ನವದೆಹಲಿ:ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲೆತ್ತಿ ಸುಧಾರಿಸುವುದು ಸರ್ಕಾರದ ಕೆಲಸವೇ ಹೊರತು ಕಾಮಿಡಿ ಸರ್ಕಸ್ ಮಾಡುವುದರಲ್ಲಿ ಅಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಪಿಯೂಷ್ ಗೋಯಲ್ಗೆ ತಿರುಗೇಟು ನೀಡಿದ್ದಾರೆ.
ಕಾಮಿಡಿ ಸರ್ಕಸ್ ಬಿಟ್ಟು ಕುಸಿದ ಆರ್ಥಿಕತೆ ಮೇಲೆತ್ತಿ: ಗೋಯಲ್ಗೆ ಪ್ರಿಯಾಂಕಾ ವಾದ್ರಾ ತಿರುಗೇಟು..! - Economy
ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರನ್ನು ಟೀಕಿಸಿದ್ದ ಪಿಯೂಷ್ ಗೋಯಲ್ ಅವರನ್ನು ಗುರಿಯಾಗಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಮುಖಂಡರು ತಮ್ಮ ಕೆಲಸ ಮಾಡುವ ಬದಲು ಇತರರ ಸಾಧನೆಯ ಬಗ್ಗೆ ಮಾತನಾಡುತ್ತಾರೆ. ನೊಬೆಲ್ ಪುರಸ್ಕೃತರು ಪ್ರಾಮಾಣಿಕವಾಗಿ ಅವರ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ನೊಬೆಲ್ ದೊರೆತಿದೆ ಎಂದು ಪ್ರಿಯಾಂಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಪಿಯೂಷ್ ಗೋಯಲ್, ಅಭಿಜಿತ್ ಅವರು ಕಾಂಗ್ರೆಸ್ನ ನ್ಯಾಯ್ ಅನ್ನು ಬೆಂಬಲಿಸಿದ್ದಾರೆ. ಆದರೆ, ಭಾರತೀಯರು ಅದನ್ನು ತಿರಸ್ಕರಿಸಿದ್ದಾರೆ. ಅಭಿಜಿತ್ ಬ್ಯಾನರ್ಜಿ ಅವರು ಎಡಪಂಥೀಯ ಒಲವು ಇರುವವರು ಎಂದು ಹೇಳಿದ್ದರು.
ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರನ್ನು ಟೀಕಿಸಿದ್ದ ಗೋಯಲ್ ಅವರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಮುಖಂಡರು ತಮ್ಮ ಕೆಲಸ ಮಾಡುವ ಬದಲು ಇತರರ ಸಾಧನೆಯ ಬಗ್ಗೆ ಮಾತನಾಡುತ್ತಾರೆ. ನೊಬೆಲ್ ಪುರಸ್ಕೃತರು ಪ್ರಾಮಾಣಿಕವಾಗಿ ಅವರ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ನೊಬೆಲ್ ದೊರೆತಿದೆ ಎಂದು ಪ್ರಿಯಾಂಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.