿ ಪರಿಣಮಿಸುತ್ತದೆ. ಹೆಚ್ಚುವರಿಯಾಗಿ ವಿನಿಮಯ ದರವೂ ತೀವ್ರವಾಗಿ ಕುಸಿಯುತ್ತಿದೆ. 15ನೇ ಹಣಕಾಸು ಆಯೋಗದ ಎನ್ಐಪಿಎಫ್​ಪಿ ಅಧ್ಯಯನದ ಆಧಾರದ ಮೇಲೆ ಹೇಳುವುದಾದರೇ ಕೆಲವು ವಿವೇಕಯುತ ಹಣಕಾಸಿನ ನೀತಿಗಳಿಂದಾಗಿ ನಾವು ಇನ್ನೂ ಅಂತಹ ದೊಡ್ಡ ಗುರಿಗಳನ್ನು ಸಾಧಿಸಬಹುದು ಎಂದರು.

ABOUT THE AUTHOR

...view details