ಕರ್ನಾಟಕ

karnataka

ETV Bharat / business

ಕಂಪನಿ ಕಾಯ್ದೆ ಬಳಿಕ ಜಿಎಸ್​​ಟಿಗೆ ಕೈಹಾಕಿದ ಕೇಂದ್ರ: ತೆರಿಗೆ ಕಿರುಕುಳಕ್ಕೆ ಮುಕ್ತಿ

ಹಣಕಾಸು ಸಚಿವಾಲಯವು ಪರಿಗಣಿಸುತ್ತಿರುವ ಬದಲಾವಣೆಗಳ ಭಾಗವಾಗಿ ಸ್ಟಾಕ್​ಹೋಲ್ಡರ್ಸ್ ಜತೆ​ ಸಮಾಲೋಚನೆ ನಡೆಸಲು ಹಾಗೂ ಉದ್ಯಮದಿಂದ ಪ್ರವೇಶಾತಿ ಪಡೆಯಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ) ಅಧಿಕಾರಿಗಳ ತಂಡವೊಂದನ್ನು ರಚಿಸಿದೆ.

GST laws
ಜಿಎಸ್​ಟಿ ಕಾನೂನು

By

Published : Aug 29, 2020, 6:20 PM IST

ನವದೆಹಲಿ:ಕಂಪನಿ ಕಾನೂನು ಸುಧಾರಣೆಯ ಬಳಿಕ ವ್ಯಾಪಾರ ಸುಲಭಗೊಳಿಸಲು ಮತ್ತು ಉತ್ತಮ ವಹಿವಾಟು ಪ್ರವೇಶಾತಿ ಖಚಿತಪಡಿಸಲು ಜಿಎಸ್​​ಟಿ ಕಾನೂನಿನ ಅಡಿಯಲ್ಲಿ ವಿವಿಧ ಅಪರಾಧಗಳನ್ನು ನ್ಯಾಯಸಮ್ಮತಗೊಳಿಸಲು ಸರ್ಕಾರ ಹೊರಟಿದೆ.

ಹಣಕಾಸು ಸಚಿವಾಲಯವು ಪರಿಗಣಿಸುತ್ತಿರುವ ಬದಲಾವಣೆಗಳ ಭಾಗವಾಗಿ ಸ್ಟಾಕ್​ಹೋಲ್ಡರ್ಸ್ ಜತೆ​ ಸಮಾಲೋಚನೆ ನಡೆಸಲು ಹಾಗೂ ಉದ್ಯಮದಿಂದ ಪ್ರವೇಶಾತಿ ಪಡೆಯಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ) ಅಧಿಕಾರಿಗಳ ತಂಡವೊಂದನ್ನು ರಚಿಸಿದೆ.

ಅಂತಿಮ ಪ್ರಸ್ತಾಪವನೆಯ ಬಳಿಕ ಕ್ಯಾಬಿನೆಟ್​ ಮುಂದೆ ಕೊಡೊಯ್ಯಲಾಗುವುದು. ಸರಕು ಮತ್ತು ಸೇವಾ ತೆರಿಗೆ ನಿರ್ದೇಶನಾಲಯ (ಡಿಜಿಜಿಎಸ್‌ಟಿ) ಈಗಾಗಲೇ ಉದ್ಯಮ ಒಕ್ಕೂಟಕ್ಕೆ ಪ್ರಸ್ತಾವಿತ ಬದಲಾವಣೆಗಳ ಕುರಿತು ಮಾಹಿತಿ ನೀಡುವಂತೆ ಪತ್ರ ಬರೆದಿದೆ.

ಉದ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ಅಪರಾಧಗಳ ನಿರ್ಣಯ ಮತ್ತು ಸಂಯುಕ್ತ ನಿಬಂಧನೆಯ ವ್ಯಾಪಕ ಬಳಕೆ ಅನುಮತಿಗೆ ಜಿಎಎಸ್​ಟಿ ಕಾನೂನುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿಜಿಎಸ್​​ಟಿ ಹೇಳಿದೆ.

ವ್ಯವಹಾರ ಭಾವನೆಗಳನ್ನು ಸುಧಾರಿಸುವುದು ಮತ್ತು ಮೊಕದ್ದಮೆ ಮತ್ತು ನ್ಯಾಯಾಲಯಗಳ ಮೇಲೆ ಹೆಚ್ಚುತ್ತಿರುವ ಹೊರೆಯನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಪ್ರಸ್ತಾವಿತ ಬದಲಾವಣೆಗಳನ್ನು ಈಗಾಗಲೇ ಉದ್ಯಮವು ಸ್ವಾಗತಿಸಿದೆ. ಅದು ವ್ಯವಹಾರ ಸುಲಭಗೊಳಿಸುವ ಮತ್ತು ಅಪರಾಧಗಳನ್ನು ನಿರ್ಣಯಿಸುವುದರತ್ತ ಗಮನ ಹರಿಸುತ್ತದೆ. ಯಾವುದೇ ಅಧಿಕಾರಿಗಳ ಕೈಯಲ್ಲಿ ಕಿರುಕುಳವನ್ನು ತಡೆಯುತ್ತದೆ ಎಂದು ಭಾವಿಸಲಾಗಿದೆ.

ABOUT THE AUTHOR

...view details