ಕರ್ನಾಟಕ

karnataka

ETV Bharat / business

ಕೋವಿಡ್​ ಸಂಕಷ್ಟದಲ್ಲಿ ಮಾನವ ಸಂಪನ್ಮೂಲ ಕ್ರೋಢೀಕರಣವೇ ಸವಾಲು ! - ಕಾರ್ಮಿಕ ದಿನಾಚರಣೆ

ಕಾರ್ಮಿಕರ ಕೊರತೆಯಿಂದ ಉದ್ಯಮಗಳು ಸಹಜವಾಗಿಯೇ ಉತ್ಪಾದನಾ ಪ್ರಮಾಣವನ್ನು ಕಡಿಮೆಗೊಳಿಸುವಂತಾಗಿದೆ. ಆದರೆ ಲಾಕ್​ಡೌನ್​ ಮುಗಿದ ನಂತರ ದೇಶದಲ್ಲಿ ಉಂಟಾಗುವ ಅಗತ್ಯ ವಸ್ತುಗಳ ಬೇಡಿಕೆಯ ಪ್ರಮಾಣವನ್ನು ಪೂರೈಸುವುದು ಹೇಗೆ ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ.

Importance of labour in times of covid-19
Importance of labour in times of covid-19

By

Published : May 1, 2020, 12:36 PM IST

ಇತ್ತೀಚಿನ ಕೆಲ ಸಮೀಕ್ಷೆಗಳ ಪ್ರಕಾರ ಭಾರತದ ಶೇ. 25 ರಷ್ಟು ಗ್ರಾಮೀಣ ಕುಟುಂಬಗಳು ಹಾಗೂ ಶೇ. 12 ರಷ್ಟು ನಗರ ಪ್ರದೇಶದ ಕುಟುಂಬಗಳು ನಿತ್ಯದ ದುಡಿಮೆಯ ಸಂಪಾದನೆಯ ಮೇಲೆ ಜೀವನ ಸಾಗಿಸುತ್ತಿವೆ. ನಗರ ಪ್ರದೇಶಗಳಲ್ಲಿ ಶೇ. 40 ರಷ್ಟು ಜನ ನಿಯಮಿತವಾಗಿ ಪ್ರತಿತಿಂಗಳು ಸಂಬಳ ಪಡೆಯುತ್ತಾರಾದರೂ ಇವರ ಕೆಲಸಕ್ಕೆ ಭದ್ರತೆ ಮಾತ್ರ ಇಲ್ಲ. ಕೃಷಿ ಹೊರತಾದ ಶೇ.70 ರಷ್ಟು ಸಂಬಳ ಪಡೆಯುವ ಉದ್ಯೋಗಿಗಳ ಕೆಲಸಕ್ಕೆ ಯಾವುದೇ ಲಿಖಿತ ಭದ್ರತೆ ನೀಡಲಾಗಿಲ್ಲ. ಇವರಲ್ಲಿ ಅರ್ಧದಷ್ಟು ಜನರಿಗೆ ಪಾವತಿ ರಜೆಯ (ಪೇಡ್​ ಲೀವ್) ಸೌಲಭ್ಯವೂ ಇಲ್ಲ. ಕೃಷಿ ವಲಯ ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಂಬಳದ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೇರಿದಂತೆ ಯಾವುದೇ ಸಾಮಾಜಿಕ ಭದ್ರತೆಯೂ ಇಲ್ಲ.

ಸದ್ಯ ಲಾಕ್​ಡೌನ್​ನಿಂದಾಗಿ ಮಾರುಕಟ್ಟೆ, ಕಾರ್ಖಾನೆಗಳು, ಉದ್ಯಮ, ಗೋಡೌನ್​, ಸಾರಿಗೆ ಹಾಗೂ ಪೂರೈಕೆ ಜಾಲ ವಲಯಕ್ಕೆ ಭಾರಿ ಪ್ರಮಾಣದ ಕಾರ್ಮಿಕರ ಕೊರತೆ ಉಂಟಾಗಿದೆ. ಲಕ್ಷಾಂತರ ವಲಸೆ ಕಾರ್ಮಿಕರು ಒಂದೋ ತಮ್ಮೂರಿಗೆ ಮರಳಿದ್ದಾರೆ ಅಥವಾ ಮನೆಗಳಲ್ಲಿ ಉಳಿದುಬಿಟ್ಟಿದ್ದಾರೆ. ದೇಶದ ಅಲ್ಲಲ್ಲಿ ಕಂಟೈನ್​ಮೆಂಟ್​ ಪ್ರದೇಶಗಳು ಹೆಚ್ಚಾಗುತ್ತಿದ್ದಂತೆ ಈ ಕಾರ್ಮಿಕರಲ್ಲಿ ಭಯದ ವಾತಾವರಣ ಹೆಚ್ಚಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಉದ್ಯಮಗಳು ತಮಗೆ ಅಗತ್ಯವಿರುವ ಒಟ್ಟು ಕಾರ್ಮಿಕರ ಶೇ. 20 ರಷ್ಟು ಕಾರ್ಮಿಕರನ್ನು ಒಟ್ಟುಗೂಡಿಸಲು ಸಹ ಪರದಾಡುವಂತಾಗಿದೆ.

ಕಾರ್ಮಿಕರ ಕೊರತೆಯಿಂದ ಉದ್ಯಮಗಳು ಸಹಜವಾಗಿಯೇ ಉತ್ಪಾದನಾ ಪ್ರಮಾಣವನ್ನು ಕಡಿಮೆಗೊಳಿಸುವಂತಾಗಿದೆ. ಆದರೆ ಲಾಕ್​ಡೌನ್​ ಮುಗಿದ ನಂತರ ದೇಶದಲ್ಲಿ ಉಂಟಾಗುವ ಅಗತ್ಯ ವಸ್ತುಗಳ ಬೇಡಿಕೆಯ ಪ್ರಮಾಣವನ್ನು ಪೂರೈಸುವುದು ಹೇಗೆ ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ.

