ಕರ್ನಾಟಕ

karnataka

ETV Bharat / business

ಡೆಡ್ಲಿ ಕೊರೊನಾ ವಿರುದ್ಧ ವೈದ್ಯರ ಸಮರ.. ನಿರ್ಮಲಾ ಬಜೆಟ್​ನಲ್ಲಿ ಡಾಕ್ಟರ್ಸ್​ ನಿರೀಕ್ಷೆಗಳೇನು? - ಆರೋಗ್ಯ ವಲಯದ ಬಜೆಟ್​ ನಿರೀಕ್ಷೆ

ಆರೋಗ್ಯ ರಕ್ಷಣೆಯಲ್ಲಿ ಸಾರ್ವಜನಿಕರ ಖರ್ಚು ಮುಂದಿನ 3 ವರ್ಷಗಳಲ್ಲಿ ಈಗಿನ ಜಿಡಿಪಿಯ ಶೇ.1.2ರಷ್ಟರಿಂದ ಕನಿಷ್ಠ ಶೇ. 2.5ಕ್ಕೆ ಹೆಚ್ಚಾಗಬೇಕಿದೆ. ಅದರಲ್ಲಿ ಬಹುತೇಕ ಹಣ ನಮ್ಮ ಮೂಲಸೌಕರ್ಯ ಸ್ಥಾಪನೆಗೆ ಮತ್ತು ಆಧುನೀಕರಿಸಲು ಹೂಡಿಕೆ ಮಾಡಬೇಕು. 2021-22ರ ಬಜೆಟ್ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯತ್ತ ಸಾಗಬೇಕಿದೆ..

Healthcare
Healthcare

By

Published : Jan 26, 2021, 7:01 PM IST

ನವದೆಹಲಿ :ಆರೋಗ್ಯದ ವಲಯದಲ್ಲಿ ಮೂಲಸೌಕರ್ಯ ಹೆಚ್ಚಿಸಲು ಮುಂದಿನ ಬಜೆಟ್‌ನಲ್ಲಿ ಸರ್ಕಾರ ಆರೋಗ್ಯ ಸಂಬಂಧಿತ ವೆಚ್ಚದ ಪ್ರಮಾಣ ಏರಿಕೆ ಮಾಡಬೇಕು ಎಂದು ಆರೋಗ್ಯ ಸೇವಾ ಪೂರೈಕೆದಾರರು ಒತ್ತಾಯಿಸಿದ್ದಾರೆ.

ಆರೋಗ್ಯ ರಕ್ಷಣೆಯಲ್ಲಿ ಸಾರ್ವಜನಿಕರ ಖರ್ಚು ಮುಂದಿನ 3 ವರ್ಷಗಳಲ್ಲಿ ಈಗಿನ ಜಿಡಿಪಿಯ ಶೇ.1.2ರಷ್ಟರಿಂದ ಕನಿಷ್ಠ ಶೇ.2.5ಕ್ಕೆ ಹೆಚ್ಚಾಗಬೇಕಿದೆ. ಅದರಲ್ಲಿ ಬಹುತೇಕ ಹಣ ನಮ್ಮ ಮೂಲಸೌಕರ್ಯ ಸ್ಥಾಪನೆಗೆ ಮತ್ತು ಆಧುನೀಕರಿಸಲು ಹೂಡಿಕೆ ಮಾಡಬೇಕು.

2021-22ರ ಬಜೆಟ್ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯತ್ತ ಸಾಗಲಿದೆ ಎಂಬ ಆಸೆಯನ್ನು ಮಣಿಪಾಲ್ ಆಸ್ಪತ್ರೆಗಳ ಎಂಡಿ ಮತ್ತು ಸಿಇಒ ದಿಲೀಪ್ ಜೋಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರದ ತ್ವರಿತ ಮತ್ತು ಪೂರ್ವಭಾವಿ ಕ್ರಮಗಳು ಹಾಗೂ ಆರೋಗ್ಯ ಕಾರ್ಯಕರ್ತರ ದಣಿವರಿಯದ ಶ್ರಮದಿಂದಾಗಿ ದೇಶದಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗವನ್ನ ಹತ್ತೋಟಿಗೆ ತರಲು ನೆರವಾಗಿತ್ತು.

ಆದರೂ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿನ ಒಂದಿಷ್ಟು ನ್ಯೂನತೆಗಳನ್ನು ಹೊರಗೆಡವಿತು. ಅದರಲ್ಲಿ ಮುಖ್ಯವಾಗಿ ಮೂಲಸೌಕರ್ಯ ಪುನಶ್ಚೇತನದ ಅಗತ್ಯವನ್ನು ಎತ್ತಿ ತೋರಿಸಿದೆ ಎಂದರು.

2020-21ರಲ್ಲಿ ಭಾರತದ ಜಿಡಿಪಿ ಮೈನಸ್​ ಶೇ 8ಕ್ಕೆ ಕುಗ್ಗುವ ಸಾಧ್ಯತೆ: ಫಿಕ್ಕಿ ಸಮೀಕ್ಷೆ

ಭಾರತದಲ್ಲಿ ಸಾಕಷ್ಟು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳ ಕೊರತೆ ಕಂಡು ಬರುತ್ತಿದೆ. ದುಬಾರಿ ಖರ್ಚಿನಿಂದಾಗಿ ಭಾರತೀಯ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ.

ಆದ್ದರಿಂದ ಮುಂಬರುವ ದಶಕವನ್ನು ಗುರಿಯಾಗಿಸಿಕೊಂಡು ಆರೋಗ್ಯ ಬಜೆಟ್ ಗಾತ್ರ ಹೆಚ್ಚಿಸಬೇಕಾಗುತ್ತದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುವ ಸಮಯ ಇದಾಗಿದೆಎನ್ನುತ್ತಾರೆ ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಪ್ರವರ್ತಕ ಮತ್ತು ಎಂಡಿ ಅಮೀರಾ ಶಾ.

ಸ್ವಚ್ಛ ಭಾರತ, ಆಯುಷ್ಮಾನ್ ಭಾರತ, ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಮತ್ತು ಈಗ 'ಮಿಷನ್ ಕೋವಿಡ್ ಸುರಕ್ಷಾ' ಸೇರಿದಂತೆ ವಿವಿಧ ಸಮಗ್ರ ಉಪಕ್ರಮಗಳ ಮೂಲಕ ಆರೋಗ್ಯ ಕ್ಷೇತ್ರವು ಪ್ರಮುಖವಾದ ಕೇಂದ್ರ ಬಿಂದುವಾಗಿದೆ. ಈಗ ಅದು ದೇಶದ ಅಭಿವೃದ್ಧಿ ಯೋಜನೆಯ ಭಾಗವಾಗಿದೆ.

ವೈರಸ್‌ ವಿರುದ್ಧ ದೀರ್ಘಕಾಲದ ಹೋರಾಟದ ಪ್ರತಿಕ್ರಿಯೆ ಅಗತ್ಯವನ್ನು ಗಮನಲ್ಲಿರಿಸಿಕೊಂಡು ಬಜೆಟ್ ಹಂಚಿಕೆಯ ಅನುದಾನ ಮಹತ್ವದಾಗಿದೆ ಎಂದು ಎಸ್‌ಆರ್‌ಎಲ್ ಡಯಾಗ್ನೋಸ್ಟಿಕ್ಸ್ ಸಿಇಒ ಕೆ ಆನಂದ್ ಅಭಿಪ್ರಾಯಪಟ್ಟರು.

ABOUT THE AUTHOR

...view details