ನವದೆಹಲಿ:2018-19ರ ಹಣಕಾಸು ವರ್ಷದ ಆದಾಯ ತೆರಿಗೆ ಸಲ್ಲಿಕೆಯ ಗಡುವು ಜುಲೈ 31ಕ್ಕೆ ಕೊನೆಗೊಳ್ಳಲಿದೆ. ಮುಂದಿನ ವರ್ಷದ (2019-20) ಐಟಿ ರಿಟರ್ನ್ಸ್ ಸಹ ಇದೇ ದಿನಕ್ಕೆ ಕೊನೆಯಾಗಲಿದೆ.
ಐಟಿಆರ್ ಸಲ್ಲಿಸುವ ಮೊದಲು ಸರ್ಕಾರಕ್ಕೆ ಪಾವತಿಸಬೇಕಾದ ಯಾವುದೇ ತೆರಿಗೆ ಇಲ್ಲವೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಸಂಬಳ ಪಡೆಯುವವರ ತೆರಿಗೆಯು ಟಿಡಿಎಸ್ನಲ್ಲಿ (ಮೂಲದಲ್ಲಿ ಕಡಿತಗೊಳಿಸುವುದು) ಸೇರಿರುತ್ತದೆ. ಐಟಿ ಸಲ್ಲಿಕೆಗೆ ಅರ್ಹರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಚಲನ್- 280ಯಡಿ ಆನ್ಲೈನ್ ಮುಖಾಂತರ ಆದಾಯ ತೆರಿಗೆ ಸಲ್ಲಿಸುವ ವಿಧಾನ ಇಲ್ಲಿದೆ.
* ಎಸ್‌ಬಿಐನ ಆನ್ಲೈನ್ ಆಗಿ ಇ- ಟ್ಯಾಕ್ಸ್ (E- Tax) ಆಯ್ಕೆ ಮಾಡಿಕೊಳ್ಳಿ
* ಡೈರೆಕ್ಟ್ ಟ್ಯಾಕ್ಸ್ ಮೇಲೆ ಕ್ಲಿಕ್ ಮಾಡಿ ಡ್ರಾಪ್ ಅಥವಾ ಆನ್ ದಿ ನೆಕ್ಸಟ್ ಪೇಜ್ ಆಯ್ಕೆಮಾಡಿಕೊಳ್ಳಿ
* ಮತ್ತೊಂದು ಪ್ರತ್ಯೇಕ ಪರದೆ ತೆರೆದುಕೊಳ್ಳುತ್ತದೆ, Tax Information Network webpage of the Income Tax Department ಯುಆರ್ಎಲ್ನ ಶಾರ್ಟ್ ಫಾರ್ಮ್ ಆದ 'https://onlineservices.tin.egov-nsdl.com/etaxnew/tdsnontds.jsp' ಕಾಪಿ ಮಾಡಿ ಎಂಟರ್ ಬಟನ್ ಪ್ರೆಸ್ಮಾಡಿ
* ತೆರಿಗೆ ಪಾವತಿಗೆ ಚಲನ್ ನಂಬರ್ ನಮೋದಿಸಿ: ಉದಾ: ಐಟಿಎನ್ಎಸ್ 280
* ನಂತರ ಪುಟದಲ್ಲಿ ಪಾನ್, ಹೆಸರು, ವಿಳಾಸ, ಪಾವತಿಯ ವರ್ಷ ಸೇರಿದಂತೆ ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ
* ಸ್ಟೇಟ್ ಬ್ಯಾಂಕ್ ಇಂಡಿಯಾದ ಬ್ಯಾಂಕ್ಗಳನ್ನು ಆಯ್ಕೆ ಮಾಡಿಕೊಳ್ಳಿ
* ಮತ್ತೆ ಎಸ್‌ಬಿಐ ಲಾಗಿನ್ ಪುಟಕ್ಕೆ ಮರುನಿರ್ದೇಶನ ಪ್ರದರ್ಶನವಾಗುತ್ತದೆ
* ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರು ತಮ್ಮ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಆಗಬೇಕು