ಕರ್ನಾಟಕ

karnataka

ETV Bharat / business

ಕೊರೊನಾ ಬಿಕ್ಕಟ್ಟು ಮಾನವೀಯತೆಯ ಕರಾಳ ಸಮಯ.. IMF ಮುಖ್ಯಸ್ಥೆ ವಿಷಾದ

ಈ ಬಿಕ್ಕಟ್ಟನ್ನು ಎದುರಿಸಲು ಐಎಂಎಫ್ ತೆಗೆದುಕೊಂಡ ಆರ್ಥಿಕ ಕ್ರಮಗಳ ಭಾಗವಾಗಿ ತುರ್ತು ನಿಧಿಯ ಈ ಹಿಂದಿನ 50 ಬಿಲಿಯನ್ ಡಾಲರ್‌ ಮೊತ್ತವನ್ನು 100 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳ್ಳಲಿದೆ. ಸೋಂಕಿನ ಬಿಕ್ಕಟ್ಟು ಎದುರಿಸಲು ದಾಖಲೆಯ 85 ರಾಷ್ಟ್ರಗಳು ತುರ್ತು ಹಣದ ನೆರವಿಗಾಗಿ ಐಎಂಎಫ್​ ಸಂಪರ್ಕಿಸಿವೆ. ಹಾಗಾಗಿ ಹಣಕಾಸಿನ ಬೇಡಿಕೆ ಗಗನಕ್ಕೇರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೆ ಐಎಂಎಫ್ ಸಂಪನ್ಮೂಲಗಳತ್ತ ಆದ್ಯತೆ ನೀಡಲಿದೆ.

Kristalina Georgieva
ಕ್ರಿಸ್ಟಲಿನಾ ಜಾರ್ಜೀವಾ

By

Published : Apr 7, 2020, 7:19 PM IST

ನವದೆಹಲಿ :ವಿಶ್ವದ ಎಲ್ಲಾ ರಾಷ್ಟ್ರಗಳು ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಅದು ತಂದೊಡ್ಡುತ್ತಿರುವ ಆರ್ಥಿಕ ಪರಿಣಾಮಗಳ ವಿರುದ್ಧ ಸೆಣಸಾಡುತ್ತಿವೆ. ಎಲ್ಲಾ ಪ್ರಮುಖ ಆರ್ಥಿಕತೆಗಳು ವಿತ್ತೀಯ ಹಿಂಜರಿತ ಎದುರಿಸುತ್ತಿವೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ, 'ಕೊರೊನಾ ವೈರಸ್​ ಕೆಟ್ಟದಾದ ಭೀತಿ ಸೃಷ್ಟಿಸಿದೆ. ಇದರ ಪರಿಣಾಮವು 2008ರ ಆರ್ಥಿಕ ಬಿಕ್ಕಟ್ಟುಗಿಂತ ತೀರಾ ಕೆಟ್ಟದಾಗಿದೆ' ಎಂದು ವ್ಯಾಖ್ಯಾನಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಶುಕ್ರವಾರ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಜಾರ್ಜೀವಾ ಮಾತನಾಡಿ, ಐಎಂಎಫ್​ ಕಳೆದ 75 ವರ್ಷಗಳಲ್ಲಿ ಇಂತಹ ಬಿಕ್ಕಟ್ಟು ಕಂಡಿರಲಿಲ್ಲ. ಇದು ಮಾನವೀಯತೆಯ ಕರಾಳ ಸಮಯ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಬಿಕ್ಕಟ್ಟನ್ನು ಎದುರಿಸಲು ಐಎಂಎಫ್ ತೆಗೆದುಕೊಂಡ ಆರ್ಥಿಕ ಕ್ರಮಗಳ ಭಾಗವಾಗಿ ತುರ್ತು ನಿಧಿಯ ಈ ಹಿಂದಿನ 50 ಬಿಲಿಯನ್ ಡಾಲರ್‌ ಮೊತ್ತವನ್ನು 100 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವುದಾಗಿ ಹೇಳಿದ್ದಾರೆ. ಸೋಂಕಿನ ಬಿಕ್ಕಟ್ಟು ಎದುರಿಸಲು ದಾಖಲೆಯ 85 ರಾಷ್ಟ್ರಗಳು ತುರ್ತು ಹಣದ ನೆರವಿಗಾಗಿ ಐಎಂಎಫ್​ ಸಂಪರ್ಕಿಸಿವೆ. ನಮ್ಮ ಹಣಕಾಸಿನ ಬೇಡಿಕೆ ಗಗನಕ್ಕೇರಿದೆ ಎಂದರು. ಅಭಿವೃದ್ಧಿಶೀಲ ರಾಷ್ಟ್ರಗಳ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೆ ಐಎಂಎಫ್ ಸಂಪನ್ಮೂಲಗಳತ್ತ ಆದ್ಯತೆ ನೀಡಲಿದೆ ಎಂಬ ಸುಳಿವನ್ನು ಸಹ ಜಾರ್ಜೀವಾ ನೀಡಿದರು.

