ಕರ್ನಾಟಕ

karnataka

ETV Bharat / business

ವಿಶ್ವ ಆರ್ಥಿಕ ಶೃಂಗದ 'ರೀಸ್ಕಿಲ್ಲಿಂಗ್'​ನಲ್ಲಿ ಭಾರತಕ್ಕೆ ಮಹತ್ವದ ಸ್ಥಾನ..! - ಇಂಡಸ್ಟ್ರಿ 4.0

ರೀಸ್ಕಿಲ್ಲಿಂಗ್ ರೆವಲ್ಯೂಷನ್​ ಸ್ಥಾಪಕ ಸರ್ಕಾರಗಳಲ್ಲಿ ಬ್ರೆಜಿಲ್, ಫ್ರಾನ್ಸ್, ಭಾರತ, ಪಾಕಿಸ್ತಾನ, ರಷ್ಯಾ, ಯುಎಇ ಮತ್ತು ಅಮೆರಿಕ ಕೂಡ ಸೇರಿವೆ. ವ್ಯಾಪಾರ ಪಾಲುದಾರರಾಗಿ ಪಿಡಬ್ಲ್ಯೂಸಿ, ಸೇಲ್ಸ್‌ಫೋರ್ಸ್, ಮ್ಯಾನ್‌ಪವರ್‌ಗ್ರೂಪ್, ಇನ್ಫೋಸಿಸ್, ಲಿಂಕ್ಡ್‌ಇನ್, ಕೋರ್ಸೆರಾ ಇಂಕ್ ಮತ್ತು ದಿ ಅಡೆಕೊ ಗ್ರೂಪ್ ಸೇರ್ಪಡೆಯಾಗಿವೆ.

WEF
ವಿಶ್ವ ಆರ್ಥಿಕ ಶೃಂಗ

By

Published : Jan 22, 2020, 8:39 PM IST

ದಾವೋಸ್​: 2030ರ ವೇಳೆಗೆ ಒಂದು ಶತಕೋಟಿ ಜನರಿಗೆ ಉತ್ತಮ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗಗಳನ್ನು ಒದಗಿಸುವ ಕಾರ್ಯತಂತ್ರದ ಭಾಗವಾಗಿ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್​) ಮರುಕೌಶಲ್ಯ (ರೀಸ್ಕಿಲ್ಲಿಂಗ್‌ ​) ರೆವಲ್ಯೂಷನ್​ ಸ್ಥಾಪನೆಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆಯಾಗಿದೆ.

ತಾಂತ್ರಿಕ ಬದಲಾವಣೆಯ ಮೂಲಕ ಭವಿಷ್ಯದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ 4.0 ರೆವಲ್ಯೂಷನ್​) ಬಗ್ಗೆ ಹೊಸ ಕೌಶಲ್ಯಗಳ ತರಬೇತಿ ನೀಡುವ ಮುಖೇನ ಆರ್ಥಿಕತೆ ಬೆಳವಣಿಗೆಗೆ ಇದು ಸಹಾಯಕವಾಗಲಿದೆ ಎಂದು ಡಬ್ಲ್ಯುಇಎಫ್ ಹೇಳಿದೆ.

ರೀಸ್ಕಿಲ್ಲಿಂಗ್ ರೆವಲ್ಯೂಷನ್​ ಸ್ಥಾಪಕ ಸರ್ಕಾರಗಳಲ್ಲಿ ಬ್ರೆಜಿಲ್, ಫ್ರಾನ್ಸ್, ಭಾರತ, ಪಾಕಿಸ್ತಾನ, ರಷ್ಯಾ, ಯುಎಇ ಮತ್ತು ಅಮೆರಿಕ ಕೂಡ ಸೇರಿವೆ. ವ್ಯಾಪಾರ ಪಾಲುದಾರರಾಗಿ ಪಿಡಬ್ಲ್ಯೂಸಿ, ಸೇಲ್ಸ್‌ಫೋರ್ಸ್, ಮ್ಯಾನ್‌ಪವರ್‌ಗ್ರೂಪ್, ಇನ್ಫೋಸಿಸ್, ಲಿಂಕ್ಡ್‌ಇನ್, ಕೋರ್ಸೆರಾ ಇಂಕ್ ಮತ್ತು ದಿ ಅಡೆಕೊ ಗ್ರೂಪ್ ಸೇರ್ಪಡೆಯಾಗಿವೆ.

ವ್ಯವಸ್ಥಿತ ಮತ್ತು ಸಮನಾಂತರವಾದ ಸಮಾಜವನ್ನು ಬೆಳೆಸುವ ಅತ್ಯುತ್ತಮ ಮಾರ್ಗ ಎಂದರೆ ಪ್ರತಿಯೊಬ್ಬರಿಗೂ ಯೋಗ್ಯವಾದ ಉದ್ಯೋಗ ಮತ್ತು ಆದಾಯ ಒದಗಿಸುವುದು. ದಾವೋಸ್‌ ತನ್ನ ಶೃಂಗಸಭೆಯು ಮುಖಾಂತರಾವಗಿ ಒಂದು ಶತಕೋಟಿ ಜನರಿಗೆ ಇಂಡಸ್ಟ್ರಿ 4.0 ರೆವಲ್ಯೂಷನ್​ಗೆ ಅಗತ್ಯವಿರುವ ಕೌಶಲಗಳನ್ನು ನೀಡಲು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವಕ್ಕೆ ವೇದಿಕೆ ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದೆ.

415ಕ್ಕೂ ಹೆಚ್ಚು ಖಾಸಗಿ ವಲಯದ ಕಂಪನಿಗಳು ಮುಂದಿನ ಐದು ವರ್ಷಗಳಲ್ಲಿ ಅಮೆರಿಕದ 14.5 ದಶಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ವೃತ್ತಿ ಸಂಬಂಧಿತ ಅವಕಾಶಗಳನ್ನು ನೀಡುವ ಭರವಸೆ ನೀಡಿದೆ. ಇಂತಹ ಸಂಯೋಜಿತ ಸಾರ್ವಜನಿಕ ಮತ್ತು ಖಾಸಗಿ ಪ್ರಯತ್ನಗಳ ಮೂಲಕ ಒಂದು ಶತಕೋಟಿ ಜನರಿಗೆ ಕೌಶಲ್ಯ ತರಬೇತಿ ಕೊಡಿಸುವ ಗುರಿಗಳನ್ನು ಇರಿಸಿಕೊಂಡು ಅದನ್ನು ಸಾಧಿಸಲಾಗುವುದು ಎಂದು ಡಬ್ಲ್ಯುಎಫ್​ ಹೇಳಿದೆ.

ABOUT THE AUTHOR

...view details