ನವದೆಹಲಿ:ತೆರಿಗೆಯಂತಹ ಪ್ರಕರಣಗಳನ್ನು ಈಗ ಮುಖರಹಿತ ಮೌಲ್ಯಮಾಪನದಡಿಯಲ್ಲಿ ನಿರ್ವಹಿಸಲಾಗುವುದು. ಪರಿಶೀಲನೆಗೆ ಒಳಪಡುವ ಮೌಲ್ಯಮಾಪಕರಿಗೆ ಆದಾಯ ತೆರಿಗೆ ಇಲಾಖೆ ಶೀಘ್ರದಲ್ಲೇ ಮಾಹಿತಿ ಕಳುಹಿಸಲು ಪ್ರಾರಂಭಿಸುತ್ತದೆ ಎಂದು ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡಸ್ಟ್ರಿ ಒಕ್ಕೂಟ ಪಿಎಚ್‌ಡಿಸಿಸಿಐ ಆಯೋಜಿಸಿರುವ ವೆಬ್‌ನಾರ್‌ನಲ್ಲಿ ಮಾತನಾಡಿದ ಸಿಬಿಡಿಟಿ ಹೆಚ್ಚುವರಿ ಆಯುಕ್ತ ಜೈಶ್ರೀ ಶರ್ಮಾ, ದೇಶಿಯ ವರ್ಗಾವಣೆ ದರ ಪ್ರಕರಣಗಳನ್ನೂ ಮುಖರಹಿತ ಮೌಲ್ಯಮಾಪನ ಕಾರ್ಯವಿಧಾನದ ವ್ಯಾಪ್ತಿಗೆ ತರಲಾಗುವುದು. ಮರುಮೌಲ್ಯಮಾಪನ ಪ್ರಕರಣಗಳು ಫೇಸ್ಲೆಸ್ ಯೋಜನೆಯ ಭಾಗವಾಗಲಿದೆ ಎಂದರು.
ಹಿಂದಿನ ನೋಟಿಸ್‌ಗಳು ಇನ್ನೂ ಮಾನ್ಯವಾಗಿವೆಯೇ ಎಂಬ ಪ್ರಶ್ನೆಗೆ, ಹಿಂದಿನ ನೋಟಿಸ್‌ಗಳು ಅನಗತ್ಯ ಆಗುವುದಿಲ್ಲ. ಮೊದಲು, ನಿಮ್ಮ ಪ್ರಕರಣವನ್ನು ಈಗ ಮುಖರಹಿತ ಮೌಲ್ಯಮಾಪನ ಯೋಜನೆಯಡಿ ಅಸಿಸ್ಮೆಂಟ್ ಮಾಡಲಾಗುವುದು. ಮೌಲ್ಯಮಾಪನ ಯೂನಿಟ್ ಅಧಿಕಾರಿ ಹೆಚ್ಚಿನ ಮಾಹಿತಿ ಬೇಕೆಂದು ಭಾವಿಸಿದರೆ ಅವರಿಗೆ 142 (1) ಅಡಿಯಲ್ಲಿ ಹೊಸ (ಸೂಚನೆ) ಮಾಹಿತಿ ಕಳುಹಿಸಲಾಗುತ್ತೆ ಎಂದರು.