ನವದೆಹಲಿ: ಹೊಸ 'ಸುಸಂಬದ್ಧ' ಸಾರ್ವಜನಿಕ ವಲಯದ ಉದ್ಯಮ ನೀತಿಯನ್ನು ರೂಪಿಸಲಾಗುವುದು. ಅದು ನಾಲ್ಕಕ್ಕಿಂತ ಹೆಚ್ಚಿರದ ಸಾರ್ವಜನಿಕ ಉದ್ದಿಮೆಗಳ ಕಾರ್ಯತಂತ್ರದ ಕ್ಷೇತ್ರಗಳನ್ನು ವ್ಯಾಖ್ಯಾನಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಗಾಗಿ ಸಾರ್ವಜನಿಕ ವಲಯದ ಉದ್ಯಮಗಳ ಉಪಸ್ಥಿತಿಯ ಅಗತ್ಯವಿರುವ ಕಾರ್ಯತಂತ್ರದ ಕ್ಷೇತ್ರಗಳ ಪಟ್ಟಿಯನ್ನು ತಿಳಿಸಲಾಗುವುದು ಎಂದು ಅವರು ಅಂತಿಮ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸುವಾಗ ಹೇಳಿದ್ದಾರೆ. ಕಾರ್ಯತಂತ್ರದ ಕ್ಷೇತ್ರಗಳಲ್ಲಿ, ಕನಿಷ್ಠ ಒಂದು ಉದ್ಯಮವು ಸಾರ್ವಜನಿಕ ವಲಯದಲ್ಲಿ ಉಳಿಯುತ್ತದೆ. ಆದರೆ ಖಾಸಗಿ ವಲಯಕ್ಕೂ ಅವಕಾಶವಿರುತ್ತದೆ ಎಂದಿದ್ದಾರೆ.