ನವದೆಹಲಿ:ಜಿಎಸ್ಟಿ ಸಂಗ್ರಹದ ಕೊರತೆಗೆ ಸಂಬಂಧ ಕೆಲ ರಾಜ್ಯಗಳು ಹಾಗೂ ಕೇಂದ್ರ ಸರ್ಕಾದ ನಡುವಿನ ಆದಾಯ ಹಂಚಿಕೆ ಕದನ ಯಾವುದೇ ಒಮ್ಮತ ಸಾಧಿಸದೇ ಜಿಎಸ್ಟಿ ಮಂಡಳಿ ಸಭೆ ಕೊನೆಗೊಂಡಿದೆ.
ಪರೋಕ್ಷ ತೆರಿಗೆಗಳ ಬಗ್ಗೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯು ಒಂದು ವಾರದಲ್ಲಿ ಎರಡನೇ ಬಾರಿಗೆ ಸಭೆ ಸೇರಿತ್ತು. ಕೊರತೆ ನೀಗಿಸಲು ಭವಿಷ್ಯದ ಜಿಎಸ್ಟಿ ಸಂಗ್ರಹಗಳ ವಿರುದ್ಧ ಸಾಲ ಪಡೆಯುವ ರಾಜ್ಯಗಳ ಕೇಂದ್ರದ ಪ್ರಸ್ತಾಪದ ಬಗ್ಗೆ ಒಮ್ಮತ ಸಾಧಿಸುವಲ್ಲಿ ವಿಫಲವಾಗಿದೆ. ತೆರಿಗೆ ನಷ್ಟ ಪರಿಹಾರದ ಕೊರತೆಯ ಬಗ್ಗೆ ಚರ್ಚಿಸಿದೆ ಸತತ ಮೂರನೇ ಸಭೆ ಇದಾಗಿದೆ.
ಕೌನ್ಸಿಲ್ ಮುಖ್ಯಸ್ಥರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಜಿಎಸ್ಟಿ ಜಾರಿ ಹಾಗೂ ಕೋವಿಡ್ ಬಿಕ್ಕಟ್ಟಿನ ಪರಿಣಾಮ ರಾಜ್ಯಗಳಿಗೆ ಉಂಟಾಗಿರುವ ಜಿಎಸ್ಟಿ ನಷ್ಟ ನಷ್ಟಕ್ಕೆ ತಾನೇ ಸಾಲ ಪಡೆದ ಪರಿಹಾರ ವಿತರಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೇಂದ್ರ ಸರ್ಕಾರ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯಗಳು ಸಾಲ ಪಡೆಯಬೇಕು ಎಂದು ಹೇಳಿದರು.
ಕೇಂದ್ರವು ಸಾಲ ಪಡೆಯಲು ಮತ್ತು ಕೊರತೆಯನ್ನು ರಾಜ್ಯಗಳಿಗೆ ಪಾವತಿಸಲು ಸಾಧ್ಯವಿಲ್ಲ. ಇದು ಬಾಂಡ್ ಇಳುವರಿ ಹೆಚ್ಚಾಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಸರ್ಕಾರ ಮತ್ತು ಖಾಸಗಿ ವಲಯದ ವೆಚ್ಚ ಹೆಚ್ಚಳವಾಗುತ್ತದೆ. ಭವಿಷ್ಯದ ಜಿಎಸ್ಟಿ ಸ್ವೀಕೃತಿ ವಿರುದ್ಧ ರಾಜ್ಯಗಳು ಸಾಲ ಪಡೆದರೆ ಈ ರೀತಿಯಾಗುವುದಿಲ್ಲ. ಕೇಂದ್ರವು ಸೂಚಿಸಿದಂತೆ 21 ರಾಜ್ಯಗಳು ಸಾಲ ಪಡೆಯಲು ಒಪ್ಪಿಕೊಂಡಿವೆ ಎಂದರು.