ಕರ್ನಾಟಕ

karnataka

ETV Bharat / business

ಅವರು 70 ವರ್ಷ ಸಾಧಿಸಿದನ್ನು ನಾವು 5 ವರ್ಷದಲ್ಲಿ ಸಾಧಿಸಿದ್ದೇವೆ: ಪ್ರಧಾನಿ ಮೋದಿ - ಪ್ರಧಾನಿ ಮೋದಿ

ಐದು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯ ಗಾತ್ರ 5 ಟ್ರಿಲಿಯನ್​ ತಲುಪುವುದು ಕಷ್ಟಕರವೆಂದು ತೋರುತ್ತಿದೆ. ಬಿಜೆಪಿ ಆಡಳಿತದಲ್ಲಿ 1 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಆದರೆ, ಸ್ವಾತಂತ್ರ್ಯದ ಬಳಿಕದ ಈ 70 ವರ್ಷಗಳಲ್ಲಿ ಸಾಧಿಸಿದ್ದು 2 ಟ್ರಿಲಿಯನ್ ಡಾಲರ್​ ಆರ್ಥಿಕತೆಯಷ್ಟೆ. ಒಂದು ಟ್ರಿಲಿಯನ್​ ಗುರಿ ತಲುಪಿದವರಿಗೆ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ತಲುಪುವುದು ಕಷ್ಟವಾಗುವುದಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ಪ್ರಧಾನಿ ಮೋದಿ

By

Published : Aug 15, 2019, 11:32 AM IST

ನವದೆಹಲಿ:ಜಾಗತಿಕ ವ್ಯಾಪಾರ ನೀತಿ ಸರಳೀಕರಣದಲ್ಲಿ (ಈಸಿ ಆಫ್ ಡ್ಯುಯಿಂಗ್ ಬ್ಯುಸಿನೆಸ್​) ಭಾರತವನ್ನು ಟಾಪ್​ 50ರ ಪಟ್ಟಿಯಲ್ಲಿ ತರುವ ಗುರಿ ಇರಿಸಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

73ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸತತ ಪ್ರಯತ್ನ ಮತ್ತು ವ್ಯಾಪಾರ ನೀತಿಗಳ ಸರಳೀಕರಣದಿಂದ ಜಾಗತಿಕ ಈಸಿ ಆಫ್​ ಡ್ಯುಯಿಂಗ್​ ಬ್ಯುಸಿನೆಸ್​ ರಾಷ್ಟ್ರಗಳ ಸಾಲಿನಲ್ಲಿ ಭಾರತ ಸುಧಾರಣೆ ಕಂಡಿದೆ. ಮುಂದಿನ ದಿನಗಳಲ್ಲಿ ಭಾರತವನ್ನು ಅಗ್ರ 50ರ ಶ್ರೇಣಿಯಲ್ಲಿ ತರುವ ಪ್ರಯತ್ನಿಸುತ್ತೇವೆ ಎಂದರು.

ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರವು ₹ 100 ಲಕ್ಷ ಕೋಟಿ ಹೂಡಿಕೆ ಮಾಡಲಿದೆ. ಇದು ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸಲು ನೆರವಾಗಲಿದೆ. ‘ವ್ಯಾಪಾರ ಸುಲಭಗೊಳಿಸುವಿಕೆ’ ಶ್ರೇಯಾಂಕದಲ್ಲಿ ಭಾರತವು ಅಗ್ರ 50 ರಾಷ್ಟ್ರಗಳ ಸಾಲಿನಲ್ಲಿ ಮುಂದುವರಿಯಲು ನೆರವಾಗಲಿದೆ.

ಐದು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯ ಗಾತ್ರ 5 ಟ್ರಿಲಿಯನ್​ ತಲುಪುವುದು ಕಷ್ಟಕರವೆಂದು ತೋರುತ್ತಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಆರ್ಥಿಕತೆ 1 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಆದರೆ, ಸ್ವಾತಂತ್ರ್ಯದ ಬಳಿಕ ಈ 70 ವರ್ಷಗಳಲ್ಲಿ ಸಾಧಿಸಿದ್ದು 2 ಟ್ರಿಲಿಯನ್ ಡಾಲರ್​ ಆರ್ಥಿಕತೆಯಷ್ಟೆ. ಒಂದು ಟ್ರಿಲಿಯನ್​ ಗುರಿ ತಲುಪಿದವರಿಗೆ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ​ ತಲುಪುವುದು ಕಷ್ಟವಾಗುವುದಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ಬೆಳವಣಿಗೆಯ ಪ್ರಕ್ರಿಯೆಗೆ ನೆರವಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಸುಧಾರಣೆಗಳ ಬಗ್ಗೆ ಉಲ್ಲೇಖಿಸಿದ ಅವರು, ಬಂದರುಗಳ ನಿರ್ಮಾಣ, ಹೆದ್ದಾರಿ ನಿರ್ಮಾಣ, ರೈಲ್ವೆ, ವಿಮಾನ ನಿಲ್ದಾಣ, ಆಸ್ಪತ್ರೆ ಮತ್ತು ಶೈಕ್ಷಣಿಕ ರಂಗದಲ್ಲಿ ಶತಕೋಟಿ ಹಣ ಹೂಡಿಕೆ ಮಾಡಲಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ABOUT THE AUTHOR

...view details