ನವದೆಹಲಿ: ನೇಪಾಳ ಮತ್ತು ಭಾರತ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಹಿಂದಿನಿಂದಲೂ ಸಂಬಂಧ ಹೊಂದಿರುವ ಇತಿಹಾಸ ಇದೆ. ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ವಿದೇಶಿ ಹೂಡಿಕೆಯ ಮೂಲವೂ ಆಗಿದೆ.
ಆದರೆ ಇಡೀ ಜಗತ್ತು ಮಹಾಮಾರಿ ಮಹಾಮಾರಿ ಕೊರೊನಾ ವೈರಸ್ ದಾಳಿಗೆ ಸಿಲುಕಿದ್ದ ಸಮಯದಲ್ಲಿ, ಪ್ರಾದೇಶಿಕ ವಿವಾದದ ವಿಚಾರವಾಗಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡು ಉಭಯ ದೇಶಗಳ ನಡುವಿನ ಸಂಬಂಧವು ನಿಧಾನವಾಗಿ ಕುಸಿದಿದೆ.
ಭಾರತ ಮತ್ತು ನೇಪಾಳ ತಮ್ಮ ರಾಜಕೀಯ ಭೂಪಟದಲ್ಲಿ ಒಂದೇ ಭೂಪ್ರದೇಶವನ್ನು ತಮ್ಮದೆಂದು ಹೇಳಿಕೊಳ್ಳುತ್ತವೆ. ನೇಪಾಳವು ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಡುರಾದಲ್ಲಿ 400 ಚದರ್ ಕಿ.ಮೀ ಭಾರತೀಯ ಭೂಮಿಯನ್ನು ನೇಪಾಳ ಪ್ರದೇಶದ ಭಾಗವಾಗಿ ಘೋಷಿಸಿದೆ. ಇದು ಎರಡು ದೇಶಗಳ ದ್ವಿಪಕ್ಷೀಯ ಸಂಬಂಧದ ಅಸ್ಥಿರತೆಗೆ ಪ್ರಮುಖ ಕಾರಣವಾಗಿದೆ.
ಉಭಯ ದೇಶಗಳ ನಡುವಿನ ಈ ಎಲ್ಲ ರೀತಿಯ ಅಸಮಾನತೆಗಳ ಮಧ್ಯೆ, ಭಾರತ ಮತ್ತು ನೇಪಾಳ ಮಧ್ಯೆ ನಡೆಯುತ್ತಿದ್ದ ಆಳವಾದ ವ್ಯಾಪಾರ ಸಂಬಂಧಗಳ ಮೇಲೆ ಅತಿ ಹೆಚ್ಚಾಗಿ ಪರಿಣಾಮ ಬೀರಿದೆ.
ಈ ಮಧ್ಯೆ, ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಹಾವಳಿ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಚೀನಾದ ಪ್ರಾಬಲ್ಯದ ತಂತ್ರ ಸೇರಿದಂತೆ ಪ್ರಾಬಲ್ಯದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೇಪಾಳ ಮತ್ತು ಭಾರತ ಎರಡೂ ಒಪ್ಪಂದಗಳಿಗೆ ಬರಲು ನಿರ್ಧರಿಸಿದವು. ಈ ಮೂಲಕ ಭಾರತ ಮತ್ತು ನೇಪಾಳ ತಮ್ಮ ಸಮಸ್ಯೆಗಳ ಕುರಿತಂತೆ ಪರಿಹಾರ ಕಂಡುಕೊಳ್ಳಲು ಚರ್ಚೆಗಳನ್ನು ಮುಂದುವರಿಸಲು ಒಪ್ಪಿಕೊಂಡಿವೆ.
ಭವಿಷ್ಯದಲ್ಲಿ ದ್ವಿಪಕ್ಷೀಯ ವಿಷಯಗಳ ಬಗ್ಗೆ ಮತ್ತು ಗಡಿ ಮೂಲಸೌಕರ್ಯ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ.
ಈಗ ಉಭಯ ದೇಶಗಳ ನಡುವೆ ನಡೆಯುತ್ತಿರುವ ಗಡಿ ವಿವಾದವನ್ನು ಕೊನೆಗೊಳಿಸಲು ಅಥವಾ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಸುಧಾರಿಸಲು ಮತ್ತು ನೇಪಾಳದ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬದಲಿಸುವ ಚೀನಾ ಪ್ರಯತ್ನವನ್ನು ನಿರ್ಬಂಧಿಸಲು ಎರಡೂ ದೇಶಗಳು ಮುಕ್ತವಾಗಿವೆಯೇ ಅಥವಾ ಇಲ್ಲವೇ ಎಂಬುದು ಈಗ ಪ್ರಶ್ನೆಯಾಗಿದೆ.
ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮಾಜಿ ರಾಜತಾಂತ್ರಿಕ ಅಧಿಕಾರಿ ಜೆ.ಕೆ. ತ್ರಿಪಾಠಿ, “ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ಖಂಡಿತವಾಗಿಯೂ ಗಡಿ ಸಮಸ್ಯೆ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧದ ಮೇಲೆ ಪರಿಣಾಮ ಬೀರಿದೆ. ನೇಪಾಳ ದೇಶದ ಜೊತೆ ಗಡಿ ಉದ್ವಿಗ್ನತೆ, ಗಡಿಯ ಬಯಲು ಪ್ರದೇಶಗಳಲ್ಲಿ ನೇಪಾಳದಿಂದ ಗಡಿಯುದ್ದಕ್ಕೂ ಚೆಕ್ ಪೋಸ್ಟ್ ನಿರ್ಮಾಣ ಮತ್ತು ಸ್ತಂಭಗಳ ಸ್ಥಾಪನೆ ಆಗಿದೆ. ಆದರೆ, ನೇಪಾಳವು ಈಗಾಗಲೇ ಎರಡು-ಮೂರು ಚೆಕ್ ಪೋಸ್ಟ್ಗಳನ್ನು ತೆಗೆದು ಹಾಕಲು ಒಪ್ಪಿಕೊಂಡಿದೆ. ಜೊತೆಗೆ ವ್ಯಾಪಾರಕ್ಕಾಗಿ ಹೆಚ್ಚು ಮುಕ್ತವಾಗಿ ಗಡಿಯನ್ನು ತೆರೆಯಲು ಉತ್ಸುಕವಾಗಿದೆ ".
"ಇನ್ನೂ ಹೇಗಿದ್ದರೂ ಚೀನಾ ನೇಪಾಳದಲ್ಲಿ ತನ್ನ ಪಾತ್ರವನ್ನು ವಹಿಸುತ್ತದೆ ಅಥವಾ ನೇಪಾಳವು ಚೀನಾದಿಂದ ಪ್ರಭಾವಿತವಾಗಿರುತ್ತದೆ ಅಥವಾ ಚೀನಾದಿಂದ ತಪ್ಪಿಸಿಕೊಳ್ಳಲ್ಪಡುತ್ತದೆ, ಆದರೆ ಚೀನಾವು ನೇಪಾಳ ರಾಷ್ಟ್ರಕ್ಕೆ ರಸ್ತೆಯ ಮೂಲಸೌಕರ್ಯ, ಲಾಸಾದಿಂದ ಕಠ್ಮಂಡುವಿಗೆ ಮತ್ತು ಭಾರತದ ಗಡಿಯವರೆಗೆ ರೈಲು ಮೂಲಸೌಕರ್ಯ ಸೇರಿದಂತೆ ಚೀನಾವು ಎಲ್ಲವೂ ಸಿದ್ಧಪಡಿಸುವವರೆಗೂ, ನೇಪಾಳವು ವ್ಯಾಪಾರ ಅಥವಾ ಭಾರತದ ಮೂಲಕ ಸಮುದ್ರ ಮಾರ್ಗಕ್ಕಾಗಿ ಭಾರತವನ್ನು ಅವಲಂಬಿಸಬೇಕಾಗಿದೆ, ಆದ್ದರಿಂದ ಖಂಡಿತವಾಗಿಯೂ ನೇಪಾಳ ದೇಶಕ್ಕೆ ಇಷ್ಟವಿಲ್ಲದಿದ್ದರೂ ಸಹ ಅದು ಭಾರತ ದೇಶವನ್ನು ವಿಧಿ ಇಲ್ಲದೆ ಅವಲಂಬಿಸಬೇಕಾಗಿದೆ. ಇಲ್ಲವಾದರೆ ನೇಪಾಳದ ವ್ಯಾಪಾರದ ಮೇಲೆಯೂ ಸಹ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ " ಎನ್ನುತ್ತಾರೆ ಜೆ.ಕೆ. ತ್ರಿಪಾಠಿ.
ಇದನ್ನು ಹೇಳುತ್ತಾ, "ನೇಪಾಳದ ಜನರು ಮತ್ತು ಸರ್ಕಾರದ ಹಿತದೃಷ್ಟಿಯಿಂದ ಭಾರತದ ಮೇಲಿನ ಅವಲಂಬನೆ ಪ್ರಮುಖವಾಗಿದೆ ಎಂಬುದು ನೇಪಾಳ ಸರ್ಕಾರಕ್ಕೆ ಚೆನ್ನಾಗಿ ತಿಳಿದಿದೆ" ಎಂದು ಅವರು ಹೇಳುತ್ತಾರೆ.
