ಕರ್ನಾಟಕ

karnataka

ವಸತಿ ಗೃಹಗಳ ಮಾರಾಟಕ್ಕೆ ಕೊರೊನಾ ಗ್ರಹಣ: ಶೇ.81% ಮಾರಾಟ ಕುಸಿತ

ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಮಾರ್ಚ್ 25ರಂದು ರಾಷ್ಟ್ರವ್ಯಾಪಿ ಲಾಕ್​ಡೌನ್​ ವಿಧಿಸಲಾಯಿತು. ನಿರ್ಮಾಣ ಮತ್ತು ಮಾರಾಟ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ಇದರಿಂದಾಗಿ ರಿಯಲ್​ ಎಸ್ಟೇಟ್ ಉದ್ಯಮದ ವಸತಿ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಅನರಾಕ್​ ತನ್ನ ವರದಿಯಲ್ಲಿ ಹೇಳಿದೆ.

By

Published : Jun 25, 2020, 4:57 PM IST

Published : Jun 25, 2020, 4:57 PM IST

Housing sales
ವಸತಿ ಮಾರಾಟ

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಈ ಕ್ಯಾಲೆಂಡರ್ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ವಸತಿ ಮಾರಾಟವು ಶೇ.81ರಷ್ಟು ಕುಸಿದು 12,740ಕ್ಕೆ ತಲುಪಿದೆ ಎಂದು ಆಸ್ತಿ ಸಲಹೆಗಾರ ಅನರಾಕ್ ತಿಳಿಸಿದೆ.

ದೆಹಲಿ-ಎನ್‌ಸಿಆರ್, ಮುಂಬೈ ಮೆಟ್ರೋಪಾಲಿಟನ್ ರೀಜನ್ (ಎಂಎಂಆರ್), ಪುಣೆ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದ ಏಳು ಪ್ರಮುಖ ನಗರಗಳಲ್ಲಿ 2019ರ ಏಪ್ರಿಲ್-ಜೂನ್ ಅವಧಿಯಲ್ಲಿ 68,600 ಯುನಿಟ್ ಮಾರಾಟವಾಗಿದ್ದವು ಎಂದು ಅನರಾಕ್ ತನ್ನ ವರದಿಯಲ್ಲಿ ಹೇಳಿದೆ.

ಹೊಸ ವಸತಿಗಳ ಪ್ರಮಾಣ ಶೇ.98ರಷ್ಟು ಕುಸಿದು ಕೇವಲ 1,390 ಯುನಿಟ್‌ಗಳಿಗೆ ತಲುಪಿರಬಹುದು. ಇದು 2019ರ ಇದೇ ಅವಧಿಯಲ್ಲಿ ಸುಮಾರು 69,000 ಯುನಿಟ್‌ಗಳಷ್ಟಿತ್ತು ಎಂದು ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ ಅಧ್ಯಕ್ಷ ಅನುಜ್ ಪುರಿ ಹೇಳಿದರು.

ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಮಾರ್ಚ್ 25ರಂದು ರಾಷ್ಟ್ರವ್ಯಾಪಿ ಲಾಕ್​ಡೌನ್​ ವಿಧಿಸಲಾಯಿತು. ನಿರ್ಮಾಣ ಮತ್ತು ಮಾರಾಟ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.

ತಂತ್ರಜ್ಞಾನದ ಅಳವಡಿಕೆ ತಡವಾಗಿ ವಸತಿ ಮಾರಾಟದಲ್ಲಿ ದೊಡ್ಡ ಪಾತ್ರ ವಹಿಸಿದೆ. ಅನೇಕ ಡೆವಲಪರ್‌ಗಳು ಈಗ ತಮ್ಮ ಡಿಜಿಟಲ್ ಮಾರಾಟ ಸಾಮರ್ಥ್ಯಗಳನ್ನು ಬಲಪಡಿಸುತ್ತಿದ್ದಾರೆ. ವಸತಿ ಮಾರಾಟವು ದೆಹಲಿ-ಎನ್‌ಸಿಆರ್‌ನಲ್ಲಿ ಶೇ.83ರಷ್ಟು ಇಳಿಕೆಯಾಗಿದ್ದು, 2020ರ ಏಪ್ರಿಲ್-ಜೂನ್​ನಲ್ಲಿ 2,100 ಯುನಿಟ್‌ಗಳಿಗೆ ತಲುಪಲಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 12,640 ಯುನಿಟ್‌ಗಳು ಖರೀದಿ ಆಗಿದ್ದವು ಎಂದು ವರದಿ ಹೇಳುತ್ತದೆ.

ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ (ಎಂಎಂಆರ್) ಪರಿಶೀಲನೆಯ ಅವಧಿಯಲ್ಲಿ 21,360 ಯುನಿಟ್‌ಗಳಿಂದ ಮಾರಾಟವು ಶೇ.83ರಷ್ಟು ಇಳಿದು 3,620 ಯುನಿಟ್‌ಗಳಿಗೆ ತಲುಪಬಹುದು ಎಂದಿದೆ.

ABOUT THE AUTHOR

...view details