ನವದೆಹಲಿ:ಏಕಪಕ್ಷೀಯ ಬದಲಾವಣೆಗಳು ನ್ಯಾಯಯುತ ಮತ್ತು ಸ್ವೀಕಾರಾರ್ಹವಲ್ಲ ಎಂದ ಕೇಂದ್ರ ಸರ್ಕಾರವು ಮೆಸೇಜಿಂಗ್ ಅಪ್ಲಿಕೇಶನ್‌ನ ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ವಾಟ್ಸಾಪ್ಗೆ ಸೂಚಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್‌ಗೆ ಈ ಕುರಿತು ಪತ್ರ ಬರೆಯಲಾಗಿದೆ. ಜಾಗತಿಕವಾಗಿ ಭಾರತವು ವಾಟ್ಸಾಪ್‌ನ ಅತಿದೊಡ್ಡ ಬಳಕೆದಾರರ ನೆಲೆ ಮತ್ತು ಅದರ ಸೇವೆಗಳ ಬಹು ದೊಡ್ಡ ಮಾರುಕಟ್ಟೆಯಾಗಿದೆ.
ವಾಟ್ಸಾಪ್ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಪ್ರಸ್ತಾಪಿತ ಬದಲಾವಣೆಗಳು ಭಾರತೀಯ ನಾಗರಿಕರ ಆಯ್ಕೆ ಮತ್ತು ಸ್ವಾಯತ್ತತೆಗೆ ಉಂಟಾಗುವ ಪರಿಣಾಮಗಳ ಬಗ್ಗೆ ಗಂಭೀರ ಕಳವಳ ಉಂಟುಮಾಡುತ್ತವೆ ಎಂದು ಬರೆದಿದೆ.