ಅಗತ್ಯ ವಸ್ತುಗಳ ತಯಾರಿಕೆ ಹಾಗೂ ಪೂರೈಕೆ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಹೋಗಬೇಕೆಂದು ಹಲವಾರು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಬೇಡಿಕೆ ಇಟ್ಟಿವೆ. ಕೃಷಿ, ಕೈಗಾರಿಕೆ ಹಾಗೂ ಇನ್ನಿತರ ಕ್ಷೇತ್ರದ ಉತ್ಪನ್ನಗಳನ್ನು ಮಾರುಕಟ್ಟೆಯವರೆಗೆ ತರುವ ಹಾಗೂ ಅದನ್ನು ವಾಹನಗಳಿಂದ ಇಳಿಸುವ ಕೆಲಸಗಳಿಗೆ ಭಾರಿ ಪ್ರಮಾಣದ ಕಾರ್ಮಿಕ ಬಲ ಅಗತ್ಯವಿರುವುದು ಗಮನಾರ್ಹ.

ಸದ್ಯ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಸಾಗಣೆ ಕಷ್ಟಕರವಾಗಿದೆ. ಬೇಡಿಕೆ ಹಾಗೂ ಪೂರೈಕೆ ಜಾಲವನ್ನು ಮತ್ತೆ ಹಳಿಗೆ ತರಬೇಕಾದರೆ ಸಾರಿಗೆ ವ್ಯವಸ್ಥೆಯನ್ನು ಮುಕ್ತಗೊಳಿಸುವುದು ಅತಿ ಅಗತ್ಯವಾಗಿದೆ. ಮಾರುಕಟ್ಟೆಯಲ್ಲಿ ದೊರಕುವ ವಸ್ತುಗಳ ದರ ಹಾಗೂ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕ ಬಲಕ್ಕೂ ಅವಿನಾಭಾವ ಸಂಬಂಧವಿದೆ. ಯಾವುದೇ ಪ್ರದೇಶದಲ್ಲಿ ನೋಡಿದರೂ ವಲಸೆ ಕಾರ್ಮಿಕರಿಗಿಂತ ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಕೂಲಿ ನೀಡಬೇಕಾಗುತ್ತದೆ. ಆದರೆ ಬಹುತೇಕ ವಲಸೆ ಕಾರ್ಮಿಕರು ಈಗಾಗಲೇ ತಮ್ಮೂರು ಸೇರಿಕೊಂಡಿದ್ದಾರೆ ಹಾಗೂ ಇನ್ನು ಕೆಲವರು ಊರಿಗೆ ಹೋಗುವ ತಯಾರಿಯಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸ್ಥಳೀಯ ದುಬಾರಿ ಕಾರ್ಮಿರಿಂದ ಕೆಲಸ ಮಾಡಿಸಲಾಗದೆ ಹಲವಾರು ವ್ಯಾಪಾರಸ್ಥರು, ಉದ್ಯಮಿಗಳು ತಮ್ಮ ವ್ಯವಹಾರಗಳನ್ನೇ ಸ್ಥಗಿತಗೊಳಿಸಿದ್ದಾರೆ.

ಕಾರ್ಮಿಕರ ಕೊರತೆಯು ಕೃಷಿ ವಲಯಯಕ್ಕೆ ಇನ್ನಿಲ್ಲದಂತೆ ಬಾಧಿಸುತ್ತಿದೆ. ಈ ಬಾರಿ ಕಾರ್ಮಿಕರ ಕೊರತೆಯ ಕಾರಣ ಬಹುತೇಕ ಪಂಜಾಬ್​ ರೈತರು ಗೋಧಿಯ ಬದಲು ಹತ್ತಿ ಬೆಳೆ ಬಿತ್ತಲು ನಿರ್ಧರಿಸಿದ್ದಾರೆ. ಭತ್ತ ಕೃಷಿಗೆ ಸಹ ಹೆಚ್ಚಿನ ಕೂಲಿಯಾಳುಗಳ ಅಗತ್ಯವಿದೆ. ಕಾರ್ಮಿಕರ ಕೊರತೆಯಿಂದ ಈ ಬಾರಿ ಭತ್ತದ ಕೃಷಿ ಇಳಿಮುಖವಾದಲ್ಲಿ ಭವಿಷ್ಯದಲ್ಲಿ ಆಹಾರ ಕೊರತೆ ಸಮಸ್ಯೆ ಉದ್ಭವಿಸುವುದು ಶತಸಿದ್ಧ.

ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಮಿಕ ವಲಯದ ಸಮಸ್ಯೆಗಳು

- ವೇತನ ಕಡಿತ

- ಹಿಂದಿನ ತಿಂಗಳ ವೇತನ ನೀಡದಿರುವುದು

- ವಲಸೆ ಕಾರ್ಮಿಕರ ಸ್ಥಳ ಬದಲಾವಣೆ

- ವಾಸದ ಸ್ಥಳ ಹಾಗೂ ಸುರಕ್ಷತೆಯ ಕೊರತೆ

- ಊಟ, ತಿಂಡಿ ಸಿಗುವ ಬಗ್ಗೆ ಯಾವುದೇ ಖಾತ್ರಿ ಇಲ್ಲದಂತಾಗಿರುವುದು

ABOUT THE AUTHOR

...view details