ಕರ್ನಾಟಕ

karnataka

ETV Bharat / business

2021ರಲ್ಲಿ ಭಾರತದ ಜಿಡಿಪಿ ಶೇ. 11.5ರಷ್ಟು ಬೆಳವಣಿಗೆ: ಐಎಂಎಫ್​

2021ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ. 11.5ರಷ್ಟು ಬೆಳವಣಿಗೆ ದಾಖಲು ಮಾಡಲಿದ್ದು, ಇಷ್ಟೊಂದು ಅಭಿವೃದ್ಧಿ ಕಾಣುವ ವಿಶ್ವದ ಏಕೈಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಐಎಂಎಫ್​ ಹೇಳಿದೆ.

IMF
IMF

By

Published : Jan 26, 2021, 10:22 PM IST

ನವದೆಹಲಿ:ವಿಶ್ವವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದು, ಆರ್ಥಿಕವಾಗಿ ಚೇತರಿಕೆ ಕಾಣಲು ಎಲ್ಲಾ ದೇಶಗಳು ಹರಸಾಹಸ ಪಡುತ್ತಿವೆ. ಇದರ ಮಧ್ಯೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಹತ್ವದ ಪ್ರಕಟಣೆ ಹೊರಡಿಸಿದೆ.

2021ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ. 11.5ರಷ್ಟು ಬೆಳವಣಿಗೆ ದಾಖಲು ಮಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದು, ಇಷ್ಟೊಂದು ಬೆಳವಣಿಗೆ ದಾಖಲು ಮಾಡುವ ವಿಶ್ವದ ಏಕೈಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದಿದೆ.

ಇದನ್ನೂ ಓದಿ: ತೈಲ ದರ ಹೆಚ್ಚಳದಿಂದ ಕಂಪ್ರೈಸ್ಡ್​​ ನ್ಯಾಚುರಲ್​ ಗ್ಯಾಸ್​​ ಚಾಲಿತ ವಾಹನಗಳಿಗೆ ಶುಕ್ರದೆಸೆ: ವರದಿ

ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ಭಾರತದ ಬೆಳವಣಿಗೆ ಶೇ. 8ರಷ್ಟು ಕುಗ್ಗಿದೆ. ಆದರೆ ಇದೀಗ ಆರ್ಥಿಕತೆ ಹಾಗೂ ಅಭಿವೃದ್ಧಿ ಹೆಚ್ಚುತ್ತಿರುವ ಕಾರಣ ಈ ಬೆಳವಣಿಗೆ ಕಂಡು ಬರಲಿದೆ ಎಂದಿದೆ. ಉಳಿದಂತೆ ಚೀನಾ 2021ರಲ್ಲಿ ಶೇ. 8.1, ಸ್ಪೇನ್​ ಶೇ. 5.9 ಮತ್ತು ಫ್ರಾನ್ಸ್​ ಶೇ. 5.5ರಷ್ಟು ಬೆಳವಣಿಗೆ ದರ ದಾಖಲು ಮಾಡಲಿವೆ ಎಂದು ತಿಳಿಸಿದೆ. ಕೊರೊನಾ ವೈರಸ್​ ನಂತರ ಭಾರತ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ಅನೇಕ ಅಭಿವೃದ್ಧಿಪರ ಯೋಜನೆ ಹಮ್ಮಿಕೊಂಡಿದೆ ಎಂದು ಐಎಂಎಫ್ ಹೇಳಿದೆ.

ABOUT THE AUTHOR

...view details