ಕರ್ನಾಟಕ

karnataka

ETV Bharat / business

ಆಭರಣ ಪ್ರಿಯರು, ಜ್ಯುವೆಲರಿ ಮಾಲೀಕರಿಗೆ ಶಾಕಿಂಗ್​... ಈ ಮಾರ್ಕ್​ ಇಲ್ಲದ ಚಿನ್ನಕ್ಕೆ ಬೆಲೆಯಿಲ್ಲ!

ದೇಶದಲ್ಲಿ ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್​ ಮಾರ್ಕಿಂಗ್ ಕಡ್ಡಾಯಗೊಳಿಸುತ್ತಿದ್ದೇವೆ. ಮುಂದಿನ ವರ್ಷ ಜನವರಿ 15ರಂದು ನಾವು ಅಧಿಸೂಚನೆ ಹೊರಡಿಸುತ್ತೇವೆ. ಅನುಷ್ಠಾನಕ್ಕೆ ಒಂದು ವರ್ಷದ ಅವಧಿಯನ್ನು ನೀಡಲಾಗುವುದು. 2021ರ ಜನವರಿ 15ರಿಂದ ಅಧಿಕೃತವಾಗಿ ಈ ನಿಯಮ ಜಾರಿಗೆ ಬರಲಿದೆ. ಜ್ಯುವೆಲರಿ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಈಗಿರುವ ಆಭರಣಗಳನ್ನು ಮಾರಾಟ ಮಾಡಿ ಹಾಲ್​ಮಾರ್ಕ್​ಗೆ ಸಿದ್ಧವಾಗುವಂತೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

jewellery
ಜ್ಯುವೆಲರಿ

By

Published : Nov 29, 2019, 7:38 PM IST

ನವದೆಹಲಿ: ಅಮೂಲ್ಯವಾದ ಲೋಹದ ಶುದ್ಧತೆ ಖಚಿತಪಡಿಸಿಕೊಳ್ಳಲು 2021ರ ಜನವರಿ 15ರಿಂದ ದೇಶಾದ್ಯಂತ ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಮುಂದಿನ ವರ್ಷ ಜನವರಿ 15ರಂದು ಅಧಿಸೂಚನೆ ಹೊರಡಿಸಲಾಗುವುದು. ಒಂದು ವರ್ಷದ ನಂತರ ಈ ನಿರ್ಧಾರವು ಜಾರಿಗೆ ಬರಲಿದ್ದು, ಎಲ್ಲಾ ಆಭರಣಕಾರರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​ನಲ್ಲಿ (ಬಿಐಎಸ್) ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರಲಿದೆ. ಹಾಲ್​ ಮಾರ್ಕ್ ಹೊಂದಿದ ಚಿನ್ನಾಭರಣ ಮತ್ತು ಕಲಾಕೃತಿಗಳನ್ನು ಮಾತ್ರ ಮಾರಾಟ ಮಾಡಬೇಕಾಗುತ್ತದೆ.

ಗೋಲ್ಡ್ ಹಾಲ್​ ಮಾರ್ಕಿಂಗ್ ಅಮೂಲ್ಯ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. ಈಗಾಗಲೇ ಎಪ್ರಿಲ್ 2000ರಿಂದ ಬಿಐಎಸ್ ಚಿನ್ನದ ಆಭರಣಗಳ ಹಾಲ್​ ಮಾರ್ಕಿಂಗ್ ಯೋಜನೆ ಜಾರಿಯಲ್ಲಿದೆ. ಪ್ರಸ್ತುತ ಶೇ. 40ರಷ್ಟು ಚಿನ್ನಾಭರಣಗಳನ್ನು ಮಾತ್ರವೇ ಹಾಲ್​ ಮಾರ್ಕ್​ ಮಾಡಲಾಗುತ್ತಿದೆ.

ದೇಶದಲ್ಲಿ ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್​ ಮಾರ್ಕಿಂಗ್ ಕಡ್ಡಾಯಗೊಳಿಸುತ್ತಿದ್ದೇವೆ. ಮುಂದಿನ ವರ್ಷ ಜನವರಿ 15ರಂದು ನಾವು ಅಧಿಸೂಚನೆ ಹೊರಡಿಸುತ್ತೇವೆ. ಅನುಷ್ಠಾನಕ್ಕೆ ಒಂದು ವರ್ಷದ ಅವಧಿಯನ್ನು ನೀಡಲಾಗುವುದು. 2021ರ ಜನವರಿ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಜ್ಯುವೆಲರಿ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಈಗಿರುವ ಆಭರಣಗಳನ್ನು ಮಾರಾಟ ಮಾಡಿ ಹಾಲ್​ಮಾರ್ಕ್​ಗೆ ಸಿದ್ಧವಾಗುವಂತೆ ತಿಳಿಸಿದ್ದಾರೆ.

ಮುಖ್ಯವಾಗಿ ಸಣ್ಣ ನಗರಗಳು ಮತ್ತು ಹಳ್ಳಿಗಳಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮತ್ತು ಅವರು ಶುದ್ಧ ಚಿನ್ನಾಭರಣಗಳನ್ನು ಖರೀದಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಸ್ವಾನ್ ಸ್ಪಷ್ಟನೆ ನೀಡಿದ್ದಾರೆ.

ನಾವು ಗ್ರಾಹಕರಲ್ಲಿರುವ ಚಿನ್ನಾಭರಣಗಳನ್ನು ಮುಟ್ಟುತ್ತಿಲ್ಲ. ಹಳೆಯ ಆಭರಣಗಳನ್ನು ಸಾಮಾನ್ಯವಾಗಿ ಆಭರಣಕಾರರು ಮರುಬಳಕೆ ಮಾಡಿಕೊಳ್ಳುತ್ತಾರೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ ಹಾಲ್​ ಮಾರ್ಕಿಂಗ್ ಕೇಂದ್ರಗಳನ್ನು ತೆರೆದು ಏಕಮುಖ ವಿಂಡೋದಲ್ಲಿ ಎಲ್ಲಾ ಆಭರಣ ವ್ಯಾಪಾರಿಗಳನ್ನು ನೋಂದಾಯಿಸುವ ಗುರಿ ಇರಿಸಿಕೊಂಡಿದ್ದೇವೆ ಎಂದರು.

ABOUT THE AUTHOR

...view details