ಕರ್ನಾಟಕ

karnataka

ETV Bharat / business

ಬೇಡಿಕೆ ವೃದ್ಧಿಗೆ ವೇಗಗೊಂಡ ದೇಶಿ ಉತ್ಪಾದನಾ ಕ್ಷೇತ್ರದ ಬೆಳವಣಿಗೆ: ಪಿಎಂಐ - ರಫ್ತು

ಸಡಿಲಗೊಂಡ ಕೊರೊನಾ ವೈರಸ್ ಪ್ರೇರೇಪಿತ (ಕೋವಿಡ್- 19) ನಿರ್ಬಂಧಗಳು ಮತ್ತು ಹೆಚ್ಚಿನ ಬೇಡಿಕೆಯ ವರದಿಗಳ ಮಧ್ಯೆ, ಭಾರತೀಯ ತಯಾರಕರು ಸೆಪ್ಟೆಂಬರ್‌ನಲ್ಲಿ ಸತತ ಎರಡನೇ ತಿಂಗಳು ಸಹ ಉತ್ಪಾದನೆ ಹೆಚ್ಚಳವಾಗಿದೆ.

manufacturing growth
ಉತ್ಪಾದನಾ ಕ್ಷೇತ್ರ

By

Published : Oct 1, 2020, 7:42 PM IST

ನವದೆಹಲಿ: ವ್ಯಾಪಕ ಬೇಡಿಕೆಯಿಂದಾಗಿ ಸೆಪ್ಟೆಂಬರ್‌ನಲ್ಲಿ ಭಾರತದ ಉತ್ಪಾದನಾ ಕ್ಷೇತ್ರದ ಬೆಳವಣಿಗೆಯು ವೇಗಗೊಂಡಿದೆ.

ಗುರುವಾರ ಬಿಡುಗಡೆಯಾದ ಐಎಚ್‌ಎಸ್ ಮಾರ್ಕಿಟ್ ಇಂಡಿಯಾ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ವರದಿ ಅನ್ವಯ, ರಫ್ತು ಮಾರಾಟ ಮತ್ತು ಇನ್‌ಪುಟ್ ಷೇರುಗಳಲ್ಲಿನ ಹೊಸ ವಿಸ್ತರಣೆ ಮತ್ತು ಸೆಪ್ಟೆಂಬರ್‌ನಲ್ಲಿ ವ್ಯವಹಾರ ವಿಶ್ವಾಸದ ಸುಧಾರಣೆಯು ಏರಿಕೆಗೆ ಕಾರಣವಾಗಿದೆ.

ಐಎಚ್‌ಎಸ್ ಮಾರ್ಕಿಟ್ ಇಂಡಿಯಾ ಮ್ಯಾನ್ಯೂಫ್ಯಾಕ್ಚರಿಂಗ್ ಪಿಎಂಐ ರೀಡಿಂಗ್​, ಆಗಸ್ಟ್‌ನಲ್ಲಿ 52ರಿಂದ ಸೆಪ್ಟೆಂಬರ್‌ಗೆ 56.8ಕ್ಕೆ ಏರಿಕೆಯಾಗಿದೆ. ಇತ್ತೀಚಿನ ರೀಡಿಂಗ್​ ಎಂಟೂವರೆ ವರ್ಷಗಳಲ್ಲಿ ಅತಿ ಹೆಚ್ಚಿನದಾಗಿದೆ.

ಸಡಿಲಗೊಂಡ ಕೊರೊನಾ ವೈರಸ್ ಪ್ರೇರೇಪಿತ (ಕೋವಿಡ್- 19) ನಿರ್ಬಂಧಗಳು ಮತ್ತು ಹೆಚ್ಚಿನ ಬೇಡಿಕೆಯ ವರದಿಗಳ ಮಧ್ಯೆ, ಭಾರತೀಯ ತಯಾರಕರು ಸೆಪ್ಟೆಂಬರ್‌ನಲ್ಲಿ ಸತತ ಎರಡನೇ ತಿಂಗಳು ಸಹ ಉತ್ಪಾದನೆ ಹೆಚ್ಚಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸಮೀಕ್ಷೆಯ ಇತಿಹಾಸದಲ್ಲಿ ಹೆಚ್ಚು ತೀಕ್ಷಣವಾದ ಹಾಗೂ 3ನೇ ಅತಿ ವೇಗದ ಏರಿಕೆಯಾಗಿದೆ. ಹೊಸ ವ್ಯವಹಾರದ ಒಳಹರಿವುಗಳಲ್ಲಿ ಒಂದರಿಂದ ಒಂದು ವಹಿವಾಟು ದಕ್ಕೆ ಹೆಚ್ಚಳವಾಗಿದೆ. ನೂತನ ರಫ್ತು ಆರ್ಡರ್​ಗಳಲ್ಲಿನ ಹೊಸ ವಿಸ್ತರಣೆಯಿಂದ ಒಟ್ಟು ಮಾರಾಟ ಏರಿಕೆಗೆ ಬೆಂಬಲವಾಗಿ ನಿಂತಿವೆ ಎಂದು ಹೇಳಿದೆ.

ABOUT THE AUTHOR

...view details