ಕರ್ನಾಟಕ

karnataka

ETV Bharat / business

ಜಾಗತಿಕ ಆರ್ಥಿಕತೆ ಜತೆಗೆ ಭಾರತದ ವಿತ್ತೀಯ ಸ್ಥಿತಿ ತೀರಾ ಕೆಟ್ಟದಾಗಿದೆ: ಬ್ಯಾನರ್ಜಿ ಖೇದ - ಜಾಗತಿಕ ಆರ್ಥಿಕತೆ

ವರ್ಚ್ಯುವಲ್​ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ, ಭಾರತದ ಆರ್ಥಿಕತೆಯು ಜಾಗತಿಕ ಆರ್ಥಿಕತೆಯಂತೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ದೇಶದ ಆರ್ಥಿಕತೆಯು ಪುನರುಜ್ಜೀವನ ಕಾಣಲಿದೆ. 2021ರಲ್ಲಿ ಆರ್ಥಿಕ ಬೆಳವಣಿಗೆ ಈ ವರ್ಷಕ್ಕಿಂತ ಉತ್ತಮವಾಗಲಿದೆ ಎಂದರು.

Abhijit Banerjee
ನೊಬೆಲ್ ಪುರಸ್ಕೃತ ಬ್ಯಾನರ್ಜಿ

By

Published : Sep 30, 2020, 3:58 PM IST

ನವದೆಹಲಿ: ವಿಶ್ವದ ಅತ್ಯಂತ ಕೆಟ್ಟ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರದ ಆರ್ಥಿಕ ಉತ್ತೇಜನೆಯು ಅಸಮರ್ಪಕವಾಗಿದೆ ಎಂದು ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ .

ಪ್ರಸಕ್ತ ಹಣಕಾಸು ವರ್ಷದ ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ವಿತ್ತೀಯ ಬೆಳವಣಿಗೆಯ ಪುನರುಜ್ಜೀವನ ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವರ್ಚ್ಯುವಲ್​ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ಯಾನರ್ಜಿ, ಕೋವಿಡ್​ - 19 ಸಾಂಕ್ರಾಮಿಕ ಹೊಡೆತಕ್ಕೆ ಮುಂಚೆಯೇ ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿತ್ತು. ನೈಜ ಜಿಡಿಪಿ ಬೆಳವಣಿಗೆಯು 2017-18ರಲ್ಲಿ 7 ಪ್ರತಿಶತದಿಂದ 2018-19ರಲ್ಲಿ 6.1ಕ್ಕೆ ಮತ್ತು 2019-20ರಲ್ಲಿ ಶೇ 4.2ರಷ್ಟಿತ್ತು ಎಂದು ಹೇಳಿದರು.

ಭಾರತದ ಆರ್ಥಿಕತೆ ವಿಶ್ವದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ (ಜುಲೈ - ಸೆಪ್ಟೆಂಬರ್) ದೇಶದ ಆರ್ಥಿಕತೆ ಪುನರುಜ್ಜೀವನ ಕಾಣಲಿದೆ. 2021ರಲ್ಲಿ ಆರ್ಥಿಕ ಬೆಳವಣಿಗೆ ಈ ವರ್ಷಕ್ಕಿಂತ ಉತ್ತಮವಾಗಲಿದೆ ಎಂದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ದಾಖಲೆಯ ಶೇ 23.9ರಷ್ಟು ಕುಗ್ಗಿದೆ. ಗೋಲ್ಡ್​ಮನ್ ಸ್ಯಾಚ್ಸ್, 2020 - 21ರ ಜಿಡಿಪಿ ಮುನ್ಸೂಚನೆಯನ್ನು ಶೇ 14.8 ರಷ್ಟು ಕುಗ್ಗಲಿದೆ ಎಂದು ಅಂದಾಜಿಸಿದೆ. ಫಿಚ್ ರೇಟಿಂಗ್ಸ್ ಸಹ ಶೇ 10.5ರಷ್ಟು ಸಂಕುಚಿತಗೊಳ್ಳಲಿದೆ ಎಂದಿದೆ.

ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಪ್ರಾಧ್ಯಾಪಕರಾಗಿರುವ ಬ್ಯಾನರ್ಜಿ, ಭಾರತದ ಆರ್ಥಿಕ ಪ್ರಚೋದನೆಯು ಸಮರ್ಪಕವಾಗಿದೆ ಎಂದು ನಾನು ಭಾವಿಸುವುದಿಲ್ಲ. ಆರ್ಥಿಕ ಪ್ರಚೋದನೆಯು ಸೀಮಿತವಾಗಿತ್ತು. ಅದನ್ನು ಇನ್ನೂ ಹೆಚ್ಚಿನದನ್ನು ಮಾಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಪ್ರಚೋದಕ ಕ್ರಮಗಳು "ಕಡಿಮೆ ಆದಾಯದ ಜನರ ಬಳಕೆ ವೆಚ್ಚ ವೃದ್ಧಿಸಲಿಲ್ಲ. ಏಕೆಂದರೆ, ಕಡಿಮೆ ಆದಾಯ ಹೊಂದಿರುವ ಜನರ ಕೈಗೆ ಹಣ ನೀಡಲು ಸರ್ಕಾರ ಸಿದ್ಧವಿಲ್ಲ ಎಂದು ವಿವರಿಸಿದರು.

ಮೇ ತಿಂಗಳಲ್ಲಿ ಕೇಂದ್ರವು 20.97 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿತ್ತು. ಇದರಲ್ಲಿ ಆರ್‌ಬಿಐನಿಂದ ದ್ರವ್ಯತೆ ಬೆಂಬಲವೂ ಸೇರಿದೆ.

