ನವದೆಹಲಿ: ಈರುಳ್ಳಿ ಬೆಳೆಗಾರರು ಹಾಗೂ ವರ್ತಕರು ಮಾರ್ಚ್ 15ರ ಬಳಿಕ ವಿದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಈರುಳ್ಳಿ ಬೆಳೆಗಾರರು, ವರ್ತಕರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ - ಸಚಿವ ಪಿಯೂಶ್ ಗೋಯಲ್
ಈರುಳ್ಳಿ ಬೆಳೆಗಾರರು ಹಾಗೂ ವರ್ತಕರು ಮಾರ್ಚ್ 15ರ ಬಳಿಕ ವಿದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.

ಈರುಳ್ಳಿ
ಕೇಂದ್ರದ ಈ ನಿರ್ಧಾರದಿಂದ ಈರುಳ್ಳಿ ಬೆಳೆಗಾರರ ಆದಾಯ ದ್ವಿಗುಣಗೊಳ್ಳಲು ಉತ್ತೇಜನ ಸಿಕ್ಕಂತಾಗಲಿದೆ ಎಂದು ಸಚಿವರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮುಂಗಾರು ಪೂರ್ವ ಬೆಳೆಯು ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಉತ್ಪಾದನೆ ಆಗಿದ್ದರಿಂದ ಆರು ತಿಂಗಳ ಹಿಂದೆ ಕೇಂದ್ರ ಸರ್ಕಾರ ರಫ್ತು ವಹಿವಾಟಿನ ಮೇಲೆ ನಿಷೇಧ ಹೇರಿತ್ತು. ಈರುಳ್ಳಿ ಬೆಲೆಯು ಇಳಿಕೆಯಾಗಿದೆ ಹಾಗೂ ಉತ್ತಮವಾದ ಫಸಲು ಸಹ ಬಂದಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.