ಕರ್ನಾಟಕ

karnataka

ETV Bharat / business

ಬಜೆಟ್‌ 2022: ಕೇಂದ್ರದ ಬಜೆಟ್‌ನಲ್ಲಿ ಕೊರೊನಾ ವಾರಿಯರ್ಸ್‌ ನಿರೀಕ್ಷೆಗಳಿವು.. - ಬಜೆಟ್‌ನಲ್ಲಿ ಆರೋಗ್ಯ ವಲಯಕ್ಕೆ ಅನುದಾನ ಹೆಚ್ಚಳ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಒತ್ತು ನೀಡಲು ಐಎಎಂ ಒತ್ತಾಯ

Central Budget-2022 ಜಿಡಿಪಿಗೆ ಹೋಲಿಸಿಕೊಂಡರೆ ಆರೋಗ್ಯ ಬಜೆಟ್‌ ತೀರಾ ಕಡಿಮೆ ಇದೆ. ಆರೋಗ್ಯ ಬಜೆಟ್‌ನ ಅನುದಾನವನ್ನು ಹೆಚ್ಚಿಸಬೇಕೆಂದು ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್‌ ಎಂ ಲೆಲೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Health sector seeks hike in fund allocation, infra development in rural areas in Budget 2022
ಬಜೆಟ್‌ 2022: ಕೇಂದ್ರದ ಬಜೆಟ್‌ನಲ್ಲಿ ಆರೋಗ್ಯ ವಾರಿಯರ್ಸ್‌ಗಳ ನಿರೀಕ್ಷೆಗಳು ಇವು...

By

Published : Jan 31, 2022, 8:11 PM IST

Updated : Feb 1, 2022, 5:06 AM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಗ್ರಾಮೀಣ ಆರೋಗ್ಯಕ್ಕೆ ಮೂಲಸೌಕರ್ಯ ಸುಧಾರಿಸುವುದರ ಜೊತೆಗೆ ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಅನುದಾನ ಹಂಚಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ.

ಬಜೆಟ್‌ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿದ ಐಎಎಂನ ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್‌ ಎಂ ಲೆಲೆ, ತೆರಿಗೆ ಪ್ರೋತ್ಸಾಹದ ಮುಂದುವರಿಕೆ ಹಾಗೂ ಆರೋಗ್ಯ ಕ್ಷೇತ್ರದ ಮೇಲಿನ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಪ್ರಸ್ತುತ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ವಲಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ದೇಶದ ಜಿಡಿಪಿಗೆ ಹೋಲಿಸಿದರೆ ಆರೋಗ್ಯ ಇಲಾಖೆಗೆ ಬಜೆಟ್ ತುಂಬಾ ಕಡಿಮೆಯಾಗಿದೆ. ಆರೋಗ್ಯ ಬಜೆಟ್ ಅನ್ನು ಹೆಚ್ಚಿಸಬೇಕಾಗಿದೆ ಎಂದು ಡಾ. ಜಯೇಶ್ ತಿಳಿಸಿದ್ದಾರೆ.

ಹಿಂದಿನ ಬಜೆಟ್‌ನಂತೆ ಕೋವಿಡ್ 19 ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಕೇಂದ್ರವು ಖಂಡಿತವಾಗಿಯೂ ವಿಶೇಷವಾದದ್ದನ್ನು ಘೋಷಿಸುತ್ತದೆ ಎಂಬ ನಿರೀಕ್ಷೆ ಇದೆ. ದೇಶದಲ್ಲಿ ಈಗಾಗಲೇ 150 ಕೋಟಿಗೂ ಹೆಚ್ಚು ಉಚಿತ ಲಸಿಕೆಗಳನ್ನು ನೀಡಲಾಗಿದೆ. ಹದಿಹರೆಯದವರಿಗೆ ಲಸಿಕೆ ಹಾಕಲು ಅನುಮೋದನೆಯೊಂದಿಗೆ ಲಸಿಕೆಗಳನ್ನು ಉಚಿತವಾಗಿ ನೀಡಲು ಸರ್ಕಾರಕ್ಕೆ ಹೆಚ್ಚಿನ ಹಣದ ಅಗತ್ಯವಿದೆ. ಕಳೆದ ವರ್ಷ ಕೋವಿಡ್ ಲಸಿಕೆಗಾಗಿಯೇ ಸರ್ಕಾರ 35,000 ಕೋಟಿ ರೂ. 2021-22ರ ಬಜೆಟ್‌ನಲ್ಲಿ ಮೀಸಲಿಟ್ಟಿತ್ತು. 2020-21ರ ಬಜೆಟ್‌ಗೆ ಹೋಲಿಸಿದರೆ ಆರೋಗ್ಯಕ್ಕೆ ಶೇ.137ರಷ್ಟು ಅಂದ್ರೆ ಆರೋಗ್ಯ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿತ್ತು.

