ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ನೀತಿಗಳನ್ನು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಖಂಡಿಸಿದೆ.
ತನ್ನ ಬ್ಲಾಗ್‌ನಲ್ಲಿ 'ಟೈಮಿಂಗ್ ದಿ ಕರೆನ್ಸಿ ಹೈಪ್' ಎಂಬ ಶೀರ್ಷಿಕೆಯಡಿ 'ಐಎಂಎಫ್ ಚೀನಾದ ಮೇಲೆ ಅಮೆರಿಕ ವಿಧಿಸಿದ ಹೆಚ್ಚುವರಿ ಸುಂಕ ಉಭಯ ದೇಶಗಳ ವ್ಯಾಪಾರ ಕೊರತೆಯನ್ನು ಸರಿಪಡಿಸುವುದಿಲ್ಲ. ಬಡ್ಡಿದರ ಕಡಿತದ ಮೂಲಕ ಅಮೆರಿಕದ ಡಾಲರ್ ಮೌಲ್ಯ ದುರ್ಬಲಗೊಳಿಸುವುದಿಲ್ಲ ಎಂದು ಟೀಕಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದು ಅಸಾಮಾನ್ಯವಾದ ಮೊಂಡುತನ. ಅವರ ನೀತಿಗಳು ಪ್ರತಿರೋಧಕ ಆಗಿದ್ದರಿಂದ ಅಪೇಕ್ಷಿತವಾದ ಫಲಿತಾಂಶಗಳು ಹೊರಹೊಮ್ಮುವುದಿಲ್ಲ. ಅವರ ನೀತಿಗಳಿಂದ ಜಾಗತಿಕ ಆರ್ಥಿಕತೆಯನ್ನೇ ನಿಧಾನಗೊಳಿಸುತ್ತದೆ ಎಂದು ಐಎಂಎಫ್ ಎಚ್ಚರಿಸಿದೆ.
ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾದ ಗುಸ್ಟಾವೊ ಆಡ್ಲರ್, ಲೂಯಿಸ್ ಕ್ಯೂಬೆಡ್ಡು ಮತ್ತು ಭಾರತ ಮೂಲದ ಗೀತಾ ಗೋಪಿನಾಥ್ ಅವರು ಬ್ಲಾಗ್ ಬರಹದ ಸಹ ಲೇಖಕರಾಗಿದ್ದು, 'ದ್ವಿಪಕ್ಷೀಯವಾದ ಹೆಚ್ಚುವರಿ ಸುಂಕ ನೀತಿಗಳು ವ್ಯಾಪಾರದ ಅಸಮತೋಲನವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಸಮತೋಲನಕ್ಕೆ ಯತ್ನಿಸಿದರೆ ವ್ಯಾಪಾರವು ಇತರ ದೇಶಗಳಿಗೆ ವರ್ಗಾವಣೆ ಆಗುತ್ತವೆ. ಸುಂಕ ಏರಿಕೆಯಿಂದ ಉತ್ಪಾದಕರ ಮತ್ತು ಗ್ರಾಹಕರ ವೆಚ್ಚ ಹೆಚ್ಚಳವಾಗುತ್ತದೆ. ವ್ಯಾಪಾರದ ವಿಶ್ವಾಸ ಮತ್ತು ಹೂಡಿಕೆಯನ್ನು ಉಳಿಸುವುದು ಹಾಗೂ ಜಾಗತಿಕ ಪೂರೈಕೆಯ ಸರಪಳಿಗಳಿಗೆ ಅಡ್ಡಿಪಡಿಸಿದಂತಾಗುತ್ತದೆ. ಈ ಮೂಲಕ ದೇಶೀಯ ಮತ್ತು ಜಾಗತಿಕ ಬೆಳವಣಿಗೆಗೆ ಹಾನಿಯಾಗುವ ಸಾಧ್ಯತೆಯಿದೆ' ಎಂದು ವಿಮರ್ಶಾತ್ಮಕವಾಗಿ ಟ್ರಂಪ್ ಅವರ ಸುಂಕ ದರ ಏರಿಕೆಯನ್ನು ಖಂಡಿಸಿದ್ದಾರೆ.
ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾದ ಗುಸ್ಟಾವೊ ಆಡ್ಲರ್, ಲೂಯಿಸ್ ಕ್ಯೂಬೆಡ್ಡು ಮತ್ತು ಗೀತಾ ಗೋಪಿನಾಥ್ ಅವರು ಬರೆದ 'ಟೈಮಿಂಗ್ ದಿ ಕರೆನ್ಸಿ ಹೈಪ್' ಕುರಿತ ಹೆಚ್ಚಿನ ಮಾಹಿತಿhttps://blogs.imf.org/2019/08/21/taming-the-currency-hype/ಲಿಂಕ್ನಲ್ಲಿ ಲಭ್ಯವಿದೆ.