ಕರ್ನಾಟಕ

karnataka

ETV Bharat / business

ಜಿಎಸ್​ಟಿ ತೆರಿಗೆದಾರರು SMS ಮೂಲಕ ಕೆಲವೇ ನಿಮಿಷಗಳಲ್ಲಿ ನಿಲ್​ ಸ್ಟೇಟ್​ಮೆಂಟ್ ಸಲ್ಲಿಸುವ ವಿಧಾನ ಹೀಗಿದೆ.. - GSTN new sms service

ಸಂಯೋಜನೆ ತೆರಿಗೆದಾರರು ಈಗ ಎಸ್‌ಎಂಎಸ್ ಮೂಲಕ ಮತ್ತು ಜಿಎಸ್‌ಟಿ ಪೋರ್ಟಲ್‌ಗೆ ಲಾಗ್ ಇನ್ ಆಗದೆ ಫಾರ್ಮ್ ಜಿಎಸ್‌ಟಿ ಸಿಎಂಪಿ -08ರಲ್ಲಿ ಎನ್‌ಐಎಲ್ ಸ್ಟೇಟ್​ಮೆಂಟ್​ ಸಲ್ಲಿಸಬಹುದು ಎಂದು ಜಿಎಸ್‌ಟಿಎನ್ ಈಟಿವಿ ಭಾರತಗೆ ಕಳುಹಿಸಿದ ಪ್ರಕಟಣೆಯಲ್ಲಿ ತಿಳಿಸಿದೆ..

GST
ಜಿಎಸ್​ಟಿ

By

Published : Oct 26, 2020, 8:47 PM IST

ನವದೆಹಲಿ :ತೆರಿಗೆ ಪಾವತಿದಾರರ ಸ್ನೇಹಿ ಕ್ರಮವಾಗಿ ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್ (ಜಿಎಸ್‌ಟಿಎನ್) ಸಂಯೋಜನೆ ತೆರಿಗೆದಾರರು ತಮ್ಮ ಫೋನ್‌ಗಳಿಂದ ಕಿರು ಸಂದೇಶ (ಎಸ್‌ಎಂಎಸ್) ಕಳುಹಿಸುವ ಮೂಲಕ ತಮ್ಮ ಜಿಎಸ್‌ಟಿ ಸ್ಟೇಟ್​​ಮೆಂಟ್​ ಸಲ್ಲಿಸುವ ಹೊಸ ಸೌಲಭ್ಯ ಪರಿಚಯಿಸಿದೆ.

ಜಿಎಸ್​​ಟಿಎನ್​ನ ಈ ಸೇವೆಯಿಂದ 17 ಲಕ್ಷಕ್ಕೂ ಅಧಿಕ ಸಂಯೋಜನೆ ತೆರಿಗೆದಾರರ ಪೈಕಿ ಐದನೇ ಒಂದು ಭಾಗದವರಿಗೆ ಇದರ ಪ್ರಯೋಜನ ದೊರೆಯಲಿದೆ. ಸಂಯೋಜನೆ ತೆರಿಗೆದಾರರು ಈಗ ಎಸ್‌ಎಂಎಸ್ ಮೂಲಕ ಮತ್ತು ಜಿಎಸ್‌ಟಿ ಪೋರ್ಟಲ್‌ಗೆ ಲಾಗ್ ಇನ್ ಆಗದೆ ಫಾರ್ಮ್ ಜಿಎಸ್‌ಟಿ ಸಿಎಂಪಿ-08ರಲ್ಲಿ ಎನ್‌ಐಎಲ್ ಸ್ಟೇಟ್​ಮೆಂಟ್​ ಸಲ್ಲಿಸಬಹುದು ಎಂದು ಜಿಎಸ್‌ಟಿಎನ್ ಈಟಿವಿ ಭಾರತಗೆ ಕಳುಹಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಯೋಜನೆ ತೆರಿಗೆದಾರರು ತಮ್ಮ ವಹಿವಾಟಿನ ಬಗ್ಗೆ ತ್ರೈಮಾಸಿಕ ಸ್ಟೇಟ್​ಮೆಂಟ್​ಗಳನ್ನು ಜಿಎಸ್​​ಟಿ-ಸಿಎಂಪಿ-08 ರೂಪದಲ್ಲಿ ಸಲ್ಲಿಸಬೇಕಾಗುತ್ತದೆ. ಈ ವರ್ಷದ ಜೂನ್‌ನಲ್ಲಿ ಜಿಎಸ್‌ಟಿಆರ್-3 ಬಿ ಮತ್ತು ಜಿಎಸ್‌ಟಿಆರ್ -1 ರಿಟರ್ನ್‌ಗಳನ್ನು ಎಸ್‌ಎಂಎಸ್ ಮೂಲಕ ಸರಳವಾಗಿ ಸಲ್ಲಿಸುವ ಸೌಲಭ್ಯವನ್ನು ಜಿಎಸ್‌ಟಿಎನ್ ಹೊರತಂದಿತ್ತು.

