ಕರ್ನಾಟಕ

karnataka

ETV Bharat / business

ಆರ್​ಬಿಐಗೆ ಮತ್ತೊಬ್ಬ ಡೆಪ್ಯೂಟಿ ಗವರ್ನರ್ ಎಂಟ್ರಿ... ಶಕ್ತಿಕಾಂತ್​ಗೆ ಶಕ್ತಿ ತುಂಬುವರೆ ಮೈಕೆಲ್?​ - ಹೆಚ್ಚಿನ ಹಣದುಬ್ಬರ

ಬಡ್ಡಿದರದ ದರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಆರು ಸದಸ್ಯರ ಹಣಕಾಸು ನೀತಿ ಸಮಿತಿಯಲ್ಲಿ (ಎಂಪಿಸಿ) ಹೊಸದಾಗಿ ಮೈಕೆಲ್ ದೇಬಬ್ರತಾ ಪತ್ರಾ ಅವರು ಆರ್​ಬಿಐನ ಡೆಪ್ಯೂಟಿ ಗವರ್ನರ್ ಆಗಿ ಸ್ಥಾನಪಡೆಯಲಿದ್ದಾರೆ. 6 ವರ್ಷಗಳಲ್ಲಿ ಹೆಚ್ಚಿದ ಹಣದುಬ್ಬರ ಮತ್ತು ಆರು ವರ್ಷಗಳಲ್ಲಿ ಕಡಿಮೆಯಾದ ತ್ರೈಮಾಸಿಕ ಬೆಳವಣಿಗೆಯಂತಹ ಅಪಾಯಗಳ ನಡುವೆ ವಿತ್ತೀಯ ನೀತಿಯ ಉಸ್ತುವಾರಿಗೆ ಹೊಸ ಸದಸ್ಯರಾಗಿ ಪಾದರ್ಪಣೆ ಮಾಡಿದ್ದಾರೆ.

Michael Debabrata Patra
ಮೈಕೆಲ್ ದೇಬಬ್ರತಾ ಪತ್ರಾ

By

Published : Jan 14, 2020, 5:45 PM IST

ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಮೈಕೆಲ್ ದೇಬಬ್ರತಾ ಪತ್ರಾ ಅವರನ್ನು ಭಾರತೀಯ ರಿಸರ್ವ್​ ಬ್ಯಾಂಕ್​ಗೆ ನೂತನ ಡೆಪ್ಯೂಟಿ ಗವರ್ನರ್​ ಆಗಿ ನೇಮಕ ಮಾಡಿದೆ.

ಬಡ್ಡಿದರದ ದರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಇವರೂ ಸ್ಥಾನ ಪಡೆಯಲಿದ್ದಾರೆ. 6 ವರ್ಷಗಳಲ್ಲಿ ಹೆಚ್ಚಿದ ಹಣದುಬ್ಬರ ಮತ್ತು ಆರು ವರ್ಷಗಳಲ್ಲಿ ಕಡಿಮೆಯಾದ ತ್ರೈಮಾಸಿಕ ಬೆಳವಣಿಗೆಯಂತಹ ಅಪಾಯಗಳ ನಡುವೆ ವಿತ್ತೀಯ ನೀತಿಯ ಉಸ್ತುವಾರಿಗೆ ಹೊಸ ಸದಸ್ಯರಾಗಿ ಪಾದರ್ಪಣೆ ಮಾಡಿದ್ದಾರೆ.

ಕ್ಯಾಬಿನೆಟ್ ಆದೇಶದ ನೇಮಕಾತಿ ಸಮಿತಿಯೊಂದು, ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ದೇಬಬ್ರತಾ ಪತ್ರಾ ಅವರನ್ನು ಆರ್‌ಬಿಐನ ಡೆಪ್ಯೂಟಿ ಗವರ್ನರ್​ ಹುದ್ದೆಗೆ ಮೂರು ವರ್ಷಗಳ ಅವಧಿಯವರೆಗೆ ನೇಮಕ ಮಾಡಲು ಎಸಿಸಿ ಅನುಮೋದನೆ ನೀಡಿದೆ.

2019ರ ಜುಲೈ 23ರಂದು ಕೇಂದ್ರ ಬ್ಯಾಂಕ್​ನಲ್ಲಿದ್ದ ನಾಲ್ಕನೇ ಡೆಪ್ಯೂಟಿ ಗವರ್ನರ್ ಆಗಿದ್ದ ವಿರಳ್ ಆಚಾರ್ಯ ಸ್ಥಾನಕ್ಕೆ ಮೈಕಲ್​ ಬಂದಿದ್ದಾರೆ. ಎಂಪಿಸಿ ಮತ್ತು ಬಡ್ಡಿ ನಿರ್ಧಾರಗಳ ದರವನ್ನು ಚೆನ್ನಾಗಿ ತಿಳಿದ್ದು, ಇದರ ಜೊತೆಗೆ ಮಾರುಕಟ್ಟೆಯಲ್ಲಿನ ಏರಿಳಿಗತಳನ್ನು ಬಲ್ಲ ಚಿರಪರಿಚಿತರಾಗಿದ್ದಾರೆ.

ದೇಶದ ಪ್ರಸ್ತುತ ಆರ್ಥಿಕ ವಾತಾವರಣ ಹಾಗೂ ಮಾರುಕಟ್ಟೆಗಳ ಬಗ್ಗೆ ಪತ್ರಾ ಅವರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆರ್‌ಬಿಐನ ಕೊನೆಯ ಮೂರು ನೀತಿಗಳಲ್ಲಿ ಪತ್ರಾ ಅವರು ಹಣದುಬ್ಬರದ ಹಾಕಿಶ್ ಗಾರ್ಡ್ (ಬಿಗಿಯಾದ ರಕ್ಷಣೆ) ಅನ್ನು ಕೈಬಿಟ್ಟು ಮತ್ತು ಬೆಳವಣಿಗೆಯನ್ನು ಬೆಂಬಲಿಸಲು ಬಡ್ಡಿದರ ಕಡಿತಕ್ಕೆ ಸಹಮತ ವ್ಯಕ್ತಪಡಿಸಿದ್ದರು.

ABOUT THE AUTHOR

...view details