ನವದೆಹಲಿ: ವೃತ್ತಿ ನಿರತ ವಕೀಲರು, ಚಾರ್ಟೆಡ್ ಅಕೌಂಟೆಂಟ್ಸ್, ಎಂಜಿನಿಯರ್, ಓಲಾ, ಉಬ್ಬರ್ನಂತಹ ನೌಕರರ ದತ್ತಾಂಶ ಹಂಚಿಕೊಳ್ಳುವಂತೆ ಕೇಂದ್ರ ಸರ್ಕಾರ ಆದೇಶಿಸಲಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರದ ತೆಕ್ಕೆಗೆ ಲಾಯರ್, ಸಿಎ ಸೇರಿ 20 ಸಂಸ್ಥೆಗಳ ನೌಕರರ ಡೇಟಾ ಸಂಗ್ರಹ? - Ola cabs
ನೌಕರರ ಡೇಟಾ ಮಾಹಿತಿ ಹಂಚಿಕೊಳ್ಳಲು ಸರ್ಕಾರ ನೋಂದಾಯಿತ 20ಕ್ಕೂ ಅಧಿಕ ವೃತ್ತಿಪರ ಸಂಸ್ಥೆಗಳನ್ನು ಗುರುತಿಸಿದೆ. ಇದರಲ್ಲಿ ಓಲಾ ಮತ್ತು ಉಬ್ಬರ್ ನಂತಹ ಸ್ಟಾರ್ಟ್ಅಪ್ ಆಧಾರಿತ ಸೇವಾ ಕಂಪನಿಗಳು ಸಹ ಸೇರಿವೆ. ತಜ್ಞರು, ದೇಶದಲ್ಲಿ ಗುಣಮಟ್ಟದ ಉದ್ಯೋಗಗಳ ಮಾಹಿತಿಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ, ಭಾರತದಲ್ಲಿ ಲಭ್ಯವಿರುವ ಉದ್ಯೋಗ ಹಾಗೂ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಕೇಂದ್ರ ದತ್ತಾಂಶ ಸಂಗ್ರಹಕ್ಕೆ ಮೊರೆ ಹೋಗುತ್ತಿದೆ ಎಂದು ಹೇಳಲಾಗುತ್ತಿದೆ.
ವೃತ್ತಿಪರರನ್ನು ಪ್ರತಿನಿಧಿಸುವ ಸುಮಾರು 23 ಸಂಸ್ಥೆಗಳು ತಮ್ಮಲ್ಲಿನ ನೌಕರರ ಡೇಟಾ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು ಎಂಬ ಆದೇಶ ಹೊರಬಿಳಲಿದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಶೀಘ್ರದಲ್ಲೇ ಅಧಿಸೂಚನೆ ಹೊರಬಿಳುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೌಕರರ ಡೇಟಾ ಮಾಹಿತಿ ಹಂಚಿಕೊಳ್ಳಲು ಸರ್ಕಾರ ನೋಂದಾಯಿತ 20ಕ್ಕೂ ಅಧಿಕ ವೃತ್ತಿಪರ ಸಂಸ್ಥೆಗಳನ್ನು ಗುರುತಿಸಿದೆ. ಇದರಲ್ಲಿ ಓಲಾ ಮತ್ತು ಉಬ್ಬರ್ ನಂತಹ ಸ್ಟಾರ್ಟ್ಅಪ್ ಆಧಾರಿತ ಸೇವಾ ಕಂಪನಿಗಳು ಸಹ ಸೇರಿವೆ. ತಜ್ಞರು, ದೇಶದಲ್ಲಿ ಗುಣಮಟ್ಟದ ಉದ್ಯೋಗಗಳ ಮಾಹಿತಿಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ, ಭಾರತದಲ್ಲಿ ಲಭ್ಯವಿರುವ ಉದ್ಯೋಗ ಹಾಗೂ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಕೇಂದ್ರ ದತ್ತಾಂಶ ಸಂಗ್ರಹಕ್ಕೆ ಮೊರೆ ಹೋಗುತ್ತಿದೆ ಎಂದು ಹೇಳಲಾಗುತ್ತಿದೆ.
ಉದ್ಯೋಗಿಗಳ ಡೇಟಾ ಸಂಗ್ರಹಕ್ಕೆ ಇದುವರೆಗೂ ಮನೆ ಮತ್ತು ಉದ್ಯಮ ಸಮೀಕ್ಷೆಗಳನ್ನು ಬಳಸಿಕೊಂಡಿತ್ತು. ಈಗ ನೇರವಾಗಿ ಅಂಕಿ -ಅಂಶಗಳನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವ್ಯಾಪ್ತಿಯಲ್ಲಿನ ಲೇಬರ್ ಬ್ಯೂರೋ, ಸಾಂಖಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಮುಖೇನ ಈ ದತ್ತಾಂಶ ಸಂಗ್ರಹಿಸಲಿದೆ.