ನವದೆಹಲಿ :ಈ ಹಣಕಾಸು ವರ್ಷದಲ್ಲಿ ಇದುವರೆಗೆ 1.87 ಕೋಟಿ ತೆರಿಗೆದಾರರಿಗೆ 1.91 ಲಕ್ಷ ಕೋಟಿ ರೂ.ಗಳ ಮರುಪಾವತಿ ನೀಡಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ.
ಇದರಲ್ಲಿ 1.84 ಕೋಟಿಗೂ ಹೆಚ್ಚು ತೆರಿಗೆ ಪಾವತಿದಾರರಿಗೆ ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ 67,334 ಕೋಟಿ ಮತ್ತು 2.14 ಲಕ್ಷ ಪ್ರಕರಣಗಳಲ್ಲಿ 1.23 ಲಕ್ಷ ಕೋಟಿ ರೂ.ಗಳ ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ.