ಕರ್ನಾಟಕ

karnataka

By

Published : Jan 30, 2021, 7:19 PM IST

ETV Bharat / business

1857ರ ಸಿಪಾಯಿ ದಂಗೆಯಿಂದ ಶುರುವಾದ ಇನ್​ಕಮ್​ ಟ್ಯಾಕ್ಸ್​ ವಸೂಲಿ ಮೋದಿ ಕಾಲದ ತನಕ ಏನೆಲ್ಲಾ ಆಯ್ತು?

1857ರ ಸಿಪಾಯಿ ದಂಗೆಯ ನಂತರ ಭಾರತದಲ್ಲಿನ ಬ್ರಿಟಿಷ್ ಸರ್ಕಾರವು ತೀವ್ರವಾದ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿತು. ಆ ಸಂಕಟದಿಂದ ಹೊರಬರಲು ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಶ್ರೀಮಂತರ ಮೇಲೆ "ಆದಾಯ ತೆರಿಗೆ" ಪ್ರಸ್ತಾಪಿಸಿದ್ದರು. ತೀವ್ರ ವಿರೋಧದ ಹೊರತಾಗಿಯೂ, ಅಂದಿನ ಸರ್ಕಾರ ಅದನ್ನು ಪರಿಗಣಿಸಿ 1860ರ ಜುಲೈ 24ರಂದು ಜಾರಿಗೆ ಬಂದಿತ್ತು.

tax slabs
tax slabs

ನವದೆಹಲಿ:ಆದಾಯ ತೆರಿಗೆ ಎಂಬ ಪದ ಬಜೆಟ್​ ಮಂಡನೆ ಹಾಗೂ ಆರ್ಥಿಕ ವರ್ಷಾಂತ್ಯದಲ್ಲಿ ಅನೇಕರ ಗಮನ ಸೆಳೆಯುತ್ತದೆ. ದೇಶದ ಜನಸಂಖ್ಯೆ ಸುಮಾರು 135 ಕೋಟಿ ಜನರಲ್ಲಿ ಕೇವಲ ಶೇ 5ಕ್ಕಿಂತ ಕಡಿಮೆ ಜನರು ಆದಾಯ ತೆರಿಗೆ ಪಾವತಿಸುತ್ತಾರೆ! ಹೆಚ್ಚಿನ ಜನರನ್ನು 'ತೆರಿಗೆ ವಾಪ್ತಿ'ಗೆ ಕರೆತರುವ ಸರ್ಕಾರದ ಪ್ರಯತ್ನವು ಪ್ರತಿ ಬಾರಿಯೂ ಭಾಗಶಃ ಯಶಸ್ವಿಯಾಗುತ್ತದೆ. ತೆರಿಗೆ ರಿಟರ್ನ್ಸ್ ಸಲ್ಲಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದರೂ ನಿರೀಕ್ಷಿತ ಮಟ್ಟಿಗೆ ಸಂಗ್ರಹವಿಲ್ಲ. ತೆರಿಗೆ ಪಾವತಿಸಲು ಸಾಕಷ್ಟು ಆದಾಯ ಇಲ್ಲದವರು ವಿನಾಯಿತಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿರುತ್ತದೆ.

ತೆರಿಗೆ ಸಂಗ್ರಹವು ಮೊದಲಿಗಿಂತ ಹೆಚ್ಚಾಗಿರುವುದಕ್ಕೆ ಕಾರಣವೆಂದರೆ, ಈಗ ಪಾವತಿಸುವವರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. 2019-20ರ ಆರ್ಥಿಕ ವರ್ಷಕ್ಕೆ 5.95 ಲಕ್ಷ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಆದರೆ, ಸಂಗ್ರಹಿಸಿದ ಮೊತ್ತವನ್ನು ಇನ್ನೂ ಬಹಿರಂಗಪಡಿಸಿಲ್ಲ.