ಹಣದುಬ್ಬರದ ಬಗ್ಗೆ ಮಾತನಾಡಿದ ಬ್ಯಾನರ್ಜಿ, ಭಾರತದ ಬೆಳವಣಿಗೆಯ ವಿತ್ತೀಯ ಕಾರ್ಯತಂತ್ರವು ಬಾಗಿಲು ಮುಚ್ಚಿದ ಆರ್ಥಿಕತೆಯಾಗಿದೆ. ಸರ್ಕಾರವು ಸಾಕಷ್ಟು ಬೇಡಿಕೆ ಸೃಷ್ಟಿಸಲಿದೆ. ಇದರಿಂದಾಗಿಯೇ ಹೆಚ್ಚಿನ ಬೆಳವಣಿಗೆ ಮತ್ತು ಹಣದುಬ್ಬರ ಉಂಟಾಗುತ್ತದೆ ಎಂದು ಅಂದಾಜಿಸಿದರು.

ಭಾರತವು 20 ವರ್ಷಗಳ ಅತ್ಯಧಿಕ ಹಣದುಬ್ಬರ ಮತ್ತು ಹೆಚ್ಚಿನ ಬೆಳವಣಿಗೆ ಹೊಂದಿತ್ತು. ಕಳೆದ 20 ವರ್ಷಗಳಲ್ಲಿ ಸ್ಥಿರವಾದ ಹೆಚ್ಚಿನ ಹಣದುಬ್ಬರದಿಂದ ದೇಶವು ಸಾಕಷ್ಟು ಲಾಭ ಗಳಿಸಿದೆ ಎಂದು ತಿಳಿಸಿದರು.

ಆರ್‌ಬಿಐನ ಕೊರತೆ ಹಣಗಳಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅರ್ಥಶಾಸ್ತ್ರಜ್ಞ, ಕೊರತೆ ಹಣಕಾಸು ಮಾಡುವುದು ಒಳ್ಳೆಯದು. ಸರ್ಕಾರದ ಆತ್ಮನಿರ್ಭರ ಭಾರತ ಉಪಕ್ರಮದಲ್ಲಿ 'ಆತ್ಮನಿರ್ಭರ' ಪದವನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಾಗಿದೆ. ಆತ್ಮೀಯರಿಗೆ ನಾವು ದೇಶೀಯವಾಗಿ ಒಳಹರಿವುಗಳನ್ನು ಖರೀದಿಗೆ ಸಮಸ್ಯೆಗಳಿವೆ. ಅದು ನನಗೆ ತಪ್ಪು ಕಲ್ಪನೆ ಅನುಸುತ್ತಿದೆ. ನಾವು ಉತ್ತಮವಾಗಿರುವುದರಲ್ಲಿ ಪರಿಣತಿ ಹೊಂದಬೇಕು. ನಾವು ಆಮದು ಮಾಡಿಕೊಳ್ಳಬೇಕಾದದ್ದನ್ನು ಆಮದು ಮಾಡಿಕೊಳ್ಳಬೇಕು ಎಂದು ಹೇಳಿದರು.

ಭಾರತವು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿರಬೇಕು. ಚೀನಾದಂತೆ ಭಾರತವು ಹಣಕಾಸು ಮತ್ತು ಬಂಡವಾಳ ಸ್ಥಳಾಂತರಿಸುವ ಅಗತ್ಯವಿದೆ. ಸಣ್ಣ ಉದ್ಯಮಿಗಳು ಅಭಿವೃದ್ಧಿ ಹೊಂದಲು ನೈಜ ಮೂಲಸೌಕರ್ಯಗಳನ್ನು ರಚಿಸಿಲ್ಲ ಎಂದರು.

ನೀತಿಗಳನ್ನು ರೂಪಿಸಲು ಭಾರತಕ್ಕೆ ಉತ್ತಮ ದತ್ತಾಂಶದ ಅಗತ್ಯವಿದೆ. ಕೃಷಿಯಂತಹ ವಿಪತ್ತುಗಳಿಗೆ ರೈತರು ಸಾಕಷ್ಟು ವಿಮಾ ಯೋಜನೆಗಳನ್ನು ಹೊಂದಿಲ್ಲ. ಭಾರತೀಯರು ಸಾರ್ವಜನಿಕ ವಲಯದ ಉದ್ಯೋಗಗಳ ಬಗ್ಗೆ ಗೀಳು ಹೊಂದಿದ್ದಾರೆ. ಆ ಉದ್ಯೋಗಗಳನ್ನು ಕಡಿಮೆ ಲಾಭದಾಯಕವಾಗಿಸುವ ಅವಶ್ಯಕತೆಯಿದೆ. ನಮಗೆ ದೊಡ್ಡ ಸಾರ್ವಜನಿಕ ವಲಯದ ಉದ್ಯೋಗಗಳು ಬೇಕಿದೆ ಎಂದು ಟೀಕಿಸಿದರು.

ನಾನು ಖಂಡಿತವಾಗಿಯೂ ಸರ್ಕಾರದ ಜತೆ ಕೆಲಸ ಮಾಡಲು ಸಿದ್ಧವಾಗಿದ್ದೇನೆ. ನಾನು ಭಾರತದ ಕಲ್ಯಾಣವನ್ನು ಹೃದಯದಿಂದ ಗೌರವಿಸುವ ವ್ಯಕ್ತಿ. ನಾವು ನಮ್ಮ ಸೈದ್ಧಾಂತಿಕ ಭಿನ್ನತೆಗಳನ್ನು ಬದಿಗಿರಿಸಬೇಕು ಎಂದರು.

ABOUT THE AUTHOR

...view details