ಕರ್ನಾಟಕ

karnataka

ETV Bharat / business

ಪಾಲಿಸಿ ಹಕ್ಕು ಇತ್ಯರ್ಥದಲ್ಲಿ ಟೆಲಿಮೆಡಿಸಿನ್ ಸೇರಿಸಿ: ವಿಮೆದಾರರಿಗೆ ಐಆರ್​ಡಿಎಐ ತಾಕೀತು - ಐಆರ್​ಡಿಎಐ

ಕೊರೊನಾ ವೈರಸ್ ಹರಡುವುದನ್ನು ತಡೆಯುವ ಲಾಕ್‌ಡೌನ್ ದೃಷ್ಟಿಯಿಂದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ), ಮಾರ್ಚ್ 25ರಂದು ಟೆಲಿಮೆಡಿಸಿನ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

Health Insurance
ಆರೋಗ್ಯ ವಿಮೆ

By

Published : Jun 11, 2020, 11:31 PM IST

ನವದೆಹಲಿ:ವಿಮೆದಾರರ ಪರಿಹಾರವಾಗಿ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ (ಐಆರ್​ಡಿಎಐ) ಗುರುವಾರ, ಆರೋಗ್ಯ ಮತ್ತು ಸಾಮಾನ್ಯ ವಿಮೆದಾರರಿಗೆ ಪಾಲಿಸಿಯ ಹಕ್ಕು ಇತ್ಯರ್ಥದ ಭಾಗವಾಗಿ ಟೆಲಿಮೆಡಿಸಿನ್ ಸೇರಿಸುವಂತೆ ನಿರ್ದೇಶಿಸಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಯುವ ಲಾಕ್‌ಡೌನ್ ದೃಷ್ಟಿಯಿಂದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ), ಮಾರ್ಚ್ 25ರಂದು 'ಟೆಲಿಮೆಡಿಸಿನ್ ಮಾರ್ಗಸೂಚಿ'ಗಳನ್ನು ಬಿಡುಗಡೆ ಮಾಡಿತ್ತು. ನೋಂದಾಯಿತ ವೈದ್ಯಕೀಯ ವೈದ್ಯರಿಗೆ ಟೆಲಿಮೆಡಿಸಿನ್ ಬಳಸಿ ಆರೋಗ್ಯ ಸೇವೆ ಒದಗಿಸಲು ಅನುವು ಮಾಡಿಕೊಡುತ್ತದೆ.

ಟೆಲಿಮೆಡಿಸಿನ್ ಅನುಮತಿಸುವ ನಿಬಂಧನೆಯು ವಿಮಾದಾರರ ಹಕ್ಕು ಇತ್ಯರ್ಥದ ಭಾಗವಾಗಿರುತ್ತದೆ. ಯಾವುದೇ ಮಾರ್ಪಾಡಿಗಾಗಿ ಪ್ರಾಧಿಕಾರದೊಂದಿಗೆ ಪ್ರತ್ಯೇಕವಾಗಿ ಸಲ್ಲಿಸಬೇಕಾಗಿಲ್ಲ. ಉತ್ಪನ್ನದ ಮಾಸಿಕ/ವಾರ್ಷಿಕ ಮಿತಿಗಳ ಇತ್ಯಾದಿ ನಿಯಮಗಳಿವೆ. ಯಾವುದೇ ನಿರ್ಬಂಧ ಇಲ್ಲದೆ ಅರ್ಜಿ ಸಲ್ಲಿಸಿ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಎಲ್ಲಾ ಆರೋಗ್ಯ ಮತ್ತು ಸಾಮಾನ್ಯ ವಿಮೆದಾರರಿಗೆ ಸುತ್ತೋಲೆಯಲ್ಲಿ ತಿಳಿಸಿದೆ.

ಪಾಲಿಸಿ ಒಪ್ಪಂದದ ನಿಯಮ ಮತ್ತು ಷರತ್ತುಗಳಲ್ಲಿ ವೈದ್ಯರೊಂದಿಗೆ ಸಮಾಲೋಚನೆಗೆ ಅನುಮತಿಸಿದಲ್ಲಿ ಎಲ್ಲ ವಿಮೆಗಾರರು ಟೆಲಿಮೆಡಿಸಿನ್‌ಗೆ ಅವಕಾಶ ನೀಡಬೇಕು ಎಂದು ಹೇಳಿದೆ.

ABOUT THE AUTHOR

...view details