ಭಾರತ ಸರ್ಕಾರದಿಂದ ಅಂತರ ಕಾಯ್ದುಕೊಳ್ಳುವ ಕುರಿತಂತೆ ನೇಪಾಳ ಎಷ್ಟೇ ಪ್ರಯತ್ನಿಸಿದ್ದರೂ ಸಹ ಭಾರತದ ಮೇಲಿನ ಅವರ ಅವಲಂಬನೆಯಿಂದಾಗಿ ಖಂಡಿತವಾಗಿಯೂ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಜನರು, ಸರ್ಕಾರದ ವಿಶ್ವಾಸ ಹೆಚ್ಚಳವಾಗುತ್ತದೆ ಎನ್ನುತ್ತಾರೆ ತ್ರಿಪಾಠಿ.
ನೇಪಾಳದಲ್ಲಿಯೂ ಜನರಿಂದ ಅಲ್ಲಿನ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ಧರಣಿಗಳು ನಡೆದಿದ್ದು, ಸರ್ಕಾರದ ಕಾರ್ಯಚಟುವಟಿಕೆ ಬಗ್ಗೆ ಅಲ್ಲಿನ ಜನರು ಸಹ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಆದ್ದರಿಂದ ಅಂತಹ ಸಂದರ್ಭದಲ್ಲಿ, ನಾವು ಅಭಿವೃದ್ಧಿಗಾಗಿ ನೇಪಾಳದ ಜೊತೆ ಉತ್ತಮ ಸಂಬಂಧ ಹೊಂದಲು ಬಯಸುತ್ತಿದ್ದೇವೆ ಎಂಬ ಸಂದೇಶವನ್ನು ಭಾರತದ ಕಡೆಯಿಂದ ಅವರಿಗೆ ಕಳುಹಿಸಲಾಗುವುದು.
"ನೇಪಾಳ ಮತ್ತು ಭಾರತದ ಹಿತದೃಷ್ಟಿಯಿಂದ ನೇಪಾಳವು ಸಂತಸಗೊಂಡಿದೆಯೇ ಹೊರತು ಭಾರತವು ಸಹ ದೊಡ್ಡ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ನೇಪಾಳಕ್ಕೆ ಕೊಟ್ಟಿರುವ ವಿಷಯದಿಂದಲ್ಲ. ಪ್ರಸ್ತುತ ಇರುವ ಮತ್ತು ಕಾಮಗಾರಿ ಹಂತದಲ್ಲಿರುವ ಯಾವುದೇ ಯೋಜನೆಗಳು ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿರುವ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉಭಯ ರಾಷ್ಟ್ರಗಳು ಮನಗಂಡಿವೆ ”ಎಂದು ತ್ರಿಪಾಠಿ ಗಮನ ಸೆಳೆದಿದ್ದಾರೆ.
ನೇಪಾಳ ದೇಶವು ಸುತ್ತಲೂ ಭೂಪ್ರದೇಶದಿಂದ ಆವೃತವಾಗಿದೆ. ಅದಕ್ಕೆ ಯಾವುದೇ ಸಮುದ್ರ ಮಾರ್ಗವಿಲ್ಲ. ಹೀಗಾಗಿ, ಆ ದೇಶಕ್ಕೆ, ಆಮದು ಮತ್ತು ರಫ್ತಿಗೆ ವ್ಯಾಪಾರ ಮಾರ್ಗ ಇದುವರೆಗೆ ಭಾರತ ದೇಶ ಮಾತ್ರವಾಗಿದೆ. ವಿಶ್ವದ ಯಾವುದೇ ಭಾಗದಿಂದ ನೇಪಾಳಕ್ಕೆ ಬರುವ ಎಲ್ಲ ಸರಕುಗಳನ್ನು ಭಾರತದ ಮೂಲಕವೇ ಕಳುಹಿಸಬೇಕು, ಬೇರೆಡೆಯಿಂದ ಬರುವ ಸರಕುಗಳು ಭಾರತೀಯ ಬಂದರುಗಳಲ್ಲಿ ಇಳಿಯುತ್ತವೆ ಮತ್ತು ಅಂತಿಮವಾಗಿ ನೇಪಾಳಕ್ಕೆ ಸಾಗಿಸಲ್ಪಡುತ್ತವೆ ಎಂದು ತ್ರಿಪಾಠಿ ವಿವರಿಸುತ್ತಾರೆ.