ನವದೆಹಲಿ: 2025ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ ತಲುಪಿಸುವ ಕೇಂದ್ರದ ಮಹತ್ವಾಕಾಂಕ್ಷ ಯೋಜನೆಗೆ ಆರೋಗ್ಯ ಮತ್ತು ರಫ್ತು ಉದ್ಯಮಗಳು ಪ್ರಮುಖ ಕೀಗಳು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ (ಜೆಜಿಯು) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶವು ತನ್ನ ಜನರನ್ನು ಆರೋಗ್ಯಕರವಾಗಿರಿಸಲು ತಳಮಟ್ಟದಿಂದಲೇ ಗಮನಹರಿಸಬೇಕು ಮತ್ತು ಸರಕು ಮತ್ತು ಸೇವೆಗಳ ರಫ್ತು ಸುಧಾರಿಸುವತ್ತ ಗಮನಕೊಡಬೇಕಾಗಿದೆ. 6 ರಿಂದ 24 ತಿಂಗಳ ನಡುವಿನ ಮಕ್ಕಳಿಗೆ ಅಗತ್ಯವಾದ ಪೋಷಣೆ ಸಿಗುತ್ತಿಲ್ಲ. ಶೇ 38ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಶೇ 50ರಷ್ಟು ಮಹಿಳೆಯರು ರಕ್ತಹೀನತೆಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.