ನವದೆಹಲಿ:ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ.0.4ರಷ್ಟು ಪ್ರಗತಿ ತೋರಿಸಿದೆ. ಕೊರೊನಾ ವೈರಸ್ ಲಾಕ್ಡೌನ್ನಿಂದ ಭಾರತದ ಅರ್ಥ ವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ, 2022-23ರ ಬೆಳವಣಿಗೆ ಸಂಖ್ಯೆಗಳು ನೈಜ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತವೆಯೇ ಹೊರತು 2021-22ರ ಸಂಖ್ಯೆಗಳಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಕೊರೊನಾ ವೈರಸ್ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡದಿದ್ದರೆ, 2022ರ ಹಣಕಾಸು ವರ್ಷದಲ್ಲಿ ಭಾರತವು ಖಂಡಿತವಾಗಿಯೂ ಬೆಳವಣಿಗೆ ಕಾಣಲಿದೆ. ಆದರೆ, ಬೆಳವಣಿಗೆಯನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು. ಅರ್ಥ ವ್ಯವಸ್ಥೆಯೊಂದಿಗೆ 'ಎಲ್ಲವೂ ಚೆನ್ನಾಗಿದೆ' ಎಂಬ ಸೂಚಕವಾಗಿ ನೋಡಬಾರದು ಎಂದರು.
2021ರ ಆರ್ಥಿಕ ವರ್ಷದಲ್ಲಿ ಆದಂತೆ ಆರ್ಥಿಕತೆಯು ಶೇ 8ರಷ್ಟು ಕುಗ್ಗಿದಾಗ, ಲಾಕ್‌ಡೌನ್ ಅಂತ್ಯದ ಜೊತೆ-ಜೊತೆಯಲ್ಲಿ ಸಾಮಾನ್ಯ ಬೆಳವಣಿಗೆಯೊಂದಿಗೆ ಯಾವುದೇ ವಿಧದ ಮರು ಚೇತರಿಕೆ ಮತ್ತು ಕೆಲವು ಪರೀಕ್ಷಾರ್ಥವಾದ ನಿರ್ಬಂಧಿತ ಬೇಡಿಕೆಯ ನಂತರದ ಬೆಳವಣಿಗೆಯ ಸಂಖ್ಯೆಗಳನ್ನು ಅಸಾಮಾನ್ಯವಾಗಿ ಕಾಣುವಂತೆ ಮಾಡುತ್ತದೆ. ನಮ್ಮ ಸ್ಥಿರತೆಯ ನೈಜ ಪರೀಕ್ಷೆ 2021-22 ಹೊರೆತು, 2022-23 ಅಲ್ಲ. ಯಾವಾಗ ಸಂಖ್ಯೆಗಳು ನಮ್ಮ ನೈಜ ಪರಿಸ್ಥಿತಿಯನ್ನು ಹೆಚ್ಚು ಪ್ರತಿಬಿಂಬಿಸುತ್ತವೆ ಆಗ ಎಂದು ರಾಜನ್ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇತ್ತೀಚೆಗೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಭಾರತದ ಜಿಡಿಪಿ ಬೆಳವಣಿಗೆಯು 2022ರ ಆರ್ಥಿಕ ವರ್ಷದಲ್ಲಿ ಶೇ 12.6ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸುತ್ತಿದೆ. ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ 2022ರ ವಿತ್ತೀಯ ವರ್ಷದಲ್ಲಿ ಶೇ 10.5ರಷ್ಟು ಬೆಳವಣಿಗೆಯ ಮುನ್ಸೂಚನೆ ನೀಡಿದ್ದರೆ, ಆರ್ಥಿಕ ಸಮೀಕ್ಷೆ ಶೇ 11ರಷ್ಟು ಎಂದು ಅಂದಾಜಿಸಿದೆ.
ಎರಡನೇ ಅಲೆಯ ಕೊರೊನಾ ವೈರಸ್ ಪ್ರಕರಣಗಳ ಬಗ್ಗೆ ರಾಜನ್ ಎಚ್ಚರಿಕೆ ನೀಡಿದ್ದು, ವ್ಯಾಕ್ಸಿನೇಷನ್ ಸಾಧ್ಯವಾದಷ್ಟು ವೇಗವಾಗಿ ಹೆಚ್ಚಿಸುವಂತೆ ಕರೆ ನೀಡಿದ್ದಾರೆ.
ನಾವು ವೈರಸ್ ಅಪಾಯದ ಬಗ್ಗೆ ಗಮನ ಹರಿಸಬೇಕಿದೆ. ಅದರ ಹಬ್ಬುವಿಕೆ ಇನ್ನೂ ಮುಗಿದಿಲ್ಲ. ಬ್ರೆಜಿಲ್ ಮೊದಲನೆಯದಕ್ಕಿಂತ ಕೆಟ್ಟದಾಗಿ ಎರಡನೇ ಅಲೆ ಅನುಭವಿಸುತ್ತಿದೆ. ನಾವು ಕೂಡ ಜಾಗರೂಕರಾಗಿ ಇರಬೇಕಿದೆ. ಸಮರೋಪಾದಿಯಲ್ಲಿ ಲಸಿಕೆ ವಿತರಣೆಯತ್ತ ಹೆಜ್ಜೆ ಇರಿಸಬೇಕಾಗಿದೆ. ಆರಂಭಿಕ ವ್ಯಾಕ್ಸಿನೇಷನ್ ಉತ್ತಮವಾಗಿ ಮುಂದುವರಿಯುತ್ತಿದೆ. ನಾವು ಇದರ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆದಾಯ ಸಂಗ್ರಹಣೆ ಮತ್ತು ಹಣಕಾಸು ವಲಯದ ಕ್ರಮಗಳ ಬಗ್ಗೆ ಬಜೆಟ್ ಸ್ವಲ್ಪ ಸ್ಪಷ್ಟವಾಗಿದೆ. ಹಣಕಾಸಿನ ಬಲವರ್ಧನೆಯ ನಿಧಾನಗತಿಯ ವೇಗವು ಸರ್ಕಾರವನ್ನು ಹಿಡಿದಿಡುವಂತಹ ವಿಶ್ವಾಸಾರ್ಹ ಕ್ರಮಗಳಾದ ಹಣಕಾಸಿನ ಮಂಡಳಿ ಮತ್ತು ಸಾಲದ ಗುರಿಯ ಮೂಲಕ ಹೆಚ್ಚುವರಿ ಕಾರ್ಯಸಾಧ್ಯವಾಗಬಹುದಿತ್ತು ಎಂದರು.
ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಆರ್ಥಿಕ ವರ್ಷದಲ್ಲಿನ ಹಣಕಾಸಿನ ಕೊರತೆಯನ್ನು ಶೇ 9.5ಕ್ಕೆ ಮತ್ತು 2022ಕ್ಕೆ ಶೇ 6.8ಕ್ಕೆ ನಿಗದಿಪಡಿಸಿದ್ದಾರೆ. 2026ರ ವೇಳೆಗೆ ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇ 4.5ಕ್ಕೆ ತರುವ ಮಾರ್ಗವನ್ನು ಸೂಚಿಸಿದ್ದರು.