ನವದೆಹಲಿ:ತಮಿಳುನಾಡಿನ ಕೊಯಮತ್ತೂರು, ಈರೋಡ್, ಚೆನ್ನೈ ಮತ್ತು ನಾಮಕ್ಕಲ್‌ನ 22 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಶಿಕ್ಷಣ ಸಂಸ್ಥೆ ಸಮೂಹ ಹಾಗೂ ಅದರ ಸಹಚರ ಗುತ್ತಿಗೆದಾರರಿ ಹೂಡಿಕೆ ಹಾಗೂ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸಾಮಾನ್ಯ ಖಾತೆಗಳ ಪುಸ್ತಕಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ ಸಂಪೂರ್ಣವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂಬ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿದೆ.
ಶೋಧಕಾರ್ಯದ ವೇಳೆ ದೊರೆತ ಪುರಾವೆಗಳು ಸ್ವೀಕರಿಸಿದ ಶುಲ್ಕ ನಿಗ್ರಹಿಸುವ ಕುರಿತಾದ ಆರೋಪಗಳು ನಿಜವೆಂದು ತಿಳಿದು ಬಂದಿದೆ. ಲೆಕ್ಕವಿಲ್ಲದ ರಶೀದಿಗಳನ್ನು ಟ್ರಸ್ಟಿಗಳ ವೈಯಕ್ತಿಕ ಖಾತೆಗಳಿಗೆ ಕಳುಹಿಸಲಾಗುತ್ತದೆ. ಕಂಪನಿಯ ಮೂಲಕ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.