ಕರ್ನಾಟಕ

karnataka

ETV Bharat / business

ಪೆಟ್ರೋಲ್​​​-ಡೀಸೆಲ್​​ ಮೇಲಿನ ತೆರಿಗೆ ಕಡಿಮೆ ಮಾಡುವ ಪ್ರಸ್ತಾಪವಿಲ್ಲ: ನಿರ್ಮಲಾ ಸೀತಾರಾಮನ್​​​​ - ಪೆಟ್ರೋಲ್ ದರ

ಸೋಮವಾರ ಸಂಸತ್​ನ ಚಳಿಗಾಲ ಅಧಿವೇಶನದಲ್ಲಿ ಕೇಳಲಾದ ಪೆಟ್ರೋಲ್​ ಮತ್ತು ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಬರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, ಜಗತ್ತಿನಲ್ಲಿ ಎಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಸ್ಥಿರವಾಗಿರುವುದಿಲ್ಲ. ಒಂದು ರೀತಿಯಲ್ಲಿ ಅವು ಈಗಾಗಲೇ ಜಿಎಸ್​​ಟಿಯ ಶೂನ್ಯ ದರ ವರ್ಗದಲ್ಲಿವೆ. ದರಗಳನ್ನು ಜಿಎಸ್​ಟಿ ಕೌನ್ಸಿಲ್ ನಿರ್ಧರಿಸಬೇಕಾಗಿದೆ ಎಂದರು.

fuel taxes
ಪೆಟ್ರೋಲ್​ ಶೂನ್ಯ ತೆರಿಗೆ

By

Published : Dec 2, 2019, 4:57 PM IST

ನವದೆಹಲಿ:ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಪ್ರಸ್ತಾಪವಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರದ ನಡೆಯನ್ನು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸಂಸತ್​ನ ಚಳಿಗಾಲ ಅಧಿವೇಶನದಲ್ಲಿ ಕೇಳಲಾದ ಪೆಟ್ರೋಲ್​ ಮತ್ತು ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಬರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, ಜಗತ್ತಿನಲ್ಲಿ ಎಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಸ್ಥಿರವಾಗಿರುವುದಿಲ್ಲ. ಒಂದು ರೀತಿಯಲ್ಲಿ ಅವು ಈಗಾಗಲೇ ಜಿಎಸ್​​ಟಿಯ ಶೂನ್ಯ ದರ ವರ್ಗದಲ್ಲಿವೆ. ದರಗಳನ್ನು ಜಿಎಸ್​ಟಿ ಕೌನ್ಸಿಲ್ ನಿರ್ಧರಿಸಬೇಕಾಗಿದೆ ಎಂದರು.

ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿರುವ ಜಿಎಸ್​​ಟಿ ಕೌನ್ಸಿಲ್‌ನಲ್ಲಿ ಎಲ್ಲಾ ರಾಜ್ಯಗಳಿಂದ ಹಣಕಾಸು ಅಥವಾ ತೆರಿಗೆ ವಿಧಿಸುವ ಉಸ್ತುವಾರಿ ಸಚಿವರು ಸದಸ್ಯರಾಗಿರುತ್ತಾರೆ. 'ಪ್ರಸ್ತುತ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಯಾವುದೇ ಹೊಸ ತೆರಿಗೆ ಪರಿಗಣಿಸಲಾಗುವುದಿಲ್ಲ' ಎಂದು ಸಚಿವರು ಹೇಳಿದರು.

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿವಿಧ ಎಕ್ಸೈಸ್​​ ಮತ್ತು ಕಸ್ಟಮ್ಸ್​ ಸುಂಕಗಳನ್ನು ವಿಧಿಸುತ್ತದೆ. ಅಲ್ಲದೆ ರಾಜ್ಯ ಸರ್ಕಾರಗಳು ಅವುಗಳ ಮೇಲೆ ತೆರಿಗೆ ಹೇರುತ್ತಿವೆ. ಸಣ್ಣ ರೈತರಿಗೆ ಡೀಸೆಲ್ ಮೇಲೆ ಸಹಾಯಧನ ನೀಡಲಾಗುತ್ತದೆಯೇ ಎಂದು ಕೇಳಿದಾಗ, 'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಹಂತಗಳಲ್ಲಿ ತೆರಿಗೆ ವಿಧಿಸುತ್ತವೆ' ಎಂದಷ್ಟೆ ಸೀತಾರಾಮನ್ ಉತ್ತರಿಸಿದರು.

ABOUT THE AUTHOR

...view details