ದಂಗೆಯಿಂದ ಶುರುವಾದ ತೆರಿಗೆ ಕಲೆಕ್ಷನ್​:

1857ರ ಸಿಪಾಯಿ ದಂಗೆಯ ನಂತರ ಭಾರತದಲ್ಲಿನ ಬ್ರಿಟಿಷ್ ಸರ್ಕಾರವು ತೀವ್ರವಾದ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿತು. ಆ ಸಂಕಟದಿಂದ ಹೊರಬರಲು ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಶ್ರೀಮಂತರ ಮೇಲೆ "ಆದಾಯ ತೆರಿಗೆ" ಪ್ರಸ್ತಾಪಿಸಿದ್ದರು. ತೀವ್ರ ವಿರೋಧದ ಹೊರತಾಗಿಯೂ, ಅಂದಿನ ಸರ್ಕಾರ ಅದನ್ನು ಪರಿಗಣಿಸಿ 1860ರ ಜುಲೈ 24ರಂದು ಜಾರಿಗೆ ಬಂದಿತ್ತು.

ಸ್ವತಂತ್ರ ಭಾರತದ ತೆರಿಗೆ ವ್ಯವಸ್ಥೆಗೆ ಮೊದಲ ತಿದ್ದುಪಡಿ ತಂದವರು ಹಣಕಾಸು ಸಚಿವ ಜಾನ್ ಮಥಾಯ್, ಅದು 1949 - 50ರಲ್ಲಿ. ಅಲ್ಲಿಯವರೆಗೆ 10 ಸಾವಿರ ರೂ.ಗಿಂತ ಕಡಿಮೆ ಆದಾಯದ ಮೇಲೆ ಆಣೆ (6 ಪೈಸೆ) ತೆರಿಗೆಯನ್ನು ಮೂವತ್ತು ಆಣೆಗೆ (4.5 ಪೈಸೆ) ಇಳಿಸಲಾಯಿತು. 10,000 ರೂ.ಗಿಂತ ಹೆಚ್ಚಿನ ಆದಾಯಕ್ಕೆ ಎರಡು ಆಣೆ (12 ಪೈಸೆ) ಮೇಲಿನ ತೆರಿಗೆಯನ್ನು 9 ಪೈಸೆಗಳಿಗೆ ಇಳಿಸಲಾಯಿತು.

ಈಗ ನಾವು ಗರಿಷ್ಠ ಶೇ 30ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದೇವೆ. ಆದರೆ 1970ರ ದಶಕದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚು ಗಳಿಸುವವರಿಗೆ ನೂರು ರೂಪಾಯಿಯಂತೆ ವರ್ಷಕ್ಕೆ 97.75 ರೂ.ಯಷ್ಟು ತೆರಿಗೆ ವಿಧಿಸುತ್ತಿದ್ದರು ಎಂಬುದು ಆಶ್ಚರ್ಯವಾಗುತ್ತದೆ!. ಆದರೂ ಇದು ನಿಜ. ಅಂದಿನಿಂದ, ಸರ್ಕಾರಗಳು ಕ್ರಮೇಣ ಭಾರವಾದ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಿದವು.

ವಿ.ಪಿ.ಸಿಂಗ್:

1985-86ರಲ್ಲಿ ಹಣಕಾಸು ಸಚಿವ ವಿ.ಪಿ.ಸಿಂಗ್ ಅವರು ಅಸ್ತಿತ್ವದಲ್ಲಿರುವ ಎಂಟು ಸ್ಲ್ಯಾಬ್​ಗಳನ್ನು ನಾಲ್ಕಕ್ಕೆ ಇಳಿಸಿದರು. 18,000 ರೂ.ಗಿಂತ ಕಡಿಮೆ ಆದಾಯ ಗಳಿಸುವವರಿಗೆ ಆದಾಯ ತೆರಿಗೆ ರದ್ದುಪಡಿಸಲಾಯಿತು. 18,000 ರಿಂದ 25,000 ರೂ. ನಡುವಿನ ಆದಾಯಕ್ಕೆ ಶೇ 25ರಷ್ಟು, 25,000 ರಿಂದ 50,000 ರೂ. ನಡುವೆ 30 ಪ್ರತಿಶತದಷ್ಟು, 50,000 ರಿಂದ 1 ಲಕ್ಷ ರೂ. ನಡುವೆ 40 ಪ್ರತಿಶತದಷ್ಟು ಮತ್ತು 1 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವನ್ನು 50 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

ಡಾ. ಮನಮೋಹನ್ ಸಿಂಗ್​:

ಇಂದಿನ ಆಧುನಿಕ ತೆರಿಗೆ ವ್ಯವಸ್ಥೆಯನ್ನು 1992-93ರಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಮಂತ್ರಿಯಾಗಿ ಮುನ್ನುಡಿ ಬರೆದರು. ಅವರು ಸ್ಲ್ಯಾಬ್​ಗಳ ಸಂಖ್ಯೆಯನ್ನು ಮೂರಕ್ಕೆ ಇಳಿಸಿ ಅದನ್ನು ಸರಳೀಕರಿಸಿದರು. ಎರಡು ವರ್ಷಗಳ ನಂತರ ಸ್ಲ್ಯಾಬ್​ಗಳ ಮಿತಿಯಲ್ಲಿ ಸ್ವಲ್ಪ ಬದಲಾವಣೆ ತರಲಾಯಿತು. ಆದರೆ, ತೆರಿಗೆ ದರಗಳು ಬದಲಾಗಿಲ್ಲ. 35,000ರಿಂದ 60,000 ರೂ.ವರೆಗಿನ ಆದಾಯವನ್ನು ಮೊದಲ ಸ್ಲ್ಯಾಬ್ ಎಂದು ಪರಿಗಣಿಸಲಾಗುತ್ತದೆ, ಎರಡನೇ ಸ್ಲ್ಯಾಬ್ 60,000 ರಿಂದ 1.2 ಲಕ್ಷ ರೂ. ಮತ್ತು ಮೂರನೇ ಸ್ಲ್ಯಾಬ್ 1.2 ಲಕ್ಷ ರೂ. ಮೇಲ್ಪಟ್ಟು ಇತ್ತು.

ಚಿದಂಬರಂ ಬದಲಾವಣೆ:

1997-98ರಲ್ಲಿ ಹಣಕಾಸು ಸಚಿವರಾಗಿ ಬಜೆಟ್ ರೂಪಿಸಿದ ಪಿ.ಚಿದಂಬರಂ, ಅವರು ಆಗ ಅಸ್ತಿತ್ವದಲ್ಲಿದ್ದ ಸ್ಲ್ಯಾಬ್​ಗಳ ಮೇಲಿನ ಮಿತಿಯನ್ನು ಹೆಚ್ಚಿಸಿ ತೆರಿಗೆ ದರ ಕಡಿಮೆ ಮಾಡಿದರು. ಸುಮಾರು ಒಂದು ದಶಕದ ನಂತರ 2005-06ರಲ್ಲಿ ಹಣಕಾಸು ಸಚಿವರಾಗಿ, ಚಿದಂಬರಂ ಮತ್ತೆ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತಂದರು. ರೂ. ಲಕ್ಷಕ್ಕಿಂತ ಕಡಿಮೆ ಆದಾಯಕ್ಕೆ ತೆರಿಗೆ ಮುಕ್ತಿ ಕೊಟ್ಟರು. 1ರಿಂದ 1.5 ಲಕ್ಷ ರೂ. ಮೇಲೆ ಶೇ 10ರಷ್ಟು, 1.5 ರಿಂದ 2.50 ಲಕ್ಷ ತನಕ ಆದಾಯಕ್ಕೆ ಶೇ 20ರಷ್ಟು ಹಾಗೂ 2.5 ಲಕ್ಷ ರೂ.ಗಿಂತ ಅದಕ್ಕ ಇದ್ದವರಿಗೆ ಶೇ 30ರಷ್ಟು ವಿಧಿಸಲಾಗುತ್ತಿತ್ತು.

ಸಂಪತ್ತು ತೆರಿಗೆ ರದ್ದು

2014-15ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಪತ್ತು ತೆರಿಗೆಯನ್ನು ರದ್ದುಪಡಿಸಿದರು. ಅದರ ಸ್ಥಾನದಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ಸಂಪತ್ತಿನ ಮೇಲೆ ಶೇ 2ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಯಿತು. 2017-18ರಲ್ಲಿ ಜೇಟ್ಲಿ ತೆರಿಗೆ ವ್ಯವಸ್ಥೆಯಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಿದರು. ಇದರ ಪರಿಣಾಮವಾಗಿ, 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಗಳಿಸುವವರು ತೆರಿಗೆ ವಿನಾಯಿತಿ ಪಡೆಯಲು ಅರ್ಹರಾಗಿದರು.

ABOUT THE AUTHOR

...view details