ನ್ಯೂಯಾರ್ಕ್:ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24-25ರಂದು ಪ್ರಥಮ ಬಾರಿಗೆ ಭಾರತ ಪ್ರವಾಸ ಕೈಗೊಳ್ಳುವ ಮುನ್ನ 'ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ರಾಷ್ಟ್ರ' ಎಂದು ಅಮೆರಿಕ ವರ್ತಕರ ಪ್ರತಿನಿಧಿಗಳು (ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ಸ್; ಯುಎಸ್ಟಿಆರ್) ವರ್ಗೀಕರಿಸಿದ್ದಾರೆ.
ವಾಷಿಂಗ್ಟನ್ ಡಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೀಡುವ ಪ್ರಯೋಜನಗಳಿಗೆ ಭಾರತ ಅನರ್ಹವಾಗಿದೆ. ಸಾಮಾನ್ಯ ಆದ್ಯತಾ ಕಾರ್ಯಕ್ರಮಗಳಿಂದ (ಜಿಎಸ್ಪಿ) ಭಾರತವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಆದೇಶಿಸಿದೆ.
ಜಿಎಸ್ಟಿ ಎಂಬುದು ಅಮೆರಿಕದ ಅತ್ಯಂತ ಹಳೆಯ ಪ್ರಾಶಸ್ತ್ಯದ ವ್ಯಾಪಾರ ಯೋಜನೆ. ಇದು ಜೂನ್ವರೆಗೆ ಭಾರತೀಯ ರಫ್ತುದಾರರಿಗೆ ಅಮೆರಿಕ ಮಾರುಕಟ್ಟೆ ಪ್ರವೇಶಕ್ಕೆ ಸುಂಕ ಮುಕ್ತವಾಗಿ ನೀಡಿತ್ತು. ಇದರಡಿ ಸಿಗುತ್ತಿದ್ದ ಎಲ್ಲಾ ಪ್ರಯೋಜನಗಳನ್ನು ಸ್ಥಗಿತಗೊಳಿಸಲಾಯಿತು.
ಸರ್ಕಾರದ ಅಂದಾಜಿನ ಪ್ರಕಾರ, ಜಾಗತಿಕ ವ್ಯಾಪಾರದ ಶೇ. 0.5ಕ್ಕಿಂತ ಕಡಿಮೆ ಪಾಲು ಹೊಂದಿರುವ ದೇಶಗಳನ್ನು ಅಭಿವೃದ್ಧಿಶೀಲ ರಾಷ್ಟ್ರದ ಮಾನದಂಡಗಳ ಮಿತಿಯನ್ನು ಭಾರತ ದಾಟಿದೆ. 2017ರ ವೇಳೆ ಜಾಗತಿಕ ವ್ಯಾಪಾರದಲ್ಲಿ ಭಾರತದ ರಫ್ತು ಪಾಲು ಶೇ. 2.1ರಷ್ಟು ಮತ್ತು ಆಮದು ಪ್ರಮಾಣ ಶೇ. 2.6ರಷ್ಟಿತ್ತು. ಭಾರತವು ಅರ್ಜೆಂಟೀನಾ, ಬ್ರೆಜಿಲ್, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳೊಂದಿಗೆ ಜಿ20 ಬಣದ ಭಾಗವಾಗಿದೆ. ವಿಶ್ವ ಬ್ಯಾಂಕ್ ದತ್ತಾಂಶದ ಅನ್ವಯ ಭಾರತದ ತಲಾ ಒಟ್ಟು ನಿವ್ವಳ ಆದಾಯ (ಜಿಎನ್‌ಐ) 12,375 ಡಾಲರ್ಗಿಂತ ಕಡಿಮೆ ಇದ್ದರೂ ಅದು ಅಭಿವೃದ್ಧಿ ಹೊಂದಿದೆ ಎಂಬುದು ವ್ಯಾಪಾರಿ ಪ್ರತಿನಿಧಿಗಳ ವಾದ.