ನವದೆಹಲಿ:ಮಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಫೆಬ್ರವರಿಯಲ್ಲಿ ಸತತ ಐದನೇ ಬಾರಿಗೆ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ ಹರಿದು ಬಂದಿದೆ.
ಫೆಬ್ರವರಿ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವನ್ನು ವರ್ಷದಿಂದ ವರ್ಷಕ್ಕೆ ಹೋಲಿಸಿದರೇ ಶೇ 7 ರಷ್ಟು ಏರಿಕೆ ಕಂಡು 1.13 ಲಕ್ಷ ಕೋಟಿ ರೂ.ಗೆ ತಲುಪಿದೆ.
ಕಳೆದ ಐದು ತಿಂಗಳಲ್ಲಿ ಜಿಎಸ್‌ಟಿ ಆದಾಯದಲ್ಲಿ ಚೇತರಿಕೆಯ ಪ್ರವೃತ್ತಿಯಲ್ಲಿ ಸಾಗುತ್ತಿದೆ. 2021ರ ಫೆಬ್ರವರಿಯ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯಕ್ಕಿಂತ ಶೇ 7ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜನವರಿ ತಿಂಗಳಲ್ಲಿ ದಾಖಲೆಯ 1.20 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹದ ಬಳಿಕ ಫೆಬ್ರವರಿಯಲ್ಲಿ 1.13 ಲಕ್ಷ ಕೋಟಿ ರೂ. ಆದಾಯ ಹರಿಬಂದಿದೆ. ಅಂತರರಾಜ್ಯ ವಹಿವಾಟಿನಿಂದ ಆದಾಯ ಇತ್ಯರ್ಥಪಡಿಸಿದ ಬಳಿಕ ಕೇಂದ್ರ ಸರ್ಕಾರವು 67,490 ಕೋಟಿ ರೂ. ಪಡೆದುಕೊಂಡಿದೆ. ರಾಜ್ಯಗಳು ಒಟ್ಟಾಗಿ ಆ ತಿಂಗಳಲ್ಲಿ 68,807 ಕೋಟಿ ರೂ. ಪಡೆದಿವೆ ಎಂದು ಹೇಳಿದೆ.
ಇದನ್ನೂ ಓದಿ: 1,939.32 ಅಂಕ ಕುಸಿದ ಬಳಿಕ 750 ಅಂಕ ಜಿಗಿದ ಸೆನ್ಸೆಕ್ಸ್!
ಜಿಎಸ್‌ಟಿ ಆದಾಯವು ಸತತವಾಗಿ ಐದನೇ ಬಾರಿಗೆ 1 ಲಕ್ಷ ಕೋಟಿ ರೂ. ದಾಟಿದೆ. ಫೆಬ್ರವರಿ ತಿಂಗಳ ಆದಾಯ ಸಂಗ್ರಹಣೆಯ ಹೊರತಾಗಿಯೂ ಸಾಂಕ್ರಾಮಿಕ ರೋಗದ ಬಳಿಕ ಮೂರನೇ ಬಾರಿಗೆ 1.1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ ದಾಟಿದೆ. ಇದು ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚನೆಯಾಗಿದೆ. ತೆರಿಗೆ ಪಾವತಿ ಅನುಸರಣೆ ಸುಧಾರಿಸಲು ತೆರಿಗೆ ಆಡಳಿತವು ಕೈಗೊಂಡ ವಿವಿಧ ಕ್ರಮಗಳ ಪರಿಣಾಮದಿಂದಾಗಿ ಇಷ್ಟೊಂದು ಪ್ರಮಾಣ ಸಂಗ್ರಹ ಹರಿದು ಬಂದಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.