ನವದೆಹಲಿ: ಮಹಾರಾಷ್ಟ್ರ, ಬಿಹಾರ, ಅಸ್ಸೊಂ, ಪುದುಚೇರಿ ಮತ್ತು ದೆಹಲಿ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್ಟಿ ಪರಿಹಾರ ಕೊರತೆಯ ಎರಡನೇ ಹಂತವಾಗಿ 6,000 ಕೋಟಿ ರೂ. ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.
ಕೇಂದ್ರವು ಅಕ್ಟೋಬರ್ 23ರಂದು 6,000 ಕೋಟಿ ರೂ. ಅನ್ನು 16 ರಾಜ್ಯಗಳು ಹಾಗೂ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳೀಗೆ ವರ್ಗಾಯಿಸಿತ್ತು. ವರ್ಗಾವಣೆಯ ಎರಡನೇ ಹಂತದಲ್ಲಿ, ಪುದುಚೇರಿ ಅನ್ನು ಸೇರಿಸಲಾಗಿದೆ.
ಜಿಎಸ್ಟಿ ಪರಿಹಾರ ಸೆಸ್ ಕೊರತೆ ಪೂರೈಸಲು ರಾಜ್ಯ ಸರ್ಕಾರಕ್ಕೆ ವಿಶೇಷ ವಿಂಡೋ ಅಡಿಯಲ್ಲಿ ಹಣಕಾಸು ಸಚಿವಾಲಯವು ಇಂದು 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಎರಡನೇ ಹಂತವಾಗಿ ಬಿಡುಗಡೆ ಮಾಡಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.