ಜಿಎಸ್​​ಟಿ ಪೋರ್ಟಲ್​​ನಲ್ಲಿ ನಿಲ್ ಸ್ಟೇಟ್​ಮೆಂಟ್​​ ಸಲ್ಲಿಸುವ ಸೌಲಭ್ಯವು ತೆರಿಗೆದಾರರಿಗೆ ಲಭ್ಯವಿರುತ್ತದೆ. ಎಸ್‌ಎಂಎಸ್ ಮೂಲಕ ನಿಲ್ ಫಾರ್ಮ್ ಜಿಎಸ್‌ಟಿ ಸಿಎಂಪಿ -08 ಅನ್ನು ಹೇಗೆ ಸಲ್ಲಿಸುವುದು

ಎಸ್‌ಎಂಎಸ್ ಸ್ಟೇಟ್​ಮೆಂಟ್ ಕಳುಹಿಸುವ ವಿಧಾನ

ನಿಲ್​ <ಸ್ಪೇಸ್> ಸಿ 8 <ಸ್ಪೇಸ್> ಜಿಎಸ್​​ಟಿಎನ್ <ಸ್ಪೇಸ್> ರಿಟರ್ನ್ ಅವಧಿ 14409ಗೆ ಕಳುಹಿಸಿದ

ತೆರಿಗೆದಾರರು ಸಂಬಂಧಿತ ತೆರಿಗೆ ಅವಧಿಯ ಕೊನೆಯ ತಿಂಗಳನ್ನು ಬಳಸಬೇಕಾಗುತ್ತದೆ. ಉದಾ ನಿಲ್ ಸ್ಟೇಟ್ 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿದ್ದರೆ, ಎಸ್‌ಎಂಎಸ್‌ನಲ್ಲಿ ಅವರು 062020 ಅನ್ನು ಟೈಪ್ ಮಾಡಬೇಕಾಗುತ್ತದೆ. ಅಲ್ಲಿ 06 ಎಂದರೆ ತೆರಿಗೆ ಅವಧಿಯ ಮುಕ್ತಾಯದ ತಿಂಗಳು ಮತ್ತು ಉಳಿದ ನಾಲ್ಕು ಅಂಕೆಗಳು ಹಣಕಾಸು ವರ್ಷದಾಗಿರುತ್ತವೆ.

ಎಸ್‌ಎಂಎಸ್ ಕಳುಹಿಸಿದ ನಂತರ ತೆರಿಗೆದಾರನು ರಿಟರ್ನ್ ಎಸ್‌ಎಂಎಸ್ ಮೂಲಕ ಆರು-ಅಂಕಿಯ ಪರಿಶೀಲನಾ ಕೋಡ್ ಸ್ವೀಕರಿಸುತ್ತಾನೆ. ತೆರಿಗೆದಾರನು ಪರಿಶೀಲನೆ ಕೋಡ್ ಪಡೆದು ಇನ್ನೂ ಒಂದು ಎಸ್‌ಎಂಎಸ್ ಅನ್ನು ಅದೇ ಸಂಖ್ಯೆಯ 14409ಗೆ ದೃ ಢೀಕರಣದ ಉದ್ದೇಶಕ್ಕಾಗಿ ಕಳುಹಿಸಬೇಕಾಗುತ್ತದೆ.

ಉದಾ: ತೆರಿಗೆದಾರರು 324961 ಪರಿಶೀಲನಾ ಕೋಡ್ ಅನ್ನು ಸ್ವೀಕರಿಸಿದ್ದರೆ, ಅವರು ಸಿಎನ್ಎಫ್ ಸಿ-8 324961 ನಂಥೆ ಸಿಎನ್ಎಫ್ <ಸ್ಪೇಸ್> ಸಿ 8 <ಸ್ಪೇಸ್> ವೆರಿಫಿಕೇಷನ್ ಕೋಡ್ ಎಂದು ದೃಢೀಕರಣ ಎಸ್ಎಂಎಸ್ ಅನ್ನು 14409ಗೆ ಕಳುಹಿಸಬೇಕು.

ಪರಿಶೀಲನಾ ಕೋಡ್‌ನ ಯಶಸ್ವಿ ಆದ ನಂತರ, ಜಿಎಸ್‌ಟಿ ಪೋರ್ಟಲ್ ಅಪ್ಲಿಕೇಷನ್ ಉಲ್ಲೇಖ ಸಂಖ್ಯೆ (ಎಆರ್‌ಎನ್) ಅನ್ನು ಅದೇ ಮೊಬೈಲ್ ಸಂಖ್ಯೆಗೆ ಕಳುಹಿಸುತ್ತದೆ. ತೆರಿಗೆದಾರರ ನೋಂದಾಯಿತ ಇ-ಮೇಲ್ ಐಡಿಯಲ್ಲಿ ಜಿಎಸ್​​ಟಿ ಸಿಎಂಪಿ- ಫಾರ್ಮ್​ನ ನಿಲ್ ಸ್ಟೇಟ್​ಮೆಂಟ್​ ಯಶಸ್ವಿಯಾಗಿ ಸಲ್ಲಿಸಲು ಕಳುಹಿಸಲಾಗುತ್ತೆ.

ಪರಿಶೀಲನೆ

ನಿಲ್ ಫಾರ್ಮ್ ಸಿಎಂಪಿ -08 ಅನ್ನು ಎಸ್‌ಎಂಎಸ್ ಮೂಲಕ ಯಶಸ್ವಿಯಾಗಿ ಸಲ್ಲಿಸಿದ ನಂತರ, ಫಾರ್ಮ್ ಸಿಎಂಪಿ -ರ ಸ್ಥಿತಿಯನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ‘ಫೈಲ್’ ಎಂದು ಬದಲಾಯಿಸಲಾಗುತ್ತದೆ. ತೆರಿಗೆದಾರರು ಪೋರ್ಟಲ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು. ಸಂದೇಶದ ಅನುಕ್ರಮವು ಅಪೂರ್ಣ ಅಥವಾ ತಪ್ಪಾಗಿದ್ದರೆ ಅಥವಾ ಸ್ವರೂಪಕ್ಕೆ ಅನುಗುಣವಾಗಿಲ್ಲದಿದ್ದರೆ ಫೈಲಿಂಗ್ ವಿಫಲಗೊಳ್ಳುತ್ತದೆ ಎಂದು ಜಿಎಸ್‌ಟಿಎನ್ ತಿಳಿಸಿದೆ.

ABOUT THE AUTHOR

...view details