ವೈರಸ್, ವೈದ್ಯಕೀಯ ಚಿಕಿತ್ಸೆಯ ಮುಖೇನ ದುರ್ಬಲ ಜನರ ಕಠಿಣವಾಗಿ ಪ್ರಹಾರ ಮಾಡುತ್ತಿದ್ದರೇ ಮತ್ತೊಂದು ಕಡೆ ಇನಷ್ಟು ಆರ್ಥಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ ಎಂದರು. ನಮ್ಮಲ್ಲಿನ 1 ಟ್ರಿಲಿಯನ್ ಡಾಲರ್​ ನಿಧಿಯನ್ನು ಕೊರೊನಾ ಯುದ್ಧದಲ್ಲಿ ಆರ್ಥಿಕತೆಗೆ ಉಂಟಾಗಬಹುದಾದ ದುಷ್ಪರಿಣಾಮದಿಂದ ರಕ್ಷಿಸುಲು ಅಗತ್ಯವಿರುವಷ್ಟು ಬಳಸಲು ನಿರ್ಧರಿಸಿದ್ದೇವೆ. ಐಎಂಎಫ್‌ನ ಬಡ ಸದಸ್ಯರ ರಾಷ್ಟ್ರಗಳಿಗೆ ಸಾಲದ ಬಾಧ್ಯತೆಗಳನ್ನು ನೀಡಲಿದೆ ಎಂದು ಹೇಳಿದರು.

ಪ್ರಕರಣಗಳ ಪತ್ತೆ, ಟೆಸ್ಟಿಂಗ್, ಕಾಂಟ್ಯಾಕ್ಟ್ ಟ್ರೇಸಿಂಗ್, ಡೇಟಾ ಸಂಗ್ರಹಣೆ, ಸಂವಹನ ಮತ್ತು ಮಾಹಿತಿ ಅಭಿಯಾನದಂತಹ ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಸಂಪೂರ್ಣ ಹಣವನ್ನು ಒದಗಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಟೆಡ್ರೋಸ್​ ಘೆಬ್ರೆಯೆಸಸ್ ಎಲ್ಲಾ ದೇಶಗಳಿಗೆ ಕರೆ ನೀಡಿದರು. ವಿಮೆ, ಪೌರತ್ವ ಅಥವಾ ನಿವಾಸದ ಸ್ಥಿತಿಯನ್ನು ಲೆಕ್ಕಿಸದೆ ಹಲವಾರು ದೇಶಗಳು ಕೊರೊನಾ ವೈರಸ್‌ ಸೋಂಕಿತರಿಗೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ ನೀಡುತ್ತಿವೆ. ನಾವು ಈ ನಡೆಗಳನ್ನು ಪ್ರೋತ್ಸಾಹಿಸುತ್ತೇವೆ ಎಂದರು.

ABOUT THE AUTHOR

...view details