ಕರ್ನಾಟಕ

karnataka

ETV Bharat / business

2021ರಲ್ಲಿ ಭಾರತದ ಆರ್ಥಿಕತೆ ಸದೃಢವಾಗಿ ವೃದ್ಧಿಸಲಿದೆ: ಸಿಇಒಗಳ ಬಲ'ವಾದ'

ಶೇ 76ರಷ್ಟು ಸಂವಾದಿಗಳು 2021ರಲ್ಲಿ ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತದೆ ಎಂಬ ಆಶಾವಾದಿಗಳಾಗಿದ್ದಾರೆ. 2020ರಲ್ಲಿ ಕೇವಲ 22 ಪ್ರತಿಶತದಷ್ಟು ಜನರು ಜಾಗತಿಕ ಬೆಳವಣಿಗೆಯ ಬಗ್ಗೆ ಆಶಾವಾದಿಗಳಾಗಿದ್ದರು. 2019ರಲ್ಲಿ ಇದು ಶೇ 42ರಷ್ಟು ಇತ್ತು. 2012ರಲ್ಲಿ ಸಮೀಕ್ಷೆಯ ಬಳಿಕ ಇದೇ ಮೊದಲ ಬಾರಿಗೆ ಹೆಚ್ಚಿನ ಸಿಇಒಗಳು ಜಾಗತಿಕ ಬೆಳವಣಿಗೆಯ ಬಗ್ಗೆ ಸಕಾರಾತ್ಮಕವಾಗಿ ಇರಲಿದೆ ಎಂದಿದ್ದಾರೆ.

india economys
india economys

By

Published : Mar 12, 2021, 5:48 PM IST

ನವದೆಹಲಿ:ವಿವಿಧ ರಾಷ್ಟ್ರಗಳಲ್ಲಿನ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕರು (ಸಿಇಒ) ಪ್ರಸಕ್ತ ವರ್ಷದಲ್ಲಿ ಜಾಗತಿಕ ಆರ್ಥಿಕತೆಯು ಮತ್ತಷ್ಟು ಏರಿಕೆಯಾಗಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

ಮುಂದಿನ 11 ತಿಂಗಳ ಆದಾಯದ ಬೆಳವಣಿಗೆಯ ಮುನ್ಸೂಚನೆಗಳ ಬಗ್ಗೆ ಅವರು ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಪಿಡಬ್ಲ್ಯೂಸಿ ನಡೆಸಿದ ನೇ ವಾರ್ಷಿಕ ಜಾಗತಿಕ ಸಿಇಒ ಸಮೀಕ್ಷೆಯ ಸಂಶೋಧನೆಯಲ್ಲಿ ಭಾರತ ಸೇರಿದಂತೆ 100 ದೇಶಗಳ ಒಟ್ಟು 5,050 ಸಿಇಒಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನವರಿ ಮತ್ತು ಫೆಬ್ರುವರಿ ನಡುವೆ ಸಮೀಕ್ಷೆ ನಡೆಸಲಾಯಿತು.

ಶೇ 76ರಷ್ಟು ಸಂವಾದಿಗಳು 2021ರಲ್ಲಿ ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತದೆ ಎಂಬ ಆಶಾವಾದಿಗಳಾಗಿದ್ದಾರೆ. 2020ರಲ್ಲಿ ಕೇವಲ 22 ಪ್ರತಿಶತದಷ್ಟು ಜನರು ಜಾಗತಿಕ ಬೆಳವಣಿಗೆಯ ಬಗ್ಗೆ ಆಶಾವಾದಿಗಳಾಗಿದ್ದರು. 2019ರಲ್ಲಿ ಇದು ಶೇ 42ರಷ್ಟು ಇತ್ತು. 2012ರಲ್ಲಿ ಸಮೀಕ್ಷೆಯ ಬಳಿಕ ಇದೇ ಮೊದಲ ಬಾರಿಗೆ ಹೆಚ್ಚಿನ ಸಿಇಒಗಳು ಜಾಗತಿಕ ಬೆಳವಣಿಗೆಯ ಬಗ್ಗೆ ಸಕಾರಾತ್ಮಕವಾಗಿ ಇರಲಿದೆ ಎಂದಿದ್ದಾರೆ.

ಇದನ್ನೂ ಓದಿ: SBI ಮಲ್ಟಿ ಆಪ್ಷನ್ ಠೇವಣಿ ಯೋಜನೆ: ಬಡ್ಡಿದರ, ಅರ್ಹತೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಮುಂದಿನ 12 ತಿಂಗಳಲ್ಲಿ ತಮ್ಮ ಕಂಪನಿಗಳ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ಬಲವಾಗಿ ನಂಬಿದರ ಪೈಕಿ ಶೇ 36 ಸಿಇಒಗಳು ಇದ್ದಾರೆ. 2020ರಲ್ಲಿ ಇದಕ್ಕೆ 27ರಷ್ಟು ಸಿಇಒಗಳು ಅಂಗೀಕರಿಸಿದ್ದರು.

ಉತ್ತರ ಅಮೆರಿಕ ಮತ್ತು ಪಶ್ಚಿಮ ಯುರೋಪಿಯನ್ ಸಿಇಒಗಳು ಜಾಗತಿಕ ಆರ್ಥಿಕತೆಯ ಬೆಳವಣಿಗೆಯಲ್ಲಿ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ ಎಂದು ಸಮೀಕ್ಷೆಯು ಕಂಡುಕೊಂಡಿದೆ. ಮುಂದಿನ 12 ತಿಂಗಳಲ್ಲಿ ಜಾಗತಿಕ ಬೆಳವಣಿಗೆಯ ಬಗ್ಗೆ ಸಿಇಒಗಳ ಆಶಾವಾದಿ ದೃಷ್ಟಿಕೋನದಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ದೇಶದ ಶೇ 35ರಷ್ಟು ಸಿಇಒಗಳು ಈ ಪ್ರವೃತ್ತಿ ಹೊಂದಿದ್ದಾರೆ. ಚೀನಾ (ಶೇ 28ರಷ್ಟು) ಮತ್ತು ಜರ್ಮನಿ (ಶೇ 17ರಷ್ಟು), ಬ್ರಿಟನ್ (ಶೇ 11ರಷ್ಟು), ಭಾರತ (ಶೇ 8ರಷ್ಟು) ಹಾಗೂ ಜಪಾನ್ ಆರನೇ ಸ್ಥಾನಕ್ಕೆ ಕುಸಿದಿದೆ.

ಸಮೀಕ್ಷೆಯಲ್ಲಿ ಮೂವತ್ತು ಪ್ರತಿಶತ ಸಿಇಒಗಳು ಹವಾಮಾನ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 2020ರಲ್ಲಿ 24 ಪ್ರತಿಶತ ಸಿಇಒಗಳು ಹವಾಮಾನ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹವಾಮಾನ ಬದಲಾವಣೆಯು ಬೆಳವಣಿಗೆಗೆ ಅಪಾಯವೆಂದು ಪರಿಗಣಿಸಲಾದ ಟಾಪ್ 10 ಅಂಶಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಸಿಇಒಗಳು ಸಾಂಕ್ರಾಮಿಕ ಮತ್ತು ಆರೋಗ್ಯ ಬಿಕ್ಕಟ್ಟುಗಳನ್ನು ಆರ್ಥಿಕತೆಗೆ ದೊಡ್ಡ ಅಪಾಯವೆಂದು ನೋಡುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ABOUT THE AUTHOR

...view details