ನವದೆಹಲಿ :ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಸ್ಥಿತಿಯಿಂದಾಗಿ ಈ ವರ್ಷ ದೇಶದ ಬಲೂನಿಂಗ್ ಕೊರತೆ* (ಅತ್ಯಧಿಕ ಖರ್ಚು) ಪ್ರಮಾಣ ಜಿಡಿಪಿಯ ಶೇ 6-7ರಷ್ಟು ಮುಟ್ಟುವ ನಿರೀಕ್ಷೆಯಿದ್ದು, ಈ ಅಭಾವ ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ಸಾಲ ಪಡೆಯಬೇಕಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಅಂದಾಜಿನ ಪ್ರಕಾರ ಹಣಕಾಸಿನ ಕೊರತೆ 7.96 ಲಕ್ಷ ಕೋಟಿ ರೂ. ಎಂದಿದ್ದಾರೆ. ಇದು 2020-21ರ ಹಣಕಾಸು ವರ್ಷದ ಜಿಡಿಪಿಯ ಶೇ.3.5ರಷ್ಟಿದೆ.
ಕೋವಿಡ್ ಸಾಂಕ್ರಾಮಿಕವು ದೇಶದಲ್ಲಿ 1,50,000 ಅಧಿಕ ಜನರನ್ನು ಮತ್ತು ವಿಶ್ವದಾದ್ಯಂತ 1.8 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಖರ್ಚು ಹೆಚ್ಚಾಗಿದೆ. ವಿನಾಯತಿ ನೀಡಬೇಕಾದ ತುರ್ತು ಪರಿಸ್ಥಿತಿಯಲ್ಲಿ ಆದಾಯ ಸಂಗ್ರಹಣೆ ತೀವ್ರವಾಗಿ ಕುಂಠಿತಗೊಂಡಿದೆ.
ಆರ್ಥಿಕ ಪುನರುಜ್ಜೀವನಕ್ಕಾಗಿ ಉದ್ಯಮ ಎದುರು ನೋಡುತ್ತಿದೆ. ಬಿಕ್ಕಟ್ಟಿನ ಪರಿಸ್ಥಿತಿಯು ಸರ್ಕಾರದ ಹಣಕಾಸಿನ ಸಾಲ ಶೇ.50ರಷ್ಟು ಹೆಚ್ಚಿಸುವಂತೆ ಮಾಡಲಿದೆ. ಬಜೆಟ್ ಅಂದಾಜು ಸುಮಾರು 8 ಲಕ್ಷ ಕೋಟಿ ರೂ.ಗಳಿಂದ 12 ಲಕ್ಷ ಕೋಟಿ ರೂ. ಏರಿಕೆಯಾಗಿದೆ.
ಅಗ್ರೋ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಡಾ.ಚರಣ್ ಸಿಂಗ್ ಅವರು 'ಈಟಿವಿ ಭಾರತ' ಜತೆ ಮಾತನಾಡಿ, ಸರ್ಕಾರವು ತನ್ನ ಕಲ್ಯಾಣ ಕಾರ್ಯಕ್ರಮ ಮತ್ತು ಇತರ ಖರ್ಚುಗಳಿಗೆ ಸಾಲ ಪಡೆಯುವ ಅಗತ್ಯವಿದೆ. ಇದು ಈ ಮೊದಲಿನಿಂದಲೂ ಎರವಲು ಪಡೆಯುತ್ತಿತ್ತು. ಆದರೆ, ಈ ಬಾರಿ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸಾಲ ಪಡೆಯಬೇಕಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದರು.
ಈ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಹಿರಿಯ ಅರ್ಥಶಾಸ್ತ್ರಜ್ಞರಾಗಿ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ನೀತಿ ಮತ್ತು ಸಾಲ ನಿರ್ವಹಣಾ ವಿಭಾಗದಲ್ಲಿ ಸಂಶೋಧನಾ ನಿರ್ದೇಶಕರಾಗಿ ಕೆಲಸ ಮಾಡಿದ ಡಾ.ಚರಣ್ ಸಿಂಗ್, ಸರ್ಕಾರವು ನೇರವಾಗಿ ಆರ್‌ಬಿಐನಿಂದ ಸಾಲ ಪಡೆಯುವುದರಿಂದ ಹಿಂದಕ್ಕೆ ಸರಿಯಬಾರದು. ಇದನ್ನು ಹಣಗಳಿಕೆಯ ಕೊರತೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಇದನ್ನೂ ಓದಿ:ಹೊಸ ಸ್ವರೂಪದಲ್ಲಿ ರಸ್ತೆಗಿಳಿಯಲಿದೆ ಟಾಟಾ ಸಫಾರಿ ಎಸ್ಯುವಿ
ಹಣಕಾಸು ಅಂತರವನ್ನು ತುಂಬಲು ಸರ್ಕಾರವು ಹಣದ ಕೊರತೆ ಆಶ್ರಯಿಸಬೇಕಾಗಿದ್ದು, ಇದಕ್ಕಾಗಿ ನಾಚಿಕೆಪಡಬಾರದು. ವರ್ಷ ಕಳೆಯುತ್ತಿದ್ದಂತೆ ಅವರು ಹೋಗಬೇಕಾಗಿರುವುದು ಇಲ್ಲಿಯೇ ಎಂದು ನಾನು ಭಾವಿಸುತ್ತೇನೆ ಎಂದು ಡಾ.ಸಿಂಗ್ ಹೇಳಿದರು.
ಹಣಗಳಿಕೆಯ ಕೊರತೆಯು ಹಣದುಬ್ಬರಕ್ಕೆ ಕಾರಣವಾಗುವುದಿಲ್ಲ