ನವದೆಹಲಿ:ಮುಂದಿನ ವಾರದೊಳಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಜಾರಿಗೆ ತರುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿತು.
ಇಂದು ಕ್ಯಾಬಿನೆಟ್ ಕಾರ್ಯದರ್ಶಿಗಳು ಎಲ್ಲ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದರು. ತಬ್ಲಿಘಿ ಜಮಾತ್ ಹಾಟ್ ಸ್ಪಾಟ್ ಸೃಷ್ಟಿಸಿರುವ ಆತಂಕಗಳು ಬಗ್ಗೆ ಯಾವ ರಾಜ್ಯಗಳು ಅತಿಹೆಚ್ಚು ಸಂವೇದನಾ ಶೀಲವಾಗಿವೆ ಎಂದು ಕಾರ್ಯದರ್ಶಿಗಳು ಕೇಳಿದರು.
ಇದು ಅರ್ಹ ಫಲಾನುಭವಿಗಳಿಗೆ ದೊಡ್ಡ ಪ್ರಮಾಣದ ಹಣ ವರ್ಗಾವಣೆಯಂತಹ ಯೋಜನೆಯನ್ನು ಒಳಗೊಂಡಿರುತ್ತದೆ. ಕೊರೊನಾ ಸೋಂಕು ಹಬ್ಬುವಿಕೆ ತಪ್ಪಿಸುವ ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಲು ಇದನ್ನು ಅಚ್ಚರಿ ಎಂಬುವ ರೀತಿಯಲ್ಲಿ ಜಾರಿಗೆ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಾದ್ಯಂತ ಲಾಕ್‌ಡೌನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಗಮನಿಸಲಾಯಿತು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಾಗ ಯಾವುದೇ ಅಡೆತಡೆಯಿಲ್ಲದೆ ಸರಕುಗಳ ಅಂತರ - ರಾಜ್ಯ ಚಲನೆಯನ್ನು ಅನುಮತಿಸುವಂತೆ ರಾಜ್ಯಗಳನ್ನು ಕೋರಲಾಯಿತು.
ಅಗತ್ಯ ವಸ್ತುಗಳ ಉತ್ಪಾದನೆಯನ್ನು ಖಾತರಿ ಪಡಿಸಿಕೊಳ್ಳಬೇಕು. ಅಂತಹ ಸರಕುಗಳ ಪೂರೈಕೆ ಸರಪಳಿಗಳನ್ನು ನಿರ್ವಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಹೇಳಿದೆ.