ಕರ್ನಾಟಕ

karnataka

ETV Bharat / business

₹20 ಲಕ್ಷ ಕೋಟಿ ಘೋಷಣೆ ಬಳಿಕ ಮತ್ತೊಂದು ಲಕ್ಷ ಕೋಟಿಯ ಪ್ಯಾಕೇಜ್ ಬರಲಿದೆ - ಫಿಚ್

ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ವೇಳೆ ಕೋವಿಡ್ ಬಳಿಕದ ಅಂತಿಮ ಉತ್ತೇಜಕ ಆರ್ಥಿಕ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಆರ್‌ಬಿಐ ನಿರ್ದೇಶಕ ಎಸ್ ಗುರುಮೂರ್ತಿ ಹೇಳಿದ್ದರು. ಈಗ ಫಿಚ್​ ರೇಂಟಿಗ್​, ಜಿಡಿಪಿಯ ಶೇ 1ರಷ್ಟು ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದೆ.

PM Modi
ಪ್ರಧಾನಿ ಮೋದಿ

By

Published : Jun 22, 2020, 9:14 PM IST

ನವದೆಹಲಿ :ಮುಂಬರುವ ತಿಂಗಳಲ್ಲಿ ಜಿಡಿಪಿಯ ಶೇ.1ರಷ್ಟು ಮೌಲ್ಯದ ಮತ್ತೊಂದು ಸುತ್ತಿನ ಹಣಕಾಸಿನ ಉತ್ತೇಜನ ಪ್ಯಾಕೇಜ್‌ನ ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯಿದೆ ಎಂದು ಫಿಚ್ ರೇಟಿಂಗ್ಸ್ ತಿಳಿಸಿದೆ.

ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ವೇಳೆ ಕೋವಿಡ್-19 ಬಳಿಕದ ಅಂತಿಮ ಉತ್ತೇಜಕ ಆರ್ಥಿಕ ಪ್ಯಾಕೇಜ್‌ನ ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಆರ್‌ಬಿಐ ನಿರ್ದೇಶಕ ಎಸ್ ಗುರುಮೂರ್ತಿ ಹೇಳಿದ್ದರು. ಈಗ ಫಿಚ್​ ರೇಂಟಿಗ್​ ಪ್ಯಾಕೇಜ್ ಘೋಷಣೆ ಆಗಲಿದೆ ಎಂದು ಸುಳಿವು ನೀಡಿದೆ. ಕಳೆದ ವಾರ ಭಾರತದ ಸಾರ್ವಭೌಮ ರೇಟಿಂಗ್ ದೃಷ್ಟಿಕೋನವನ್ನು ಸ್ಥಿರತೆಯಿಂದ ನೆಗೆಟಿವ್​ಗೆ ಇಳಿಸಿದ ಫಿಚ್, ರೇಟಿಂಗ್ ಕ್ರಮವನ್ನು ಹೆಚ್ಚುವರಿ ಹಣಕಾಸಿನ ಪ್ರಚೋದನೆಯಿಂದಾಗಿ ಪರಿಷ್ಕರಿಸಲಾಗಿದೆ ಎಂದು ಹೇಳಿತ್ತು.

ಭಾರತದಲ್ಲಿ ಈಗಲೂ ಕೋವಿಡ್ -19 ಪ್ರಭಾವವಿದೆ. ಆರ್ಥಿಕತೆಯನ್ನು ಬೆಂಬಲಿಸಲು ಸರ್ಕಾರವು ಹಣಕಾಸಿನ ಉತ್ತೇಜನಕ್ಕೆ ಇನ್ನೂ ಸ್ವಲ್ಪ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ ಎಂದು ಫಿಚ್ ನಿರ್ದೇಶಕ ಥಾಮಸ್ ರೂಕ್ಮೇಕರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜಿಡಿಪಿಯ ಶೇ.10ರಷ್ಟು ಉತ್ತೇಜಕ ಕ್ರಮಗಳನ್ನು ಘೋಷಿಸಿದ್ದಾರೆ. ಆದರೆ, 9 ಪ್ರತಿಶತದಷ್ಟು ಹಣಕಾಸಿನೇತರ ಸ್ವರೂಪದಲ್ಲಿದೆ. ಬಾಂಡ್ ವಿತರಣೆ, ಸರ್ಕಾರದ ಸಾಲ ಪಡೆಯುವ ಅವಶ್ಯಕತೆಗಳಂತವು ಇದರಲ್ಲಿ ಸೇರಿವೆ. ಅಗತ್ಯ ಇರುವವರಿಗೆ ಪರಿಹಾರ ಒದಗಿಸಲು ಮುಂದಿನ ತಿಂಗಳಲ್ಲಿ ಇನ್ನೂ ಶೇ.1ರಷ್ಟು ಪ್ಯಾಕೇಜ್​ ಬರಬಹುದು ಎಂಬ ಸೂಚನೆಯನ್ನು ನಾವು ನೀಡುತ್ತೇವೆ ಎಂದು ಫಿಚ್​ ರೇಟಿಂಗ್​ನ ವೆಬ್‌ನಾರ್ ಉದ್ದೇಶಿಸಿ ಮಾತನಾಡಿದರು.

ABOUT THE AUTHOR

...view details