ನವದೆಹಲಿ: ಈ ಹಣಕಾಸು ವರ್ಷದಲ್ಲಿ ಇದುವರೆಗೆ 39 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ 1.26 ಲಕ್ಷ ಕೋಟಿ ರೂ. ಮರುಪಾವತಿ ಮಾಡಿದೆ.
39.14 ಲಕ್ಷ ತೆರಿಗೆದಾರರಿಗೆ 1.26 ಲಕ್ಷ ಕೋಟಿ ರೂ. ಬಾಕಿ ತೆರಿಗೆ ಮರುಪಾವತಿ - Recent tax refund amount
ಪ್ರಸಕ್ತ ಹಣಕಾಸು ವರ್ಷದ ಅವಧಿಯಲ್ಲಿ 39.14 ಲಕ್ಷ ತೆರಿಗೆದಾರರಿಗೆ 1,26,909 ಕೋಟಿ ರೂ. ತೆರಿಗೆ ಮರು ಪಾವತಿ ನೀಡಲಾಗಿದೆ. ಇದರಲ್ಲಿ 37,21,584 ಪ್ರಕರಣಗಳಲ್ಲಿ 34,532 ಕೋಟಿ ರೂ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆದಾರರ 1,92,409 ಪ್ರಕರಣಗಳಲ್ಲಿ 92,376 ಕೋಟಿ ರೂ. ಮರುಪಾವತಿ ಆಗಿದೆ.
ತೆರಿಗೆ
ಈ ಅವಧಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಮರುಪಾವತಿ 34,532 ಕೋಟಿ ರೂ. ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ 92,376 ಕೋಟಿ ರೂ.ನಷ್ಟಿದೆ.
1,26,909 ಕೋಟಿ ರೂ. ತೆರಿಗೆ ಮರುಪಾವತಿ ನೀಡಲಾಗಿದೆ. 39.14 ಲಕ್ಷ ತೆರಿಗೆದಾರರಿಗೆ ಮರುಪಾವತಿ ಸಿಕ್ಕಿದೆ. 37,21,584 ಪ್ರಕರಣಗಳಲ್ಲಿ 34,532 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆದಾರರ 1,92,409 ಪ್ರಕರಣಗಳಲ್ಲಿ (2020ರ ಅಕ್ಟೋಬರ್ 27 ರವರೆಗೆ) 92,376 ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.