ನವದೆಹಲಿ: ಆರ್ಥಿಕ ಕುಸಿತದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟ್ವಿಟ್ಟರ್ನಲ್ಲಿ ಟೀಕಿಸಿ, 'ಕುಸಿಯುತ್ತಿರುವ ಆರ್ಥಿಕತೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತವನ್ನು ಹೇಗೆ ಕೊಂಡೊಯ್ಯುತ್ತಿರಾ' ಎಂದು ಪ್ರಶ್ನಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಸಿಂಘ್ವಿ, 'ಮೋದಿ ಜೀ ಅವರ ಟ್ವಿಟ್ಟರ್ ಅನುಯಾಯಿಗಳು 50 ಮಿಲಿಯನ್ (5 ಕೋಟಿ) ದಾಟಿದ್ದಾರೆ. ಆರ್ಥಿಕತೆಯು 5 ಟ್ರಿಲಿಯನ್ (ಡಾಲರ್) ದಾಟಲಿದೆ, ಆದರೆ ಹೇಗೆ? ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದಕ್ಕೂ ಸಹ ನೀವು ವಿರೋಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಉಬರ್, ಓಲಾ ಎಲ್ಲವೂ ಹಾಳಾಗಿದೆ (ಉಬರ್, ಓಲಾ ನೆ ಸಬ್ ಕರ್ ದಿಯಾ ಬಂತಾಧರ್)' ಎಂದು ಬರೆದುಕೊಂಡಿದ್ದಾರೆ.