2022-23 ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಗಮನಿಸಬೇಕಾದ ಅಂಶಗಳನ್ನು ಸೂಚಿಸಿದ ಐಎಂಎ

  • ಕೇಂದ್ರ ಸರ್ಕಾರ ಖಾತರಿಪಡಿಸುವ ಅಗತ್ಯ ಪ್ರಾಥಮಿಕ, ಮಾಧ್ಯಮಿಕ ಹಾಗೂ ತೃತೀಯ ಆರೋಗ್ಯ ಸೇವೆಗಳಿಗೆ ಪ್ರತಿಯೊಬ್ಬ ನಾಗರಿಕನೂ ಅರ್ಹರಾಗಿರಬೇಕು
  • ಕೋವಿಡ್‌ ಸಾಂಕ್ರಾಮಿಕ ಅನುಭವವು ಆರೋಗ್ಯವನ್ನು ಮೂಲಭೂತ ಹಕ್ಕು ಎಂದು ಘೋಷಿಸಲು ಬಲವಾದ ಪ್ರಕರಣವನ್ನು ಹೊಂದಿದೆ
  • ಆಯಷ್ಮಾನ್‌ ಭಾರತ್‌ ಪಿಎಂಜೆಎವೈ ಯೋಜನೆಗೆ ಅಗತ್ಯ ವಸ್ತು, ಉಪಕರಣಗಳನ್ನು ಖಾಸಗಿ ವಲಯದಿಂದ ಖರೀದಿಯ ಕಾರ್ಯತಂತ್ರಗಳನ್ನು ರೂಪಿಸಬೇಕು. ಇದರಲ್ಲಿ ಉತ್ತಮ ಸಂಬಂಧ ವೃದ್ಧಿಸಲು ಕ್ರಮ ಕೈಗೊಳ್ಳಬೇಕು
  • ಪ್ರತಿ ತಾಲೂಕಿನಲ್ಲಿ ಏಕರೂಪವಾಗಿ ಸೇವೆ ಒದಗಿಸುವ ಭೌಗೋಳಿಕ ಕಾರ್ಯತಂತ್ರವನ್ನು ಏಕಕಾಲದಲ್ಲಿ ವಿಕಸನಗೊಳಿಸಬೇಕು
  • ಕ್ರಿಯಾತ್ಮಕ ಮತ್ತು ಪಾರದರ್ಶಕ ವೆಚ್ಚ, ಬೆಲೆ ವ್ಯವಸ್ಥೆಯನ್ನು ಮಾಡಬೇಕು
  • ಆರೋಗ್ಯ ಮಿತ್ರ ಯೋಜನೆಯಲ್ಲಿ ಭ್ರಷ್ಟಾಚಾರದ ಅಂಶಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಇರಿಸಬೇಕು
  • ಸಾರ್ವಜನಿಕ ಆರೋಗ್ಯ ನಿರ್ವಹಣೆ ಎಂದರೆ ಆರೋಗ್ಯ ಸಮಸ್ಯೆ ತಡೆಗಟ್ಟುವ ಮತ್ತು ಉತ್ತೇಜಕ ಕ್ರಮಗಳನ್ನು ಪ್ರವೇಶಿಸುವುದು ಮಾತ್ರವಲ್ಲದೆ ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಆರೋಗ್ಯ ಸೇವೆಗಳನ್ನು ಸ್ಫಟಿಕೀಕೃತ ಆರೋಗ್ಯ ವಿತರಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಸಂಘಟಿಸಬೇಕು

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 5:06 AM IST

For All Latest Updates

ABOUT THE AUTHOR

...view details