ಕರ್ನಾಟಕ

karnataka

ETV Bharat / business

ಕೊರೊನಾ ಬಿಕ್ಕಟ್ಟಿನ ದೇಶಿ ಆರ್ಥಿಕತೆಗೆ ಹೊಸ ಆಶಾಕಿರಣದ ಸಂದೇಶ ಕೊಟ್ಟ SBI - ಕೋವಿಡ್ 19 ಬಿಕ್ಕಟ್ಟು

ಬಂಡವಾಳದ ಹರಿವಿನ ಸಂಯೋಜನೆಯು ಹೇಗೆ ಬದಲಾಗುತ್ತಿದೆ ಎಂಬುದನ್ನು ಮೇಲ್ವಿಚಾರಣೆಯತ್ತ ಕೇಂದ್ರೀಕರಿಸಬೇಕಿದೆ. ಇವು ಹೂಡಿಕೆದಾರರ ಭಾವನೆಯು ಋಣಾತ್ಮಕವಾಗಿದ್ದಾಗ ನಾವು ಸಿದ್ಧರಾಗಲು ನೆರವಾಗಲಿದೆ.

Indian Economy
ಭಾರತದ ಆರ್ಥಿಕತೆ

By

Published : Jun 8, 2020, 7:04 PM IST

ನವದೆಹಲಿ :ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಈ ಹಣಕಾಸು ವರ್ಷದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದ ಕಾರಣ ಭಾರತದ ಚಾಲ್ತಿ ಖಾತೆ ಹೆಚ್ಚುವರಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ ಎಂದು ಎಸ್‌ಬಿಐ ಇಕೋವ್ರಾಪ್ ವರದಿ ಮಾಡಿದೆ.

ಈ ವರದಿಯ ಪ್ರಕಾರ ಆರ್ಥಿಕತೆಯು ನಿಧಾನವಾಗಿ ಪುನಾಃ ಪ್ರಾರಂಭವಾಗುತ್ತಿದ್ದಂತೆ ಬಂಡವಾಳದ ಹರಿವು ಧನಾತ್ಮಕವಾಗಿ ಬದಲಾಗುತ್ತಿದೆ. ಅದು ಕೆಲವು ನಷ್ಟಗಳನ್ನು ತಗ್ಗಿಸಬಹುದು. ಹಿಂದಿನ ಬಿಕ್ಕಟ್ಟುಗಳ ವಿಶ್ಲೇಷಣೆಯಂತೆ ಕರೆನ್ಸಿ ಏರುಪೇರಾಗಿ ತಿರುಗಬಹುದು ಎಂದು ತೋರಿಸುತ್ತದೆ. ಆದರೂ ಸರಿಯಾದ ಕ್ರಮಗಳನ್ನ ತೆಗೆದುಕೊಂಡಿದ್ದೆ ಆದಲಿ ಅದು ಸ್ಥಿರಗೊಳ್ಳುತ್ತದೆ ಎಂದು ಹೇಳಿದೆ.

ಪ್ರಸಕ್ತ ಖಾತೆಯು ವಿದೇಶಿ ಕರೆನ್ಸಿಗಳ ಒಳಹರಿವು ಮತ್ತು ಹೊರಹರಿವಿನ ನಡುವಿನ ನಿವ್ವಳ ವ್ಯತ್ಯಾಸ ತೋರಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ. ಮುಖ್ಯವಾಗಿ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳನ್ನು ಸುಧಾರಿಸಬೇಕಿದೆ. ಬಂಡವಾಳದ ಹರಿವಿನ ಸಂಯೋಜನೆಯು ಹೇಗೆ ಬದಲಾಗುತ್ತಿದೆ ಎಂಬುದನ್ನು ಮೇಲ್ವಿಚಾರಣೆಯತ್ತ ಕೇಂದ್ರೀಕರಿಸಬೇಕಿದೆ. ಇವು ಹೂಡಿಕೆದಾರರ ಭಾವನೆಯು ಋಣಾತ್ಮಕವಾಗಿದ್ದಾಗ ನಾವು ಸಿದ್ಧರಾಗಲು ನೆರವಾಗಲಿದೆ ಎಂದು ಹೇಳಿದೆ.

ಸಾಲದ ಹರಿವುಗಳಿಗಿಂತ ಎಫ್‌ಡಿಐಗೆ ಶ್ರೇಣೀಕೃತ ಆದ್ಯತೆ ಜೊತೆಗೆ ನಾನಾ ಬಂಡವಾಳ ಖಾತೆ ಮತ್ತು ಅಲ್ಪಾವಧಿಯ ಹರಿವುಗಳ ಮೇಲೆ ದೀರ್ಘಾವಧಿಯ ಹರಿವುಗಳಿಗೆ ಬಾಹ್ಯ ವಲಯ ನೀತಿಯ ಕೇಂದ್ರ ಬಿಂದು ಆಗಿರಬೇಕು ಎಂದು ಆರ್‌ಬಿಐ ಹೇಳಿದೆ.

ABOUT THE AUTHOR

...view details